ದುಬೈ: ಇರಾನ್ಗೆ ಸೇರಿದ ತೈಲ ಟ್ಯಾಂಕರ್ಗಳು ಇಲ್ಲವೇ ವಾಣಿಜ್ಯ ಹಡಗುಗಳ ಮೇಲೆ ಒಂದು ವೇಳೆ ಅಮೆರಿಕ ದಾಳಿ ಮಾಡಿದಲ್ಲಿ, ಕೊಲ್ಲಿ ಪ್ರದೇಶದಲ್ಲಿ ಅದು ಹೊಂದಿರುವ ಸೇನಾ ನೆಲೆ ಮೇಲೆ ಭಾರಿ ದಾಳಿ ಮೂಲಕ ಪ್ರತ್ಯುತ್ತರ ನೀಡಲಾಗುವುದು ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್(ಐಆರ್ಜಿಸಿ) ಎಚ್ಚರಿಸಿದೆ.

ಕದನ ವಿರಾಮ ಜಾರಿಯಲ್ಲಿರುವ ಸಂದರ್ಭದಲ್ಲಿಯೇ ಇರಾನ್ಗೆ ಸೇರಿದ ಎರಡು ತೈಲ ಟ್ಯಾಂಕರ್ಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಐಆರ್ಜಿಸಿ ಈ ಎಚ್ಚರಿಕೆ ನೀಡಿದೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ವರದಿ ಮಾಡಿದೆ.

ಇನ್ನೊಂದೆಡೆ, ಐಆರ್ಜಿಸಿ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ ಎಂದು ಬಹರೇನ್ ಹೇಳಿದೆ. ಬಹರೇನ್ನಲ್ಲಿ ಅಮೆರಿಕ ನೌಕಾಪಡೆಯ ಪ್ರಾದೇಶಿಕ ಕೇಂದ್ರ ಕಚೇರಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.