ದುಬೈ: ಶಾಂತಿ ಮಾತುಕತೆಗೆ ಸಂಬಂಧಿಸಿದ ತನ್ನ ಹೊಸ ಪ್ರಸ್ತಾವನೆಯನ್ನು ಇರಾನ್ ಆಡಳಿತವು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಿದೆ ಎಂದು ಐಆರ್ಎನ್ಎ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಪ್ರಸ್ತಾವನೆಯನ್ನು ಗುರುವಾರವೇ ರವಾನಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪ್ರಸ್ತಾವನೆಯಲ್ಲಿ ಏನೆಲ್ಲ ಇದೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡದೆ, ಕೆಲ ಷರತ್ತುಗಳಿಗೆ ಅನುಗುಣವಾಗಿ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಇರಾನ್ ಈ ಮೊದಲು ಪ್ರಸ್ತಾವನೆ ಇಟ್ಟಿತ್ತು. ಅದನ್ನು ಪರಿಶೀಲಿಸುತ್ತಿರುವುದಾಗಿ, ಶ್ವೇತಭವನ ಮಂಗಳವಾರ ಹೇಳಿತ್ತು.

'ಇರಾನ್ ಪ್ರಸ್ತಾವದ ಬಗ್ಗೆ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಅಣ್ವಸ್ತ್ರಕ್ಕೆ ಸಂಬಂಧಿಸಿದ ವಿಚಾರವನ್ನು ಇತ್ಯರ್ಥಪಡಿಸದೆ ಹೊರ್ಮುಜ್ ಜಲಸಂಧಿ ಸಮಸ್ಯೆ ಬಗೆಹರಿಸಲು ಟ್ರಂಪ್ ಸಿದ್ಧರಿಲ್ಲ' ಎಂದು ಮೂಲಗಳನ್ನು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಇದೀಗ ಇರಾನ್ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದೆ.
.ಹಸಿರು ನೀತಿ ಪಾಲನೆಗೆ 60 ದಿನಗಳ ಗಡುವು: ನ್ಯಾಯಾಂಗ ನಿಂದನೆ ಮೊಕದ್ದಮೆಯ ಎಚ್ಚರಿಕೆ.ಯುದ್ಧ ಮುಂದುವರಿಸಲು ಟ್ರಂಪ್ ಆಡಳಿತಕ್ಕಿರುವ '60 ದಿನಗಳ ಗಡುವು' ಇಂದಿಗೆ ಅಂತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.