ಟೆಹರಾನ್: ಇರಾನ್ ಸೇನೆ ಹೊಡೆದುರುಳಿಸಿದ F–15 ಯುದ್ಧ ವಿಮಾನದ ಮತ್ತೊಬ್ಬ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.

ಅಮೆರಿಕದ ಶಕ್ತಿಶಾಲಿ ಯುದ್ಧ ವಿಮಾನ F–15 ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಶುಕ್ರವಾರ ಹೇಳಿಕೊಂಡಿತ್ತು. ಅದನ್ನು ಶ್ವೇತಭವನದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಕೆಳಕ್ಕೆ ಜಿಗಿದಿದ್ದರು. ಆ ಪೈಕಿ ಒಬ್ಬರನ್ನು ಸೇನೆಯ ವಿಶೇಷ ಕಮಾಂಡೊಗಳು ರಕ್ಷಿಸಿದ್ದಾರೆ. ಮತ್ತೊಬ್ಬ ಪೈಲಟ್ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಇರಾನ್ ಹಾಗೂ ಅಮೆರಿಕ ಪೈಪೋಟಿಗೆ ಇಳಿದಿವೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದೀಗ ಸ್ವತಃ ಟ್ರಂಪ್ ಅವರೇ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
.ಪತನಗೊಂಡ ಎಫ್–15 ವಿಮಾನದ ಸಿಬ್ಬಂದಿ ಪತ್ತೆಗೆ ಇರಾನ್, ಅಮೆರಿಕದಿಂದ ಪೈಪೋಟಿ.ಅಮೆರಿಕ ಯುದ್ಧ ವಿಮಾನದ ಪೈಲಟ್ಗಾಗಿ ಮುಂದುವರಿದ ಶೋಧ.
'ಅವರು ನಮಗೆ ಸಿಕ್ಕಿದ್ದಾರೆ! ನಮ್ಮ ಸಿಬ್ಬಂದಿಗಾಗಿ, ಅಮೆರಿಕ ಸೇನೆಯು ದೇಶದ ಇತಿಹಾಸದಲ್ಲೇ ಅತ್ಯಂತ ಸಾಹಸಮಯ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಅವರು ಈಗ ಸುರಕ್ಷಿತ ಹಾಗೂ ಸದೃಢವಾಗಿದ್ದಾರೆ ಎಂಬುದನ್ನು ತಿಳಿಸಲು ರೋಮಾಂಚನವಾಗುತ್ತಿದೆ' ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಶಿಯಲ್ನಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ದಾಳಿ ವೇಳೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆಯಾಗಿದ್ದರು.

ಇದರಿಂದ ಕೆರಳಿದ ಇರಾನ್ ಪತ್ರಿದಾಳಿಗೆ ಇಳಿದಿದೆ. ಅಮೆರಿಕ, ಇಸ್ರೇಲ್ ವಿರುದ್ಧವಷ್ಟೇ ಅಲ್ಲದೆ, ಅವುಗಳ ಮಿತ್ರ ರಾಷ್ಟ್ರಗಳ ಮೇಲೂ ಕ್ಷಿಪಣಿ, ಡ್ರೋನ್ ದಾಳಿ ನಡೆಯುತ್ತಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.