ಟೆಹರಾನ್: ‘ಮಕ್ಕಳ ಕೊಲೆಗಾರ ನಿಮಗೆ ತೋಡಿರುವ ಗುಂಡಿಯಿಂದ ಹೊರಬನ್ನಿ’ ಎಂದು ಇರಾನ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನಮ್ಮ ಮೇಲೆ ಬಲಪ್ರಯೋಗ ಮಾಡಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಇತ್ತೀಚಿನ ಮಿಲಿಟರಿ ದಾಳಿಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸುವ ಮೂಲಕ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಹಲವು ವಾರಗಳ ಸಂಘರ್ಷದ ನಂತರ ಯುದ್ಧ ಅಂತ್ಯದ ಚರ್ಚೆಯ ಹೊರತಾಗಿಯೂ ಉದ್ವಿಗ್ನತೆ ಕುದಿಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವರದಿ ತಿಳಿಸಿದೆ.

ಅಮೆರಿಕವು ಕೀಳುಮಟ್ಟದ ಮೆಂಟಲ್ ಗೇಮ್ನಲ್ಲಿ ತೊಡಗಿಕೊಂಡಿದೆ. ಅದನ್ನು ಬಿಟ್ಟು ಮಕ್ಕಳ ಕೊಲೆಗಾರ ನಿಮಗಾಗಿ ತೋಡಿರುವ ಗುಂಡಿಯಿಂದ ಹೊರಬನ್ನಿ ಎಂದು ಇರಾನ್ ಅಧ್ಯಕ್ಷರ ಕಚೇರಿಯ ಸಂವಹನ ವಿಬಾಗದ ಉಪ ಮುಖ್ಯಸ್ಥರಾದ ಸಯ್ಯದ್ ಮೆಹದಿ ತಬಾಟಬಾಯಿ ಅಮೆರಿಕ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮಿನಾಬ್ನಲ್ಲಿ ಅಮೆರಿಕ ಕ್ಷಿಪಣಿ ದಾಳಿ ನಡೆಸಿ 165 ಮಕ್ಕಳನ್ನು ಕೊಂದ ಕುರಿತಂತೆ ಟ್ರಂಪ್ ಅವರನ್ನು ಇರಾನ್ ಅಧಿಕಾರಿ ‘ಮಕ್ಕಳ ಕೊಲೆಗಾರ’ ಎಂದು ಕರೆದಿದ್ದಾರೆ.

ನಮ್ಮ ಮೇಲಿನ ದಾಳಿಯಿಂದಾದ ಹಾನಿಗೆ ಅಮೆರಿಕ ಪರಿಹಾರ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.

'ಇರಾನ್ ಅನ್ನು ಜಗತ್ತಿನಲ್ಲಿ ಶಾಂತಿ ಮತ್ತು ಸ್ನೇಹದ ಪ್ರತಿಪಾದಕ ದೇಶ ಎಂದು ಹೇಳಲಾಗುತ್ತದೆ. ಆದರೆ, ಯಾರಾದರೂ ಈ ರಾಷ್ಟ್ರದ ಬಗ್ಗೆ ಬಲಪ್ರಯೋಗದ ಭಾಷೆಯಲ್ಲಿ ಮಾತನಾಡಿದರೆ, ಅವರಿಗೆ ಬಲವಾದ ಹೊಡೆತ ಬೀಳುತ್ತದೆ’ ಎಂದು ತಬತಾಬಾಯಿ ಹೇಳಿದ್ದಾರೆ.

ಅಮೆರಿಕದಿಂದ ಪ್ರಚೋದನೆ ಬಂದರೆ ಇರಾನ್, ಉತ್ತರ ನೀಡಲು ಸಿದ್ಧವಾಗಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.