ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶಮನವಾಯಿತು ಎನ್ನುವಷ್ಟರಲ್ಲಿ ಮತ್ತೆ ಉದ್ವಿಗ್ನಗೊಳ್ಳುವ ಸಾಧ್ಯತೆ ಕಂಡುಬಂದಿದೆ. ವಾಯುಪಡೆ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು, ನೌಕಾಪಡೆಯನ್ನು ನಾಶಮಾಡುವುದು, ಭೂಸೇನೆ ಮೂಲಕ ದಾಳಿ ನಡೆಸುವುದು ಹಾಗೂ ಹೊರ್ಮುಜ್ ಜಲಸಂಧಿಯನ್ನು ತೆರೆಯುವುದು ಸೇರಿದಂತೆ ಹಲವು ವಿಧಗಳಲ್ಲಿ ಶತ್ರುಗಳು ವಿಫಲರಾಗಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಹೇಳಿದ್ದಾರೆ. ಶತ್ರುಗಳ ಯಾವುದೇ ಉದ್ದೇಶ ಈಡೇರಿಲ್ಲ ಎಂದು ಅವರು ಪ್ರತಿಪಾದಿಸಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.

ಅಮೆರಿಕದೊಂದಿಗೆ ಕೆಲವು ವಿಷಯಗಳಲ್ಲಿ ಒಮ್ಮತಕ್ಕೆ ಬರಲಾಗಿದ್ದರೂ, ಇನ್ನೂ ಹಲವು ವಿಷಯಗಳಲ್ಲಿ ಪ್ರಮುಖ ವ್ಯತ್ಯಾಸಗಳು ಉಳಿದಿವೆ ಎಂದು ಸ್ಪೀಕರ್ ಹೇಳಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಎಚ್ಚರಿಕೆಗಳನ್ನು ನೀಡುವ ಮೂಲಕ ಮತ್ತು ಗಡುವನ್ನು ನಿಗದಿಪಡಿಸುವ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಶತ್ರುವಿಗೆ ಸಾಧ್ಯವಾಗಿಲ್ಲ. ಆದ್ದರಿಂದ, ಮಧ್ಯವರ್ತಿಗಳ ಮೂಲಕ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ ಎಂಬುದಾಗಿ ಅಲ್ ಜಜೀರಾ ವರದಿ ಮಾಡಿದೆ.

ಅಮೆರಿಕ ತನ್ನ ಬೇಡಿಕೆಗಳನ್ನು ಪೂರೈಸಲು ಇರಾನ್ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದ ಅವರು, ನಾವು ಯುದ್ಧಭೂಮಿಯಲ್ಲಿ ವಿಜಯಶಾಲಿಗಳು ಎಂಬುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

‘ಇರಾನ್ನಲ್ಲಿ ಆಡಳಿತ ಬದಲಾಯಿಸುವ, ನಮ್ಮ ಆಕ್ರಮಣ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ನಾಶಮಾಡುವ ಗುರಿಯನ್ನು ಟ್ರಂಪ್ ಸಾಧಿಸಲಾಗಲಿಲ್ಲ, ಇರಾನ್ ವೆನೆಜುವೆಲಾ ಅಲ್ಲ’ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಈ ಮಧ್ಯೆ, ಶತ್ರುಗಳ ಉನ್ನತ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಸಾಮರ್ಥ್ಯಗಳ ಹೊರತಾಗಿಯೂ, ಇರಾನ್ ಅಸಾಮಾನ್ಯ ಯುದ್ಧ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಬಲ ಎದುರಾಳಿಯನ್ನು ಯಶಸ್ವಿಯಾಗಿ ಎದುರಿಸಿದೆ ಎಂದು ಘಾಲಿಬಾಫ್ ಹೇಳಿದ್ದಾರೆ.

ಎದುರಾಳಿಯ ವೈಫಲ್ಯವು ಸಂಪನ್ಮೂಲಗಳ ಕೊರತೆಯಿಂದಲ್ಲ, ದೋಷಪೂರಿತ ತಂತ್ರದಿಂದಾಗಿದೆ ಎಂದು ಅವರು ವಾದಿಸಿದ್ದಾರೆ..

ಶತ್ರು ಬಳಿ ಹಣ ಮತ್ತು ಸಂಪನ್ಮೂಲಗಳಿದ್ದವು, ಆದರೆ, ಅವರು ತಂತ್ರಗಾರಿಕೆ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಘಾಲಿಬಾಪ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.