ಲಾಗೋಸ್: ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ನ(ಐಎಸ್) ರಾಕ್ಷಸ ಅಬು ಬಿಲಾಲ್ ಅಲ್ ಮಿನುಕಿಯನ್ನು ಅಮೆರಿಕ ಮತ್ತು ನೈಜೀರಿಯಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ ಎಂದು ಉಭಯ ದೇಶಗಳ ನಾಯಕರು ಖಚಿತಪಡಿಸಿದ್ಧಾರೆ.

ಇಸ್ಲಾಮಿಕ್ ಸ್ಟೇಟ್ನ ಎರಡನೇ ಕಮಾಂಡರ್ ಆಗಿದ್ದ ಅಬು ಬಿಲಾಲ್ ಮೇಲೆ 2023ರಿಂದ ಅಮೆರಿಕ ನಿರ್ಬಂಧ ಹೇರಿತ್ತು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ರಾತ್ರಿ, ನನ್ನ ನಿರ್ದೇಶನದ ಮೇರೆಗೆ ಧೈರ್ಯಶಾಲಿ ಅಮೆರಿಕದ ಸೇನಾಪಡೆ ಮತ್ತು ನೈಜೀರಿಯಾದ ಸಶಸ್ತ್ರ ಪಡೆ ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ಕೊಂದಿದೆ. ನಿಖರವಾಗಿ ಯೋಜಿಸಿದ ಮತ್ತು ಅತ್ಯಂತ ಸಂಕೀರ್ಣ ಕಾರ್ಯಾಚರಣೆಯನ್ನು ದೋಷರಹಿತವಾಗಿ ಕಾರ್ಯಗತಗೊಳಿಸಿದವು’ ಎಂದು ಟ್ರಂಪ್ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹತ್ಯೆಯನ್ನು ಮೊದಲಿಗರಾಗಿ ಘೋಷಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ನ ಹಿರಿಯ ನಾಯಕ ಮತ್ತು ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕರಲ್ಲಿ ಒಬ್ಬನಾದ ಅಲ್ ಮಿನುಕಿಯನ್ನು ಹೊಡೆದುರುಳಿಸಲಾಗಿದೆ ಎಂದು ನೈಜೀರಿಯಾದ ರಕ್ಷಣಾ ಪಡೆ ಸಹ ಖಚಿತಪಡಿಸಿದೆ.

ಐಸ್ನ ಮಧ್ಯವರ್ತಿ ಕಾರ್ಯಾಚರಣೆಗಳು, ಆರ್ಥಿಕ ನೆರವು, ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಡ್ರೋನ್ಗಳ ಅಭಿವೃದ್ಧಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನೈಜೀರಿಯಾದ ಹೊರಗಿನ ಐಸ್ ಘಟಕಗಳಿಗೆ ಮಾರ್ಗದರ್ಶನ ನೀಡುತ್ತಾ ಕಾರ್ಯತಂತ್ರದ ಪಾತ್ರವನ್ನು ಮಿನುಕಿ ನಿರ್ವಹಿಸುತ್ತಿದ್ದನು ಎಂದು ಅದು ನೈಜೀರಿಯಾ ಹೇಳಿದೆ.

‘ನಮ್ಮ ದೃಢನಿಶ್ಚಯದ ನೈಜೀರಿಯಾ ಸಶಸ್ತ್ರ ಪಡೆ, ಅಮೆರಿಕದ ಸಶಸ್ತ್ರ ಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಇಸ್ಲಾಮಿಕ್ ಸ್ಟೇಟ್ಗೆ ಭಾರಿ ಹೊಡೆತ ನೀಡಿದವು’ಎಂದು ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ಹೇಳಿದ್ದಾರೆ.

ಅಬು ಮೈನೋಕ್ ಎಂದೂ ಕರೆಯಲ್ಪಡುವ ಅಲ್ ಮಿನುಕಿ ಮತ್ತು ಆತನ ಹಲವು ಲೆಫ್ಟಿನೆಂಟ್ಗಳನ್ನು ಲೇಕ್ ಚಾಡ್ ಬೇಸಿನ್ನಲ್ಲಿ ಹೊಡೆದುರುಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ದಾಳಿಯ ಸ್ವರೂಪದ ಕುರಿತಂತೆ ಉಭಯ ನಾಯಕರು ಮಾಹಿತಿ ಬಿಟ್ಟುಕೊಟ್ಟಿಲ್ಲ.

ವಿಶ್ವದ ವಿವಿಧೆಡೆ ಐಎಸ್ ಕಾರ್ಯಾಚರಣೆಗಳನ್ನು ಸಂಘಟಿಸುವ ಮತ್ತು ನಿರ್ದೇಶಿಸುವ ನಿರ್ಣಾಯಕ ಕೇಂದ್ರವನ್ನು ನಿರ್ಮೂಲನೆ ಮಾಡಿದಂತೆ ಎಂದು ಅಲ್ ಮಿನುಕಿ ಹತ್ಯೆಯನ್ನು ನೈಜೀರಿಯಾದ ಸೇನೆಯು ಬಣ್ಣಿಸಿದೆ.

ನೈಜೀರಿಯಾ ದೀರ್ಘಕಾಲದಿಂದ ಜಿಹಾದಿ ದಂಗೆಕೋರರಿಂದ ತತ್ತರಿಸುತ್ತಿದೆ. ಇದರಲ್ಲಿ ಐಎಸ್ ಸಂಘಟನೆಯ ಪ್ರಾದೇಶಿಕ ಶಾಖೆಗಳು ಮತ್ತು ಇಸ್ಲಾಮಿಕ್ ಪ್ರತಿಸ್ಪರ್ಧಿ ಬೊಕೊ ಹರಾಮ್ ಸಹ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.