ಇಸ್ಲಾಮಾಬಾದ್/ದುಬೈ: ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಿರುವುದರಿಂದ ಎರಡನೇ ಸುತ್ತಿನ ಮಾತುಕತೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಅಮೆರಿಕವು ಮಾತುಕತೆಗೆ ಉತ್ಸುಕತೆ ತೋರಿದೆಯಾದರೂ, ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಈ ನಡುವೆ, ಇರಾನ್ನ ಸರಕು ಸಾಗಣೆ ಹಡಗನ್ನು ಅಮೆರಿಕ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿರುವುದು ಹೊಸ ಸಂಘರ್ಷದ ಆತಂಕ ಮೂಡಿಸಿದೆ. ಇರಾನ್ನ ಬಂದರುಗಳ ಮೇಲೆ ತಾನು ವಿಧಿಸಿರುವ ದಿಗ್ಬಂಧನವನ್ನು ಉಲ್ಲಂಘಿಸಿರುವುದಕ್ಕೆ ಹಡಗನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ. ಈ ಕ್ರಮಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದ್ದು, ಹೊರ್ಮುಜ್ ಜಲಸಂಧಿ ಮೇಲಿನ ತನ್ನ ಹಿಡಿತ ಬಿಗಿಗೊಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವಂತೆ ಎರಡನೇ ಸುತ್ತಿನ ಮಾತುಕತೆಯು ಇಸ್ಲಾಮಾಬಾದ್ನಲ್ಲಿ ಮಂಗಳವಾರ ಬೆಳಿಗ್ಗೆ ಆರಂಭವಾಗಬೇಕು. ‘ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗವು ಶೀಘ್ರದಲ್ಲೇ ಪಾಕಿಸ್ತಾನ ತಲುಪಲಿದೆ’ ಎಂದು ಟ್ರಂಪ್, ಸೋಮವಾರ ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಶಾಂತಿ ಒಪ್ಪಂದ ಸಾಧ್ಯವಾದರೆ ಇರಾನ್ನ ನಾಯಕರನ್ನು ಸ್ವತಃ ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದೂ ಹೇಳಿದ್ದಾರೆ. ಆದರೆ, ಮಾತುಕತೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇರಾನ್, ಸೋಮವಾರ ರಾತ್ರಿಯವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

‘ಅಮೆರಿಕದ ಜತೆ ಎರಡನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳುವ ತೀರ್ಮಾನವನ್ನು ಇದುವರೆಗೆ ಮಾಡಿಲ್ಲ’ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಖಾಯಿ ಹೇಳಿದ್ದಾರೆ.

‘ಅಮೆರಿಕದ ಜತೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದನ್ನು ‘ಸಕಾರಾತ್ಮಕ’ವಾಗಿ ಪರಿಶೀಲಿಸಲಾಗುತ್ತಿದೆಯಾದರೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಇರಾನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಇರಾನ್ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

‘ಇರಾನ್ನ ಹಡಗುಗಳು ಮತ್ತು ಬಂದರುಗಳಿಗೆ ಅಮೆರಿಕ ಬೆದರಿಕೆ ಹಾಕಿರುವುದು ಯೋಜಿತ ಮಾತುಕತೆಗೆ ಮುನ್ನ ಆ ದೇಶದ ‘ಕಪಟತನ’ವನ್ನು ಬಯಲು ಮಾಡಿದೆ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಇರಾನ್ ಜತೆಗೆ ಎರಡನೇ ಸುತ್ತಿನ ಮಾತುಕತೆ ನಡೆಯುವುದನ್ನು ಭಾನುವಾರ ಖಚಿತಪಡಿಸಿದ್ದರು. ‘ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ ತೆರಳಲಿದೆ’ ಎಂದಿದ್ದರು.

ಪಾಕ್ ಪ್ರಯತ್ನ: ಎರಡು ವಾರಗಳ ಕದನ ವಿರಾಮ ಬುಧವಾರ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಮತ್ತೊಂದು ಸುತ್ತಿನ ಮಾತುಕತೆ ಆಯೋಜಿಸುವ ಪ್ರಯತ್ನವನ್ನು ಪಾಕಿಸ್ತಾನ ಮುಂದುವರಿಸಿದೆ. ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನವು ಎರಡೂ ದೇಶಗಳ ಪ್ರತಿನಿಧಿಗಳ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು, ಶಾಂತಿ ಮಾತುಕತೆಯನ್ನು ಮಂಗಳವಾರ ಆರಂಭಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಹೊರ್ಮುಜ್: ನಿರ್ಬಂಧ ಮುಂದುವರಿಕೆ

ಹೊರ್ಮುಜ್ನಲ್ಲಿ ಹಡಗುಗಳ ಸಂಚಾರದ ಮೇಲೆ ಇರಾನ್ ಹೇರಿರುವ ನಿರ್ಬಂಧ ಮುಂದುವರಿದಿದೆ. ಸೋಮವಾರ ಮೂರು ಹಡಗುಗಳು ಮಾತ್ರ ಜಲಸಂಧಿಯನ್ನು ದಾಟಿವೆ ಎಂದು ಉಪಗ್ರಹಗಳ ನೆರವಿನಿಂದ ಹಡಗುಗಳ ಸಂಚಾರದ ದತ್ತಾಂಶ ವಿಶ್ಲೇಷಣೆ ಮಾಡುವ ಸಿನ್ಮ್ಯಾಕ್ಸ್ ತಿಳಿಸಿದೆ. ತನ್ನ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನಕ್ಕೆ ಪ್ರತಿಯಾಗಿ ಇರಾನ್ ಸೇನೆ ಹೊರ್ಮುಜ್ ಜಲಸಂಧಿಯನ್ನು ಶನಿವಾರದಿಂದ ಸಂಪೂರ್ಣ ಮುಚ್ಚಿದೆ.

‘ಮುನೀರ್ ಸಲಹೆ ಪರಿಗಣಿಸಲಿರುವ ಟ್ರಂಪ್’

ಇಸ್ಲಾಮಾಬಾದ್: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಶಾಂತಿ ಮಾತುಕತೆಗೆ ಅಡ್ಡಿಯಾಗಿರುವ ಹೊರ್ಮುಜ್ ಜಲಸಂಧಿಯ ಕುರಿತು ಮುನೀರ್ ಅವರ ಸಲಹೆಯನ್ನು ಪರಿಗಣಿಸುವುದಾಗಿ ಟ್ರಂಪ್ ಈ ಸಂದರ್ಭದಲ್ಲಿ ಹೇಳಿದ್ದಾರೆ’ ಎಂದು ಪಾಕಿಸ್ತಾನದ ಸೇನಾ ಮೂಲಗಳು ಸೋಮವಾರ ಹೇಳಿವೆ.

ದಿನದ ಬೆಳವಣಿಗೆ

* ಹೊರ್ಮುಜ್ ಜಲಸಂಧಿ ‘ಅಂತರರಾಷ್ಟ್ರೀಯ ಹಡಗು ಮಾರ್ಗ’ ಆಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಚೀನಾ ಹಾಗೂ ಬ್ರಿಟನ್ ಒತ್ತಾಯಿಸಿವೆ

* ಇರಾನ್ ಮೇಲೆ ದಾಳಿ ನಡೆಸು ವಂತೆ ಇಸ್ರೇಲ್, ಅಮೆರಿಕದ ಮನವೊಲಿಸಿರಲಿಲ್ಲ
ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ

* ಇರಾನ್ ಜತೆ ನಂಟು ಹೊಂದಿರುವ ಆರೋಪದಲ್ಲಿ ಸಂಘಟನೆಯೊಂದರ ಕೆಲವು ಸದಸ್ಯರನ್ನು ಯುಎಇ ಪೊಲೀಸರು ಸೋಮವಾರ ಬಂಧಿಸಿದ್ದಾರೆ

ಪ್ರತಿರೋಧ ತೋರದ ಇರಾನ್ ಸೇನೆ

ಒಮಾನ್ ಕೊಲ್ಲಿಯಲ್ಲಿ ಸಂಚರಿಸುತ್ತಿದ್ದ ಇರಾನ್ನ ಹಡಗನ್ನು ಅಮೆರಿಕದ ನೌಕಾಪಡೆ ಯೋಧರು ತಮ್ಮ ವಶಕ್ಕೆ ತೆಗೆದುಕೊಳ್ಳುವಾಗ ಇರಾನ್ ಸೇನೆ ಯಾವುದೇ ಪ್ರತಿರೋಧ ಒಡ್ಡಲಿಲ್ಲ. ಅಮೆರಿಕದ ಸೈನಿಕರ ವಿರುದ್ಧ ಹೋರಾಡದೆ ಇರುವುದಕ್ಕೆ ಇರಾನ್ ಸೇನೆ ಮತ್ತು ಅರೆಸೇನಾ ಪಡೆಗಳ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುವ ‘ಖಾತಮ್ ಅಲ್ ಅಂಬಿಯಾ’ ಕೇಂದ್ರ ಕಚೇರಿ ವಿವರಣೆ ನೀಡಿದೆ.

‘ತೌಸ್ಕಾ’ ಹೆಸರಿನ ಹಡಗಿನಲ್ಲಿ ಸಿಬ್ಬಂದಿಯ ಜತೆ ಅವರ ಕುಟುಂಬದ ಸದಸ್ಯರೂ ಇದ್ದ ಕಾರಣ ಇರಾನ್ ಸೇನೆ ಪ್ರತಿದಾಳಿ ನಡೆಸದೆ ಸಂಯಮ ವಹಿಸಿದೆ ಎಂದಿದೆ.

‘ಹಡಗಿನ ಸಿಬ್ಬಂದಿಯ ಕೆಲವು ಕುಟುಂಬ ಸದಸ್ಯರು ಇದ್ದು, ಅವರ ಜೀವಕ್ಕೆ ಅಪಾಯ ಎದುರಾಗಬಹುದಿತ್ತು. ಅವರ ಸುರಕ್ಷತೆ ಖಾತರಿಪಡಿಸಿಕೊಳ್ಳುವುದು ಮುಖ್ಯವಾಗಿತ್ತು’ ಎಂದು ಹೇಳಿದೆ. ‘ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಅಮೆರಿಕ ಸೇನೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.