ಟೆಹರಾನ್: ಪಶ್ಚಿಮ ಏಷ್ಯಾ ಯುದ್ಧವು ಶುಕ್ರವಾರ 7ನೇ ದಿನ ಪೂರೈಸಿದ್ದು, ‘ಎರಡನೆಯ ಹಂತ’ದ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಇಸ್ರೇಲ್ ಹೇಳಿದೆ.

ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಟೆಹರಾನ್ ಸೇರಿದಂತೆ ಇರಾನ್ನ ಹಲವು ನಗರಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಇರಾನ್ನ ಡ್ರೋನ್ ವಾಹಕ ನೌಕೆ ‘ಶಾಹಿದ್ ಬಘೇರಿ’ಯನ್ನು ನಾಶಪಡಿಸಿರುವುದಾಗಿ ಅಮೆರಿಕ ತಿಳಿಸಿದೆ.

ಇರಾನ್ ಸೇನೆ ತನ್ನ ಕ್ಷಿಪಣಿಗಳನ್ನು ಇರಿಸಿರುವ ಕೆರ್ಮನ್ಶಾ ನಗರದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ಲಾಂಚರ್ಗಳನ್ನು ಬಹುತೇಕ ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಮತ್ತೊಂದೆಡೆ, ಇರಾನ್ ಕೂಡಾ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿಯನ್ನು ಮುಂದುವರಿಸಿದೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ) ಸಿಬ್ಬಂದಿ ಮೆಷಿನ್ ಗನ್ಗಳನ್ನು ಹಿಡಿದು ಟೆಹರಾನ್ನ ಬೀದಿಗಳನ್ನು ಸುತ್ತುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಅಮೆರಿಕನ್ನರಿಗಿಂತ ದೇಶದ ನಿವಾಸಿಗಳೇ ಶತ್ರುಗಳಾಗಿದ್ದಾರೆ. ಉಗ್ರಗಾಮಿ ಮುಖಂಡರ ಸೂಚನೆಯಂತೆ ತನ್ನದೇ ದೇಶದ ಜನರ ವಿರುದ್ಧ ಅವರು ದಾಳಿ ನಡೆಸುತ್ತಿದ್ದಾರೆ’ ಎಂದು ಪ್ಯಾರಿಸ್ನಲ್ಲಿ ನೆಲೆಸಿರುವ ಟೆಹರಾನ್ ನಿವಾಸಿಯೊಬ್ಬರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ತೈಲ, ಸಾರಿಗೆ, ಪ್ರವಾಸೋದ್ಯಮಕ್ಕೆ ಪೆಟ್ಟು

ಪಶ್ಚಿಮ ಏಷ್ಯಾದೊಳಗಿನ ಮತ್ತು ಹೊರಗಿನ 14 ದೇಶಗಳಿಗೆ ಯುದ್ಧ ವ್ಯಾಪಿಸಿದೆ. ಸಂಘರ್ಷದ ಪರಿಣಾಮವಾಗಿ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆ ಮತ್ತು ವಿಮಾನಯಾನ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ.

ಪ್ರವಾಸಿಗರ ಪಾಲಿಗೆ ಸುರಕ್ಷಿತ, ಐಷಾರಾಮಿ ತಾಣಗಳು ಎಂದೇ ಹೆಸರಾಗಿರುವ ಕೊಲ್ಲಿಯ ಶ್ರೀಮಂತ ರಾಷ್ಟ್ರಗಳಿಗೂ ಯುದ್ಧದ ಬಿಸಿ ತಟ್ಟಿದೆ.

ಶುಕ್ರವಾರ ಬೆಳಿಗ್ಗೆ ತನ್ನ ವಾಯುನೆಲೆಯ ಮೇಲೆ ನಡೆದ ದಾಳಿಯನ್ನು ಕತಾರ್ ತಡೆದಿದೆ. ಸೌದಿ ಅರೇಬಿಯಾವು ಇರಾನ್ನ ಮೂರು ಕ್ಷಿಪಣಿಗಳು ರಿಯಾದ್ನಲ್ಲಿ ಹೊಡೆದುರುಳಿಸಿದೆ.

ಯುದ್ಧ ಪ್ರಾರಂಭವಾದಾಗಿನಿಂದ ಇದುವರೆಗೆ ಕೊಲ್ಲಿ ವಲಯದಲ್ಲಿ ಒಟ್ಟು 13 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಕುವೈತ್ನ 11 ವರ್ಷದ ಬಾಲಕಿಯೂ ಸೇರಿದ್ದಾಳೆ.

ಸದ್ಯ ಇರಾನ್ಗೆ ಅಮೆರಿಕದ ಪಡೆಗಳನ್ನು ಕಳುಹಿಸುವುದು ಸಮಯ ವ್ಯರ್ಥ ಮಾಡಿದಂತೆ. ಆದರೆ, ಇರಾನ್ನ ಹೊಸ ನಾಯಕನ ಆಯ್ಕೆಯಲ್ಲಿ ನನ್ನ ಪಾತ್ರ ಇರುತ್ತದೆ.
– ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ

ಕೆಲವು ದೇಶಗಳು ಪಶ್ಚಿಮ ಏಷ್ಯಾ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ಪ್ರಯತ್ನ ನಡೆಸುತ್ತಿವೆ. ಆದರೆ, ಯಾವುದೇ ಮಾತುಕತೆಯು ಯುದ್ಧ ಆರಂಭಿಸಿದವರನ್ನು ಉದ್ದೇಶಿಸಿ ಇರಬೇಕು.
– ಮಸೂದ್ ಪೆಜೆಶ್ಕಿಯಾನ್, ಇರಾನ್ ಅಧ್ಯಕ್ಷ

ಎರಡನೇ ಹಂತದ ಕಾರ್ಯಾಚರಣೆ ಆರಂಭಿಸಿದ್ದೇವೆ. ಶೀಘ್ರ ಇನ್ನಷ್ಟು ಅಚ್ಚರಿಗಳು ಕಾದಿವೆ.ಇರಾನ್ ಆಡಳಿತದ ಅಡಿಪಾಯವನ್ನೇ ಹೊಡೆದುರುಳಿಸುತ್ತೇವೆ.
– ಲೆ. ಜನರಲ್ ಇಯಾಲ್ ಜಮೀರ್, ಇಸ್ರೇಲ್ ಸೇನಾ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.