ವಾಷಿಂಗ್ಟನ್ : ‘ದಶಕಗಳ ಕಾಲ ಇರಾನ್ ಪರಮಾಣು ಹೊಂದುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

‘ನಮ್ಮಲ್ಲಿ ಸಶಕ್ತವಾದ ಹೇಳಿಕೆ ಇದೆ. ಇರಾನ್ನವರು 20 ವರ್ಷಗಳಿಗಿಂತ ಹೆಚ್ಚು ಕಾಲ ಪರಮಾಣು ಶಸ್ತ್ರಾಸ್ತ್ರ ಹೊಂದಿರುವುದಿಲ್ಲ ಎಂದಿದ್ದಾರೆ’ ಎಂದು ತಿಳಿಸಿದ್ದಾರೆ.

‘ಇರಾನ್ ಜೊತೆಗೆ ಒಪ್ಪಂದವು ಅತ್ಯಂತ ಸನ್ನಿಹಿತವಾಗಿದೆ. ಸಮೃದ್ಧ ಪ್ರಮಾಣದ ಯುರೇನಿಯಂ ಹಸ್ತಾಂತರಿಸುವುದು ಸೇರಿದಂತೆ ಬಹುತೇಕ ಬೇಡಿಕೆಗಳಿಗೆ ಇರಾನ್ ಒಪ್ಪಿಗೆ ಸೂಚಿಸಿದೆ’ ಎಂದು ಶ್ವೇತಭವನದ ಮುಂದೆ ತಿಳಿಸಿದ್ದಾರೆ.

‘ಇರಾನ್ ಜೊತೆಗಿನ ಒಪ್ಪಂದ ಏರ್ಪಟ್ಟರೆ, ಅದಕ್ಕೆ ಸಹಿ ಹಾಕಲು ನಾನೇ ಇಸ್ಲಾಮಾಬಾದ್ಗೆ ತೆರಳಬಹುದು’ ಎಂದು ಹೇಳಿದ್ದಾರೆ.

ಇರಾನ್ ಜೊತೆಗಿನ ಕದನವಿರಾಮವು ಇದೇ ಏಪ್ರಿಲ್ 21ಕ್ಕೆ ಕೊನೆಗೊಳ್ಳಲಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆ ಕಾಣುತ್ತಿಲ್ಲ. ಅದಕ್ಕೂ ಮುಂಚಿತವಾಗಿಯೇ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ.

ಅಮೆರಿಕ ಹಾಗೂ ಇರಾನ್ ನಡುವಿನ ಸಭೆಯು ಈ ವಾರಾಂತ್ಯದಲ್ಲಿ ನಡೆಯಲಿದೆ.

‘ಇರಾನ್ ಜೊತೆಗೆ ಒಪ್ಪಂದ ಏರ್ಪಡದಿದ್ದರೆ, ಯುದ್ಧವು ಮತ್ತೆ ಆರಂಭಗೊಳ್ಳಲಿದೆ. ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನಿರ್ಬಂಧವೂ ಮುಂದುವರಿಯಲಿದೆ’ ಎಂದು ಟ್ರಂಪ್ ಈ ವೇಳೆ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.