ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ವಿಸ್ತರಿಸಿದ ಬೆನ್ನಲ್ಲೇ ಹೊರ್ಮುಜ್ ಜಲಸಂಧಿಯನ್ನು ದಾಟಲು ಯತ್ನಿಸಿದ ಎರಡು ಹಡಗುಗಳನ್ನು ಬುಧವಾರ ಇರಾನ್ ವಶಪಡಿಸಿಕೊಂಡಿದೆ.

ಇರಾನ್ ದೇಶದ ರೆವಲ್ಯೂಷನರಿ ಗಾರ್ಡ್ಸ್ ನೌಕೆಯು ಬುಧವಾರ ಬೆಳಗ್ಗೆ ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸಿದಾಗ ಅವುಗಳನ್ನು ವಶಪಡಿಸಿಕೊಂಡಿದೆ. ಈ ಹಡಗುಗಳನ್ನು ಇರಾನ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ಇರಾನ್ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ರೇಲ್ಗೆ ಸೇರಿದ ಎಂಎಸ್ಸಿ ಫ್ರಾನ್ಸ್ಸಿಕ ಎಂಬ ಹಡಗನ್ನು ವಶಕ್ಕೆ ಪಡೆಯಲಾಗಿದೆ. ಇಪಮೊನಾಡಸ್ ಎಂಬ ಮತ್ತೊಂದು ಹಡಗನ್ನು ವಶಕ್ಕೆ ಪಡೆಯಲಾಗಿದೆ. ಇದು ಯಾವ ದೇಶದ್ದು ಎಂಬುದು ತಿಳಿದು ಬಂದಿಲ್ಲ. ಈ ಹಡಗು ನಮ್ಮ ಕಡಲ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿತ್ತು ಎಂದು ಇರಾನ್ ಆರೋಪಿಸಿದೆ.

ನಾಯಕತ್ವ ಇಲ್ಲದ ಇರಾನ್ ಮೇಲಿನ ಯುದ್ಧವನ್ನು ಕೊನೆಗೊಳಿಸಲು ಅವರಿಗೆ ಏಕೀಕೃತ ಪ್ರಸ್ತಾವನೆಯೊಂದಿಗೆ ಬರಲು ಸಮಯ ನೀಡುವ ಉದ್ದೇಶದಿಂದ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ಟ್ರಂಪ್ ವಿಸ್ತರಿಸಿದ್ದಾರೆ.

ಏಪ್ರಿಲ್ 8ರಂದು ಘೋಷಿಸಲಾಗಿದ್ದ ಎರಡು ವಾರಗಳ ಕದನ ವಿರಾಮ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಟ್ರಂಪ್ ಅವರಿಂದ ಈ ಘೋಷಣೆಯಾಗಿದೆ.

ಈ ಪರಿಣಾಮ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ ನೇತೃತ್ವದ ನಿಯೋಗ ಇರಾನ್ ಪ್ರತಿನಿಧಿಗಳೊಂದಿಗೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಬರಬೇಕಿರುವುದು ವಿಳಂಬವಾಗಿದೆ.

ಇರಾನ್ ತನ್ನ ಅನುಮತಿಯಿಲ್ಲದೆ ಸಂಚರಿಸುವ ಹಡಗುಗಳ ಮೇಲೆ ದಾಳಿ ಮಾಡುವ ಮೂಲಕ ಹೊರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಬಂದ್ ಮಾಡಿದೆ.

ಇದರಿಂದ ಜಾಗತಿಕ ತೈಲ ಮತ್ತು ಎಲ್ಪಿಜಿ ಅನಿಲದ ಐದನೇ ಒಂದು ಭಾಗದಷ್ಟು ಪೂರೈಕೆ ಇದೇ ಜಲಮಾರ್ಗದ ಮೂಲಕ ನಡೆಯುತ್ತದೆ. ಹೀಗಾಗಿ ಇರಾನ್ನ ಈ ಕ್ರಮ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಆತಂಕ ಮೂಡಿಸಿದೆ.
.ಹೊರ್ಮುಜ್ ಜಲಸಂಧಿಯನ್ನು ದಾಟಿದ ಭಾರತದ 10 ಹಡಗುಗಳು: ವಿದೇಶಾಂಗ ಸಚಿವಾಲಯ.ಹೊರ್ಮುಜ್ ತೆರೆಸುವುದು ಸೇರಿ ಶತ್ರುಗಳ ಎಲ್ಲ ಯೋಜನೆ ವಿಫಲ: ಇರಾನ್ ಸಂಸತ್ ಸ್ಪೀಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.