ಟೆಹರಾನ್: ‘ಬ್ಯಾಂಕ್ ಸೆಪಾ’ ಮೇಲಿನ ದಾಳಿಗೆ ಪ್ರತೀಕಾರವಾಗಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಪ್ರಮುಖ ಕಂಪನಿಗಳ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಇರಾನ್ನ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ಗಳಲ್ಲಿ ಒಂದಾದ 'ಬ್ಯಾಂಕ್ ಸೆಪಾ'ಗೆ ಸೇರಿದ ಕಟ್ಟಡವೊಂದರ ಮೇಲೆ ತಡರಾತ್ರಿ ಅಮೆರಿಕ–ಇಸ್ರೇಲ್ ದಾಳಿ ನಡೆಸಿದ್ದವು.

ದಾಳಿಯ ಬೆನ್ನಲ್ಲೇ ಹೇಳಿಕೆ ನೀಡಿರುವ 'ಖಾತಮ್ ಅಲ್-ಅನ್ಬಿಯಾ' ಜಂಟಿ ಕಮಾಂಡ್ನ ವಕ್ತಾರ ಇಬ್ರಾಹಿಂ ಜೊಲ್ಫಾಕಾರಿ, ‘ಶತ್ರುಗಳ ಈ ಅನ್ಯಾಯದ ನಡೆಯು ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ಗೆ ಸಂಬಂಧಿಸಿದ ಆರ್ಥಿಕ ಕೇಂದ್ರಗಳು ಮತ್ತು ಬ್ಯಾಂಕ್ಗಳನ್ನು ಗುರಿಯಾಗಿಸಲು ನಮ್ಮನ್ನು ಒತ್ತಾಯಿಸುತ್ತಿದೆ’ ಎಂದಿದ್ದಾರೆ.

ಅಲ್ಲದೇ, ಅಂತಹ ಸ್ಥಳಗಳಿಂದ ದೂರವಿರುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಏತನ್ಮಧ್ಯೆ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನೊಂದಿಗೆ ಸಂಯೋಜಿತವಾಗಿರುವ ‘ತಸ್ನಿಮ್ ನ್ಯೂಸ್’ ಏಜೆನ್ಸಿಯು ಅಮೆರಿಕದ ಪ್ರಮುಖ ಕಂಪನಿಗಳ ಕಚೇರಿಗಳು ಮತ್ತು ಮೂಲಸೌಕರ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಗೂಗಲ್, ಮೈಕ್ರೋಸಾಫ್ಟ್, ಪಲಾಂಟಿರ್, ಐಬಿಎಂ, ಎನ್ವಿಡಿಯಾ ಮತ್ತು ಒರಾಕಲ್ ಸೇರಿವೆ. ಈ ಕಂಪನಿಗಳು ಇಸ್ರೇಲ್ ಮತ್ತು ಪಶ್ಚಿಮ ಏಷ್ಯಾದಾದ್ಯಂತ ಹಲವಾರು ಕಚೇರಿಗಳನ್ನು ಹೊಂದಿವೆ.

ಗೂಗಲ್ ತನ್ನ ಪಶ್ಚಿಮ ಏಷ್ಯಾದ ಪ್ರಧಾನ ಕಚೇರಿಯನ್ನು ದುಬೈನಲ್ಲಿ ಹೊಂದಿದ್ದರೆ, ಮೈಕ್ರೋಸಾಫ್ಟ್ ಯುಎಇ ರಾಜಧಾನಿ ಅಬುದಾಭಿಯಲ್ಲಿ ಪ್ರಮುಖ ಪ್ರಾದೇಶಿಕ ಕಚೇರಿಯನ್ನು ಹೊಂದಿದೆ. ಎರಡೂ ಕಂಪನಿಗಳು ಇಸ್ರೇಲ್ನಲ್ಲಿಯೂ ಕಚೇರಿಗಳನ್ನು ಹೊಂದಿವೆ.

ಫೆ. 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಇರಾನ್ ತನ್ನ ನೆರೆಯ ದೇಶಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.