ದುಬೈ: ಈದ್ ಉಲ್–ಫಿತ್ರ್ ಆಚರಣೆ ಹೊತ್ತಿನಲ್ಲಿ ಮಸೀದಿಗಳಿಂದ ದಿನದ ಮೊದಲ ಪ್ರಾರ್ಥನೆ ಆರಂಭವಾಗುತ್ತಿದ್ದಂತೆ, ದುಬೈ ನಗರದ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿದ್ದು, ಇದನ್ನು ಅಲ್ಲಿನ ವಾಯುರಕ್ಷಣಾ ವ್ಯವಸ್ಥೆಯು ತಡೆದಿದೆ. ಈ ವೇಳೆ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ನಗರದ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ದಾಳಿಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಬಹರೇನ್ನಲ್ಲಿ ಹಾರಾಡುತ್ತಿದ್ದ ಕ್ಷಿಪಣಿಯೊಂದನ್ನು ವಾಯುರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದ್ದು, ಈ ವೇಳೆ ಸಿಡಿದ ಚೂರುಗಳು ಗೋದಾಮಿನ ಮೇಲೆ ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ.

ತೈಲ ಸಮೃದ್ಧವಾದ ಪೂರ್ವ ಪ್ರಾಂತ್ಯವನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.

‘ಸೌತ್ ಪಾರ್ಸ್’ ಮೇಲಿನ ದಾಳಿಯ ನಂತರ, ಇರಾನ್ ಈ ಪ್ರದೇಶದಾದ್ಯಂತ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿತ್ತು. ಇಸ್ರೇಲ್ ಮೇಲೆ 12ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿತ್ತು. ಮರುದಿನವೇ ಮತ್ತೆ ದಾಳಿ ನಡೆಸಿದೆ.

‘ಸೌತ್ ಪಾರ್ಸ್’ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಕೇಂದ್ರವಾಗಿದ್ದು, ಇದರ ಇರಾನ್ನ ಭಾಗವು ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿದೆ. ಇದು ಕತಾರ್ನೊಂದಿಗೆ ಜಂಟಿ ಮಾಲೀಕತ್ವದಲ್ಲಿದೆ. ಇರಾನ್ನಲ್ಲಿ ಉತ್ಪತ್ತಿಯಾಗುವ ವಿದ್ಯುತ್ನಲ್ಲಿ ಶೇ 80ರಷ್ಟು ನೈಸರ್ಗಿಕ ಅನಿಲದಿಂದಲೇ ಬರುವುದರಿಂದ, ಈ ಅನಿಲ ಕೇಂದ್ರದ ಮೇಲಿನ ದಾಳಿಯು ಆ ದೇಶದ ವಿದ್ಯುತ್ ಪೂರೈಕೆ ಮೇಲೆ ನೇರ ಪರಿಣಾಮ ಬೀರಲಿದೆ.

ಕ್ಷಿಪಣಿ ತಯಾರಿಕೆ ಮುಂದುವರಿಕೆ: ‘ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆ ಸಾಮರ್ಥ್ಯವನ್ನು ನಾಶ ಮಾಡಲಾಗಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಆದರೆ, ‘ಕ್ಷಿಪಣಿಗಳ ತಯಾರಿಕೆ ಮುಂದುವರಿದಿದೆ’ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಯುದ್ಧದ ಸಂದರ್ಭಗಳಲ್ಲಿಯೂ ನಾವು ಕ್ಷಿಪಣಿಗಳನ್ನು ತಯಾರಿಸುತ್ತಿದ್ದೇವೆ. ಇದು ಅದ್ಭುತವಾಗಿದೆ ಮತ್ತು ದಾಸ್ತಾನು ಮಾಡಲು ಯಾವುದೇ ಸಮಸ್ಯೆ ಉಂಟಾಗಿಲ್ಲ. ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವ ಉದ್ದೇಶ ಹೊಂದಿಲ್ಲ’ ಎಂದು ರೆವಲ್ಯೂಷನರಿ ಗಾರ್ಡ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಅವರು ಮೃತಪಡುವ ಕೆಲ ಸಮಯಕ್ಕೂ ಮುನ್ನ ಇರಾನ್ನ ಸರ್ಕಾರಿ ಸ್ವಾಮ್ಯದ ‘ಇರಾನ್’ ಪತ್ರಿಕೆಗೆ ತಿಳಿಸಿದ್ದರು.

‘ಶತ್ರು ಸಂಪೂರ್ಣವಾಗಿ ದಣಿಯುವ ತನಕ ಯುದ್ಧ ಮುಂದುವರಿಯಬೇಕೆಂದು ಜನರು ನಿರೀಕ್ಷಿಸುತ್ತಿದ್ದಾರೆ. ದೇಶದಿಂದ ಯುದ್ಧದ ನೆರಳು ದೂರವಾದಾಗ ಈ ಯುದ್ಧ ಕೊನೆಗೊಳ್ಳಬೇಕು’ ಎಂದು ಅವರು ಹೇಳಿದ್ದರು.

ಇರಾನ್ ತನ್ನ ಕೊಲ್ಲಿಯ ಅರಬ್ ನೆರೆಹೊರೆ ದೇಶಗಳ ಮೇಲೆ ನಡೆಸಿದ ದಾಳಿಗಳ ಹೊರತಾಗಿ, ಹೊರ್ಮುಜ್ ಜಲಸಂಧಿಯ ಮೂಲಕ ಸಾಗಣೆಯ ಮೇಲಿನ ಅದರ ಬಿಗಿ ಹಿಡಿತವು ಜಾಗತಿಕ ಇಂಧನ ಬಿಕ್ಕಟ್ಟಿನ ಆತಂಕವನ್ನು ಹೆಚ್ಚಿಸಿದೆ.

ಇರಾನ್ ಗುರುವಾರ ನಡೆಸಿದ ದಾಳಿಯ ಸಂದರ್ಭದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 119 ಡಾಲರ್ಗಿಂತಲೂ ಹೆಚ್ಚು ಏರಿಕೆಯಾಗಿತ್ತು. ಆದರೆ, ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಇದು ಸುಮಾರು 107 ಡಾಲರ್ ಆಸುಪಾಸಿನಲ್ಲಿತ್ತು. ಫೆಬ್ರುವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಸೇನೆ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಸಂಘರ್ಷ ಆರಂಭಿಸಿದಾಗಿನಿಂದ ಈ ತೈಲ ಬೆಲೆಯು ಶೇ 47ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಇಸ್ರೇಲ್ನಲ್ಲಿ ಮೊಳಗಿದ ಸೈರನ್

ಇಸ್ರೇಲ್ನಲ್ಲಿ ಶುಕ್ರವಾರ ಮುಂಜಾನೆ ಜೆರುಸಲೇಂ ಮತ್ತು ಉತ್ತರ ಭಾಗದ ಮೇಲೆ ದಾಳಿ ನಡೆಯುವ ಬಗ್ಗೆ ಎಚ್ಚರಿಕೆ ನೀಡುವ ಸೈರನ್ಗಳು ಮೊಳಗಿದವು. ಹೀಗಾಗಿ, ಜನರು ಮತ್ತೆ ಆಶ್ರಯ ತಾಣಗಳಿಗೆ ಹೋಗುವಂತಾಯಿತು. ಸಾವು–ನೋವುಗಳ ಬಗ್ಗೆ ವರದಿಯಾಗಿಲ್ಲ.

ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸುವುದಾಗಿ ಇಸ್ರೇಲ್ ಘೋಷಿಸಿದ ಸ್ವಲ್ಪ ಸಮಯದ ಬಳಿಕ, ಇರಾನಿಯನ್ನರು ಪರ್ಷಿಯನ್ ಹೊಸ ವರ್ಷದ ‘ನೌರುಜ್’ ಆಚರಿಸುವ ಹೊತ್ತಿನಲ್ಲೇ ಟೆಹರಾನ್ನಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ.

ಇರಾನ್ ಮೇಲೆ ನಿರಂತರವಾಗಿ ದಾಳಿ ಮಾಡುವುದರ ಜೊತೆಗೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಇಸ್ರೇಲ್ ನಿಯಮಿತವಾಗಿ ದಾಳಿ ನಡೆಸಿದೆ.

ಇಸ್ರೇಲ್ ತನ್ನ ದಾಳಿಯನ್ನು ಸಿರಿಯಾದವರೆಗೂ ವಿಸ್ತರಿಸಿದೆ. ದಕ್ಷಿಣದ ಸ್ವೀದಾ ಪ್ರಾಂತ್ಯದಲ್ಲಿ ‘ದುರೂಸ್’ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅಲ್ಲಿನ ಮೂಲಸೌಕರ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ‘ಸನಾ’ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದುರೂಸ್ ಪಂಗಡವನ್ನು ಬೆಂಬಲಿಸಿ ಇಸ್ರೇಲ್ ಈ ಹಿಂದೆಯೂ ಅನೇಕ ಬಾರಿ ಸಿರಿಯಾದ ಮೇಲೆ ದಾಳಿ ನಡೆಸಿತ್ತು.

ಡಮಾಸ್ಕಸ್ನಲ್ಲಿರುವ ಸಿರಿಯಾದ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯ ಮೇಲೂ ದಾಳಿ ಮಾಡಿದೆ.

ಯುದ್ಧ ಆರಂಭವಾದಾಗಿನಿಂದ ಇರಾನ್ನಲ್ಲಿ 1,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಲೆಬನಾನ್ನಲ್ಲಿ ಹಿಜ್ಬುಲ್ಲಾ ಬಂಡುಕೋರರ ಗುಂಪಿನ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗಳಿಂದ 10 ಲಕ್ಷಕ್ಕಿಂತಲೂ ಹೆಚ್ಚಿನ ಜನರನ್ನು ಸ್ಥಳಾಂತರಿಸಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ಸರ್ಕಾರ ಹೇಳಿದೆ.

ಹಿಜ್ಬುಲ್ಲಾ ಸಂಘಟನೆಯ 500ಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ.

ಇರಾನ್ನ ಕ್ಷಿಪಣಿ ದಾಳಿಯಿಂದ ಇಸ್ರೇಲ್ನಲ್ಲಿ 15 ಜನರು ಮೃತಪಟ್ಟಿದ್ದಾರೆ. ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ನಾಲ್ವರು ಅಸುನೀಗಿದ್ದಾರೆ. ಅಮೆರಿಕದ 13 ಯೋಧರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.