ಟೆಹರಾನ್: ಇರಾನ್ ರಾಜಧಾನಿ ಟೆಹರಾನ್ ನಲ್ಲಿರುವ ತೈಲ ಸಂಗ್ರಹಣಾ ಘಟಕಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ವಾತಾವರಣದ ಮೇಲೆ ಪರಿಣಾಮ ಬೀರಿದ್ದು, ಟೆಹರಾನ್ನಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದೆ. ಜತೆಗೆ ತುಂತುರು ಮಳೆ ಸುರಿದ್ದಿದ್ದು ಜನರು ಇದನ್ನು 'ಆಮ್ಲ ಮಳೆ' ಎಂದು ಕರೆದಿದ್ದಾರೆ.

ದಾಳಿಯಿಂದಾಗಿ ಬೆಂಕಿಯ ಜ್ವಾಲೆ ಆಗಸದೆತ್ತರಕ್ಕೆ ಚಿಮ್ಮಿದ್ದು, ಬೆಳಗಿನ ಜಾವ ನಗರದಾದ್ಯಂತ ಮಬ್ಬು ಆವರಿಸಿದೆ. ಸೂರ್ಯ ಉದಯಿಸಿದರೂ ಕೂಡ ರಾತ್ರಿಯಂತೆ ಭಾಸವಾಗುತ್ತಿದೆ ಎಂದು 'ಎಎಫ್ಪಿ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ತೈಲ ಸಂಗ್ರಹಣಾ ಘಟಕಗಳ ಮೇಲೆ ಸ್ಫೋಟ ನಡೆಸಿರುವುದರಿಂದ ಅಪಾಯಕಾರಿ ಮಾಲಿನ್ಯಕಾರಕಗಳು ಗಾಳಿಯಲ್ಲಿ ಬಿಡುಗಡೆಯಾಗಿವೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಎಚ್ಚರಿಸಿದೆ.

ಸ್ಫೋಟದಿಂದಾಗಿ ಹೆಚ್ಚಿನ ಪ್ರಮಾಣದ ವಿಷಕಾರಿ ಹೈಡ್ರೋಕಾರ್ಬನ್ ಸಂಯುಕ್ತಗಳು, ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್ಗಳನ್ನು ಬಿಡುಗಡೆಯಾಗಿವೆ. ಇದು ಚರ್ಮ ಮತ್ತು ಶ್ವಾಸಕೋಶಕ್ಕೆ ತೀವ್ರ ಹಾನಿಯುಂಟು ಮಾಡಬಹುದು ಎಂದೂ ಸಂಸ್ಥೆ ಎಚ್ಚರಿಕೆ ನೀಡಿದೆ.

ಉಸಿರಾಟದ ತೊಂದರೆಗಳು ಮತ್ತು ಇತರ ಆರೋಗ್ಯ ಅಪಾಯಗಳನ್ನು ತಪ್ಪಿಸಲು ಇಲ್ಲಿನ ನಿವಾಸಿಗಳು ಮನೆಯೊಳಗೆ ಇರಬೇಕೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.