ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

‘ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವ ಸಾಧ್ಯತೆ ಇದೆ’ ಎಂದು ಇರಾನ್ ಸೇನೆ ಶನಿವಾರ ಹೇಳಿದೆ. ‘ದೇಶದ ಮೇಲೆ ನಡೆಯುವ ಯಾವುದೇ ಹೊಸ ಆಕ್ರಮಣ ಅಥವಾ ಅಮೆರಿಕನ್ನರು ತೋರುವ ಅವಿವೇಕದ ನಡೆಗೆ ಎದಿರೇಟು ನೀಡಲು ಇರಾನ್ ಸಂಪೂರ್ಣ ಸನ್ನದ್ಧವಾಗಿದೆ’ ಎಂದೂ ಹೇಳಿದೆ.
.ಅಮೆರಿಕ-ಇಸ್ರೇಲ್ ಪಡೆಗಳ ವಿರುದ್ಧ ಮತ್ತೆ ಯುದ್ಧ ಸಾಧ್ಯತೆ: ಇರಾನ್.
65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪುಣೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
.ಬಾಲಕಿ ಅತ್ಯಾಚಾರ, ಕೊಲೆ ಖಂಡಿಸಿ ಪುಣೆ-ಬೆಂಗಳೂರು ಹೈವೇ ನಾಲ್ಕು ತಾಸು ಬಂದ್!.
ನಗರದ ವರ್ಲಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಚಿವ, ಬಿಜೆಪಿ ನಾಯಕರು, ಕಾರ್ಯಕರ್ತರನ್ನು ತರಾಟೆ ತೆಗೆದುಕೊಂಡು ಸುದ್ದಿಯಾಗಿದ್ದ ಮಹಿಳೆ ಟೀನಾ ಚೌಧರಿ ಅವರು, 'ಜನಸಾಮಾನ್ಯರನ್ನು ಕಡೆಗಣಿಸುವ ಪ್ರತಿಯೊಂದು ಪಕ್ಷದವವರೂ ತಪ್ಪಿತಸ್ಥರೇ' ಎಂದು ಹೇಳಿದ್ದಾರೆ.
.ನಾನೇಕೆ ನಿಮ್ಮ ಧ್ವನಿಯಾಗಲಿ: ಸಚಿವನ ಬೆವರಿಳಿಸಿದ್ದ ಮಹಿಳೆ ಹೀಗೆ ಹೇಳಿದ್ದೇಕೆ?.
ಸಿನಿಪ್ರಿಯರು ಜೂನ್ 4ರಂದು ಯಶ್ ನಟನೆಯ ಟಾಕ್ಸಿಕ್ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಆದರೆ ಅಂದೇ ರಾಮ್ ಚರಣ್ ಮತ್ತು ಜಾಹ್ನವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ತೆರೆಕಾಣುತ್ತಿದೆ.
.‘ಟಾಕ್ಸಿಕ್’ ಬಿಡುಗಡೆಯಾಗಬೇಕಿದ್ದ ದಿನವೇ ರಾಮ್ ಚರಣ್ ನಟನೆಯ ‘ಪೆದ್ದಿ’ ತೆರೆಗೆ.
ಪ್ರಸಕ್ತ ಐಪಿಎಲ್ನಲ್ಲಿ ಏಳನೇ ಸೋಲು ಕಂಡ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ನ ಪ್ಲೇಆಫ್ ಕನಸು ಬಹುತೇಕ ಕಮರಿತು. ಚೆಪಾಕ್ ಕ್ರೀಡಾಂಗಣದಲ್ಲಿಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಆಟವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8 ವಿಕೆಟ್ಗಳಿಂದ ಮುಂಬೈ ತಂಡವನ್ನು ಮಣಿಸಿತು.
.ಮುಂಬೈ ಎದುರು ಚೆನ್ನೈ ‘ಸೂಪರ್ ಕಿಂಗ್’.
ಯೆಮನ್ನ ಶಬ್ವಾ ಪ್ರಾಂತ್ಯದ ಕರಾವಳಿಯಲ್ಲಿ ಶನಿವಾರ (ಮೇ.2) ‘ಎಂ/ಟಿ ಯುರೇಕಾ’ ಎಂಬ ತೈಲ ನೌಕೆಯನ್ನು ಅಪಹರಿಸಲಾಗಿದೆ ಎಂದು ಯೆಮನ್ ಕರಾವಳಿ ರಕ್ಷಣಾ ಪಡೆ ತಿಳಿಸಿದೆ. ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನೌಕೆಯನ್ನು ಅತಿಕ್ರಮಿಸಿ, ಹಡಗಿನ ನಿಯಂತ್ರಣವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಈ ನೌಕೆಯನ್ನು ಗಲ್ಫ್ ಆಫ್ ಏಡೆನ್ ಮಾರ್ಗವಾಗಿ ಸೊಮಾಲಿಯಾತ್ತ ಕೊಂಡೊಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಯೆಮನ್ ಕರಾವಳಿಯಲ್ಲಿ ತೈಲ ನೌಕೆ ಅಪಹರಣ: ಸೊಮಾಲಿಯಾತ್ತ ಸಾಗಿದ ಹಡಗು.
ಇಲ್ಲಿ ಮುಕ್ತಾಯಗೊಂಡ 2026ರ ಐಪಿಎಲ್ನ 44 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದೆ. ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ ‘ಇದು ನಮ್ಮ ಸೀಸನ್ ಅಲ್ಲ’ ಎಂದಿದ್ದಾರೆ.
.IPL 2026: ‘ಇದು ನಮ್ಮ ಸೀಸನ್ ಆಗಿಲ್ಲ’ ಎಂದ ಹಾರ್ದಿಕ್ ಪಾಂಡ್ಯ.
ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ವಿರೋಧ ಪಕ್ಷಗಳೂ ಸೇರಿದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಲೆ ಏರಿಕೆ ನಿರ್ಧಾರವನ್ನು ತಮ್ಮ ಸರ್ಕಾರದ ಪರವಾಗಿ ಸಮರ್ಥಿಸಿಕೊಳ್ಳಲು ಹೋದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ ಜೋಶಿ ಅವರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವುದಲ್ಲದೇ ಟ್ರೂಲ್ ಆಗಿದ್ದಾರೆ.
.LPG ಬೆಲೆ ಏರಿಕೆ: ಟ್ರೋಲ್ ಆದ ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ.
'ನಾನು ನಿಕೊಬಾರ್ ಅರಣ್ಯ ಪ್ರದೇಶದಲ್ಲಿದ್ದೇನೆ. ಜೀವಿತಾವಧಿಯಲ್ಲೇ ನಾ ನೋಡಿದ ಅತ್ಯಂತ ಸುಂದರ ಅರಣ್ಯ. ಸಾವಿರಾರು ಎಕರೆ ಮಳೆ ಕಾಡು ಇದು. ಇಲ್ಲಿರುವ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತದೆ. ಅದು ಕೇವಲ ಒಬ್ಬ ಉದ್ಯಮಿಯ ಬಯಕೆಯನ್ನು ಈಡೇರಿಸುವುದಕ್ಕಾಗಿ. ಬುಡಕಟ್ಟು ಜನರ ಜೀವನ, ಪರಿಸರ ವ್ಯವಸ್ಥೆಯೇ ಧೂಳಿಪಟವಾಗಲಿದೆ. ಈ ದ್ವೀಪದಲ್ಲಿ ಸಾಕಷ್ಟು ಬುಡಕಟ್ಟು ಪಂಗಡಗಳು ಇಲ್ಲಿವೆ.
.ಅಭಿವೃದ್ಧಿಯೋ.. ವಿನಾಶವೋ.. ಏನಿದು ನಿಕೋಬಾರ್ ಯೋಜನೆ? ವಿರೋಧವೇಕೆ? ಸಮರ್ಥನೆಗಳೇನು?.
ಕೆಪಿಟಿಸಿಎಲ್ನ ವಿದ್ಯುತ್ ಮಾರ್ಗಕ್ಕೆ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಅನುಮತಿ ಪಡೆಯದೇ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಭೂಮಿ ಬಳಸಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಸೇರಿದಂತೆ ಒಂಬತ್ತು ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
.9 ಅಧಿಕಾರಿಗಳ ವಿರುದ್ಧ ಕ್ರಮ: ರಾಜ್ಯ ಸರ್ಕಾರಕ್ಕೆ ನಿರ್ದೇಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.