ಟೆಹರಾನ್: ತನ್ನ ಟ್ಯಾಂಕರ್ಗಳ ಮೇಲೆ ಅಮೆರಿಕ ಗುಂಡಿನ ದಾಳಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಇರಾನ್, ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕದ ನೆಲೆಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಸಿದೆ.

ಈ ಕುರಿತು ಇರಾನ್ನ ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಉದ್ವಿಗ್ನತೆ ಹೆಚ್ಚಾಗಿದೆ.

'ಇರಾನ್ನ ಟ್ಯಾಂಕರ್ಗಳು ಮತ್ತು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದರೆ ಅದಕ್ಕೆ ಪ್ರತಿಯಾಗಿ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆಸಬೇಕಾಗುತ್ತದೆ' ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬೆದರಿಕೆ ಹಾಕಿದೆ.

ಒಮಾನ್ ಕೊಲ್ಲಿಯಲ್ಲಿ ಇರಾನ್ ಧ್ವಜ ಹೊಂದಿದ್ದ ಎರಡು ಟ್ಯಾಂಕರ್ಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು.

ಮತ್ತೊಂದೆಡೆ ಅಮೆರಿಕ ಮುಂದಿಟ್ಟಿರುವ ಹೊಸ ಪ್ರಸ್ತಾವದ ಕುರಿತು ಇರಾನ್ನಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. 'ಇರಾನ್ನ ಉತ್ತರಕ್ಕಾಗಿ ಕಾಯುತ್ತಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಇರಾನ್ ನಿಯಂತ್ರಣ ಹೇರಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

ಆದರೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಟರ್ಕಿಯ ವಿದೇಶಾಂಗ ಸಚಿವ ಹಕಾದ್ ಫಿದಾನ್ ಜೊತೆಗಿನ ಮಾತುಕತೆ ವೇಳೆ ಅಮೆರಿಕದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಪಡೆಗಳು ನಡೆಸಿರುವ ಸಂಘರ್ಷ, ನಿರಂತರ ಕದನ ವಿರಾಮ ಉಲ್ಲಂಘನೆಯಿಂದ ರಾಜತಾಂತ್ರಿಕ ಮಾರ್ಗದ ಕುರಿತಂತೆ ಅಮೆರಿಕ ಹೊಂದಿರುವ ಉದ್ದೇಶ ಹಾಗೂ ಗಂಭೀರತೆಯ ಕುರಿತು ಅನುಮಾನ ಮೂಡಿಸಿದೆ’ ಎಂದು ಅರಾಘ್ಚಿ ತಿಳಿಸಿದ್ದಾರೆ ಎಂದು ‘ಐಎಸ್ಎನ್ಎ’ ಸುದ್ದಿಸಂಸ್ಥೆ ವರದಿ ಮಾಡಿದೆ.
.ಹೊರ್ಮುಜ್ ಬಳಿ ಅಮೆರಿಕ ದಾಳಿಯಲ್ಲಿ 10 ನಾವಿಕರಿಗೆ ಗಾಯ, 5 ಜನ ಕಣ್ಮರೆ: ಇರಾನ್ .ಹೊರ್ಮುಜ್ ತೆರೆದು, ಮಾತುಕತೆಗೆ 30 ದಿನಗಳ ಯುದ್ಧ ವಿರಾಮ: ಅಮರಿಕ–ಇರಾನ್ ಚರ್ಚೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.