ಟೆಹರಾನ್: ಇರಾನ್ನ ನೂತನ ಪರಮೋಚ್ಚ ನಾಯಕರನ್ನಾಗಿ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾದ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯನ್ನಾಗಿ 57 ವರ್ಷದ ಮೊಜ್ತಾಬಾ ಖಮೇನಿ ಅವರನ್ನು 88 ಸದಸ್ಯರ ತಜ್ಞರ ಮಂಡಳಿ ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

‘ಇರಾನ್ನ ಹೊಸ ಪರಮೋಚ್ಚ ನಾಯಕನ ಆಯ್ಕೆಗೆ ಮತದಾನ ನಡೆದಿದ್ದು, ನಾಯಕನನ್ನು ಆಯ್ಕೆ ಮಾಡಲಾಗಿದೆ’ ಎಂದು ಮಂಡಳಿಯ ಸದಸ್ಯರಲ್ಲೊಬ್ಬರಾದ ಅಹ್ಮದ್ ಆಲಮುಲ್ಹುದಾ ಹೇಳಿದ್ದಾರೆ.

ಇರಾನ್ ಸೇನೆಯ ಸೈದ್ಧಾಂತಿಕ ವಿಭಾಗವಾದ ‘ಕ್ರಾಂತಿಕಾರಿ ಪಡೆಗಳು’ ದೇಶದ ಹೊಸ ಪರಮೋಚ್ಚ ನಾಯಕನಿಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದವು.

‘ಮೊಜ್ತಾಬಾ ಖಮೇನಿ ಅವರ ದೈವಿಕ ಆಜ್ಞೆಗಳನ್ನು ಪಾಲಿಸುವಲ್ಲಿ ಸಂಪೂರ್ಣ ವಿಧೇಯತೆ ಮತ್ತು ಸ್ವಯಂ ತ್ಯಾಗಕ್ಕೆ ಸಿದ್ಧ’ ಎಂದು ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (ಐಆರ್ಜಿಸಿ) ತಿಳಿಸಿದೆ.
.ಇರಾನ್ನ ನೂತನ ಪರಮೋಚ್ಚ ನಾಯಕನ ಆಯ್ಕೆ: ಶೀಘ್ರದಲ್ಲೇ ಹೆಸರು ಘೋಷಣೆ ಸಾಧ್ಯತೆ.
ಪುಟಿನ್ ಅಭಿನಂದನೆ

ಮಾಸ್ಕೊ/ ಬೀಜಿಂಗ್: ಇರಾನ್ನ ನೂತನ ನಾಯಕರಾಗಿ ನೇಮಕಗೊಂಡ ಮೊಜ್ತಬಾ ಖಮೇನಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಅಭಿನಂದಿಸಿದ್ದಾರೆ.

‘ಮೊಜ್ತಬಾ ಅವರು ತಮ್ಮ ತಂದೆಯ ಕೆಲಸವನ್ನು ‘ಘನತೆಯಿಂದ’ ಮುಂದುವರಿಸುತ್ತಾರೆ ಮತ್ತು ಇದೀಗ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಇರಾನಿನ ಜನರನ್ನು ಒಂದುಗೂಡಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಪುಟಿನ್ ಹೇಳಿದ್ದಾಗಿ ಅವರ ಆಡಳಿತ ಕಚೇರಿಯ ಪ್ರಕಟಣೆ ತಿಳಿಸಿದೆ.

ಆಂತರಿಕ ವಿಷಯ–ಚೀನಾ: ‘ಮೊಜ್ತಬಾ ಅವರನ್ನು ಪರಮೋಚ್ಚ ನಾಯಕರಾಗಿ ನೇಮಕ ಮಾಡಿರುವುದು ಇರಾನ್ನ ಆಂತರಿಕ ವಿಷಯವಾಗಿದ್ದು, ಯಾವುದೇ ದೇಶ ಅವರನ್ನು ಗುರಿಯಾಗಿಸುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಚೀನಾ ಹೇಳಿದೆ.

‘ಇರಾನ್ ತನ್ನ ಸಂವಿಧಾನದ ಪ್ರಕಾರ ಮೊಜ್ತಬಾ ಅವರನ್ನು ನೇಮಿಸಿದೆ. ಇರಾನ್ನ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.