ಜೆರುಸಲೇಂ: ದಕ್ಷಿಣ ಲೆಬನಾನ್ನ ಬಿಂತ್ ಜಬೈಲ್ ನಗರವನ್ನು ತನ್ನ ಸೇನಾಪಡೆಗಳು ಸುತ್ತುವರೆದಿದ್ದು, ಆಕ್ರಮಣ ನಡೆಸಿವೆ ಎಂದು ಇಸ್ರೇಲ್ ಸೋಮವಾರ ತಿಳಿಸಿದೆ.

ಹಲವು ದಿನಗಳಿಂದ ಗಡಿಯಲ್ಲಿ ಉದ್ವಿಗ್ನತೆಯ ವಾತಾವರಣವಿದ್ದು, ನಗರದ ಪ್ರವೇಶ ದ್ವಾರದಲ್ಲೇ ಇಸ್ರೇಲ್ ಫಿರಂಗಿ ದಾಳಿ ನಡೆಸಿದೆ.

ಕಳೆದೊಂದು ವಾರದ ಅವಧಿಯಲ್ಲಿ ಮುಖಾಮುಖಿ ಘರ್ಷಣೆ ಹಾಗೂ ವಾಯುದಾಳಿಯಲ್ಲಿ ನೂರಕ್ಕೂ ಹೆಚ್ಚು ಹಿಜ್ಬುಲ್ಲಾ ಬಂಡುಕೋರರನ್ನು ಹತ್ಯೆ ಮಾಡಿದ ಬಳಿಕ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ತನ್ನ ಹಿಡಿತ ಬಿಗಿಗೊಳಿಸಿದೆ.

‘ಇಸ್ರೇಲ್ ಗಡಿಯಿಂದ ಐದು ಕಿ.ಮೀ. ದೂರದಲ್ಲಿರುವ ಬಿಂತ್ ಜಬೈಲ್ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ತಮ್ಮ ಸೇನೆಯೊಂದಿಗೆ ಸಂಘರ್ಷದಲ್ಲಿ ನಿರತರಾಗಿದ್ದರು. 98ನೇ ವಿಭಾಗದ ಪಡೆಗಳು ಈ ಹೋರಾಟವನ್ನು ಹತ್ತಿಕ್ಕಿದ್ದು, ಆಕ್ರಮಣ ಆರಂಭಿಸಿವೆ’ ಎಂದು ಸೇನಾಪಡೆಯ ಅರಬಿಕ್ ಭಾಷೆಯ ವಕ್ತಾರ ಕರ್ನಲ್ ಅವಿಚಯ್ ಅದ್ರೇ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.

ಲೆಬನಾನ್ನಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗಾಣಿಸಲು ಇಸ್ರೇಲ್ ಮತ್ತು ಲೆಬನಾನ್ನ ಅಧಿಕಾರಿಗಳು ವಾಷಿಂಗ್ಟನ್ನಲ್ಲಿ ಮಂಗಳವಾರ ಮಾತುಕತೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.