ದುಬೈ/ಜೆರುಸಲೇಂ: ‘ತನ್ನ ಸೇನಾಪಡೆಗಳು ಸೋಮವಾರ ತಡರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಭದ್ರತಾ ಮುಖ್ಯಸ್ಥ ಅಲಿ ಲಾರೀಜಾನಿ ಹತರಾಗಿದ್ದಾರೆ’ ಎಂದು ಇಸ್ರೇಲ್ ಮಂಗಳವಾರ ಹೇಳಿದೆ.

‘ಈ ದಾಳಿಯಲ್ಲಿ ಅರೆಸೇನಾ ಪಡೆ ಬಸೀಜ್ನ ಕಮಾಂಡರ್ ಗುಲಾಮ್ ರೆಜಾ ಸುಲೈಮಾನಿ ಕೂಡ ಹತರಾಗಿದ್ದಾರೆ’ ಎಂದು ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೊಂಡಿದ್ದಾರೆ.

ಆದರೆ, ಇಸ್ರೇಲ್ ದಾಳಿಯಲ್ಲಿ ಲಾರೀಜಾನಿ ಹತ್ಯೆ ಅಥವಾ ಗಾಯಗೊಂಡಿರುವ ಕುರಿತು ಇರಾನ್ ಈವರೆಗೆ ಏನನ್ನೂ ಖಚಿತಪಡಿಸಿಲ್ಲ.

ಲಾರೀಜಾನಿ ಅವರ ಹತ್ಯೆ ಖಚಿತ ಪಟ್ಟರೆ, ಇಸ್ರೇಲ್– ಅಮೆರಿಕ ನಡೆಸಿದ್ದ ದಾಳಿಯ ಮೊದಲ ದಿನ ಫೆಬ್ರುವರಿ 28ರಂದು ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಮೃತಪಟ್ಟ ನಂತರ ಹತ್ಯೆಯಾದ ಅತ್ಯಂತ ಹಿರಿಯ ಅಧಿಕಾರಿ ಇವರೇ ಆಗಲಿದ್ದಾರೆ.

ಲಾರೀಜಾನಿ ಅವರು ಟೆಹರಾನ್ನಲ್ಲಿ ‘ಖುದ್ಸ್ ದಿನ’ದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಲಾರೀಜಾನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ ನೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಗುಪ್ತಚರ ವಿಭಾಗದ 10 ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ಡಾಲರ್ (₹92.56 ಕೋಟಿ) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು.

ಅಮೆರಿಕದ ದಾಳಿಯಲ್ಲಿ ಮೃತಪಟ್ಟ ಇರಾನ್ನ ನಾವಿಕರ ಸ್ಮರಣಾರ್ಥ ಲಾರೀಜಾನಿ ಬರೆದ ಹಸ್ತಪ್ರತಿಯನ್ನು ಇರಾನ್ ಸರ್ಕಾರಿ ಮಾಧ್ಯಮ ಪ್ರಕಟಿಸಿದೆ. ಈ ನಾವಿಕರ ಅಂತ್ಯಕ್ರಿಯೆ ಮಂಗಳವಾರ ನಿಗದಿಯಾಗಿತ್ತು.

ಐಆರ್ಜಿಸಿ ನಿಯಂತ್ರಣದಲ್ಲಿರುವ ಅರೆಸೇನಾ ಪಡೆ ‘ಬಸೀಜ್’. ಇದನ್ನು ಇರಾನ್ನೊಳಗಿನ ಪ್ರತಿಭಟನೆಗಳನ್ನು ಹತ್ತಿಕ್ಕಲು ಹೆಚ್ಚಾಗಿ ಬಳಸಲಾಗುತ್ತದೆ.

ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಕನಿಷ್ಠ ಎರಡು ಸಾವಿರ
ಮಂದಿ ಮೃತಪಟ್ಟಿದ್ದಾರೆ. ಹೊರ್ಮುಜ್ ಜಲಸಂಧಿ ಮುಚ್ಚಲಾಗಿದೆ. ಶೇ 20ರಷ್ಟು ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯಾಗುವ ಈ ಪ್ರಮುಖ ಜಲಮಾರ್ಗವನ್ನು ಮತ್ತೆ ತೆರೆಯಲು ಸಹಾಯ ಮಾಡುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಮನವಿಗೆ ಮಿತ್ರರಾಷ್ಟ್ರಗಳಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ.

ಮಂಗಳವಾರ ಮುಂಜಾನೆ ಇರಾನ್ ಹಾಗೂ ಇಸ್ರೇಲ್ ನಡುವಿನ ದಾಳಿಗಳು ಮುಂದುವರಿದಿವೆ. ಇಸ್ರೇಲ್ ಮೇಲೆ ಇರಾನ್ ರಾತ್ರೋರಾತ್ರಿ ಕ್ಷಿಪಣಿ ದಾಳಿ ನಡೆಸಿದೆ. ಎರಡು ವಾರಗಳಿಗೂ ಹೆಚ್ಚು ಕಾಲ ಅಮೆರಿಕ ಮತ್ತು ಇಸ್ರೇಲ್ ದಾಳಿಗಳ ಹೊರತಾಗಿಯೂ ಇರಾನ್ ದೀರ್ಘ ಕಾಲ ದಾಳಿ ನಡೆಸುವ ಸಾಮರ್ಥ್ಯವನ್ನು ಕಾಯ್ದುಕೊಂಡಿದೆ.

ದಾಳಿ ಅನಿರೀಕ್ಷಿತ: ಅಮೆರಿಕ ಅಧ್ಯಕ್ಷ ಟ್ರಂಪ್

ಟೆಲ್ ಅವೀವ್/ವಾಷಿಂಗ್ಟನ್: ಯುಎಇ ಹಾಗೂ ಇತರ ಕೊಲ್ಲಿ ದೇಶಗಳ ಮೇಲೆ ಇರಾನ್ ಮಂಗಳವಾರ ಹೊಸದಾಗಿ ವಾಯು ದಾಳಿ ನಡೆಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಮಿತ್ರ ರಾಷ್ಟ್ರಗಳ ಮೇಲಿನ ಇರಾನ್ ದಾಳಿಯನ್ನು ಯಾರೂ ಅಂದಾಜು ಮಾಡಿರಲಿಲ್ಲ’ ಎಂದಿದ್ದಾರೆ.

‘ಇದು ಆಶ್ಚರ್ಯದ ಜತೆಗೆ ಆಘಾತವನ್ನೂ ತಂದಿದೆ’ ಎಂದಿದ್ದಾರೆ.

‘ಇರಾನ್ ತನ್ನ ನೆರೆಹೊರೆಯ ದೇಶಗಳಾದ ಕತಾರ್, ಸೌದಿ ಅರೇಬಿಯಾ, ಯುಎಇ, ಬಹರೇನ್ ಮತ್ತು ಕುವೈತ್ ಮೇಲೆ ನಡೆಸಿದ ದಾಳಿಯಿಂದ ಆಶ್ಚರ್ಯವಾಗಿದೆ. ಮಧ್ಯಪ್ರಾಚ್ಯದ ಈ ದೇಶಗಳ ಮೇಲೆ ಇರಾನ್ ದಾಳಿ ಮಾಡಬಾರದಿತ್ತು’ ಎಂದು ತಿಳಿಸಿದ್ದಾರೆ.

ಆದರೆ, ಇರಾನ್ ಮೇಲೆ ದಾಳಿ ಮಾಡುವುದರಿಂದ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಪ್ರತಿದಾಳಿ ನಡೆಯಬಹುದು ಎಂಬ ಎಚ್ಚರಿಕೆಯನ್ನು ಟ್ರಂಪ್ ಅವರಿಗೆ ಅಮೆರಿಕ ಗುಪ್ತಚರ ಅಧಿಕಾರಿಗಳು ಈ ಮೊದಲೇ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.