ಟೆಹರಾನ್: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇರಾನ್ ನಾಯಕರನ್ನು ಮತ್ತೊಮ್ಮೆ ಶಾಂತಿ ಮಾತುಕತೆಗೆ ಕರೆತರುವ ಪ್ರಯತ್ನವನ್ನು ಪಾಕಿಸ್ತಾನ ಮುಂದುವರಿಸಿದೆ. ಈ ಹೊತ್ತಿನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನಿರ್ದಿಷ್ಟಾವಧಿಗೆ ಕದನ ವಿರಾಮವನ್ನು ವಿಸ್ತರಿಸಿದ್ದಾರೆ.

ಏತನ್ಮಧ್ಯೆ ಈ ಕುರಿತು ಪ್ರತಿಕ್ರಿಯಿಸಿರುವ ಇರಾನ್, ನಮ್ಮ ಬಂದರು ಹಾಗೂ ನೌಕೆಗಳಿಗೆ ಅಮೆರಿಕವು ನಿರ್ಬಂಧ ತೆರವುಗೊಳಿಸಿದರಷ್ಟೇ ಸಂಪೂರ್ಣ ಕದನ ವಿರಾಮ ಸಾಧ್ಯ ಎಂದು ಸ್ಪಷ್ಟಪಡಿಸಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಲಿಬಫ್ ಅವರು ಈ ಸಂಬಂಧ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ಸಾಗರದಲ್ಲಿ ದಿಗ್ಬಂಧನ ಹೇರುವುದು ನಿಲ್ಲಿಸಿದರೆ, ವಿಶ್ವ ಆರ್ಥಿಕತೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ದಾಳಿ ಮುಂದುವರಿಸದಿದ್ದರೆ ಹಾಗೂ ಯುದ್ಧೋನ್ಮಾದವನ್ನು ನಿಲ್ಲಿಸಿದರಷ್ಟೇ ಸಂಪೂರ್ಣ ಕದನ ವಿರಾಮ ಅರ್ಥಪೂರ್ಣವಾಗಿರುತ್ತದೆ. ಕದನ ವಿರಾಮದ ಉಲ್ಲಂಘನೆ ಆಗುತ್ತಿದ್ದರೂ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು ಸಾಧ್ಯವೇ ಇಲ್ಲ' ಎಂದು ತಮ್ಮ ನಿಲುವು ತಿಳಿಸಿದ್ದಾರೆ.
.ಇರಾನ್ ನಂಟು ಹೊಂದಿರುವ ಜಗತ್ತಿನ ಯಾವುದೇ ದೇಶದ ಹಡಗನ್ನು ನಿರ್ಬಂಧಿಸುತ್ತಾ ಅಮೆರಿಕ?.ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧ; ಶೀತಲ ಸಂಘರ್ಷದತ್ತ ಸಾಗಲು 3 ಕಾರಣಗಳು.
'ಸೇನಾ ದಾಳಿಗಳು ಅಥವಾ ಬೆದರಿಕೆಯೊಡ್ಡುವ ಮೂಲಕ ಗುರಿ ಸಾಧಿಸಲು ಅವರಿಗೆ ಸಾಧ್ಯವಾಗುವುದಿಲ್ಲ' ಎಂದು ತಿವಿದಿರುವ ಅವರು, 'ಇರಾನ್ ರಾಷ್ಟ್ರೀಯ ಹಕ್ಕುಗಳನ್ನು ಗೌರವಿಸುವುದಷ್ಟೇ ಈಗ ಅವರ ಮುಂದಿರುವ ದಾರಿ' ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಅವಧಿ ವಿಸ್ತರಿಸಿದ್ದ ಟ್ರಂಪ್
ಪಾಕಿಸ್ತಾನದಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಇರಾನ್ ಹೇಳಿದೆ. ಏತನ್ಮಧ್ಯೆ, ಕದನ ವಿರಾಮವನ್ನು ವಿಸ್ತರಿಸುತ್ತಿರುವುದಾಗಿ ಟ್ರಂಪ್ ಬುಧವಾರ ಘೋಷಿಸಿದ್ದಾರೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ಮನವಿಯಂತೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.
.ಇರಾನ್ ಜೊತೆಗಿನ ಯುದ್ಧ ವಿರಾಮ ಅನಿರ್ದಿಷ್ಟಾವಧಿಗೆ ವಿಸ್ತರಣೆ: ಟ್ರಂಪ್.ಕದನ ವಿರಾಮ ವಿಸ್ತರಿಸಿದ ಟ್ರಂಪ್: ಹೊರ್ಮುಜ್ನಲ್ಲಿ ಹಡುಗುಗಳ ಮೇಲೆ ಇರಾನ್ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.