ಬೈರೂತ್: ಲೆಬನಾನ್ ಮತ್ತು ಇಸ್ರೇಲ್ ನಡುವೆ ನೇರ ರಾಜತಾಂತ್ರಿಕ ಮಾತುಕತೆಗಳು ಆರಂಭವಾಗಿದ್ದರೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದೆ.

ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ ನಾಲ್ವರು ಮೃತಪಟ್ಟು, ಆರು ಜನರ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಬತಿಯಾ ಪ್ರಾಂತ್ಯದಲ್ಲಿರುವ ಹಳ್ಳಿಯೊಂದರ ಮೇಲೆ ಇಸ್ರೇಲ್ ಮೂರು ಬಾರಿ ದಾಳಿ ನಡೆಸಿದೆ. ಗಾಯಗೊಂಡವರು ಆರೋಗ್ಯ ಇಲಾಖೆಯ ಕಾರ್ಯಕರ್ತರಾಗಿದ್ದಾರೆ ಎಂದು ಲೆಬನಾನ್ನ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
.ಯುದ್ಧ ನಿಲ್ಲಿಸಲು 15 ಅಂಶಗಳನ್ನು ಮುಂದಿಟ್ಟ ಟ್ರಂಪ್: ಹೆಚ್ಚಿದ ಅನಿಶ್ಚಿತತೆ.ದಾಳಿ ಮುಂದುವರಿಸಿದ ಇಸ್ರೇಲ್: ಬೈರೂತ್ನಲ್ಲಿ 12 ಮಂದಿ ಸಾವು.
ವೈದ್ಯಕೀಯ ತಂಡ ಹಾಗೂ ಆ್ಯಂಬುಲೆನ್ಸ್ ಮೇಲೆ ದಾಳಿ ಮಾಡಿರುವುದನ್ನು ಲೆಬನಾನ್ ಖಂಡಿಸಿದೆ. ಈ ದಾಳಿಗಳ ಕುರಿತಾಗಿ ಪ್ರತಿಕ್ರಿಯೆಗೆ ಇಸ್ರೇಲ್ ಮಿಲಿಟರಿ ತಕ್ಷಣ ಸ್ಪಂದಿಸಿಲ್ಲ. ಆದಾಗ್ಯೂ ಆ್ಯಂಬುಲೆನ್ಸ್ನಲ್ಲಿ ಇರಾನ್ ಬೆಂಬಲಿತ ಹಿಬ್ಬುಲ್ಲಾ ಬಂಡುಕೋರರು ಇರುವ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ಮೂಲಗಳು ತಿಳಿಸಿವೆ.

ಮಂಗಳವಾರದಿಂದ ವಾಷಿಂಗ್ಟನ್ನಲ್ಲಿ ಲೆಬನಾನ್ ಮತ್ತು ಇಸ್ರೇಲ್ ನಡುವೆ ಮಾತುಕತೆಗಳು ಆರಂಭವಾಗಿದ್ದು, ಲೆಬನಾನ್ನಲ್ಲಿ ನಡೆದಿರುವ ಇಸ್ರೇಲ್- ಹಿಬ್ಬುಲ್ಲಾ ಬಂಡುಕೋರರ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ತುರ್ತು ಅಗತ್ಯವನ್ನು ಅಮೆರಿಕದಲ್ಲಿನ ಲೆಬನಾನ್ ರಾಯಭಾರಿ ನಾಡಾ -ಹಮಾದೇಹ್ ಮೊವಾಡ್ ಇದೇ ಸಂದರ್ಭ ಪುನರುಚ್ಚರಿಸಿದರು. ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರಬಾರದು ಎಂದು ಸಭೆಯಲ್ಲಿ ಆಗ್ರಹಿಸಿದರು.

ಇರಾನ್ ದುರ್ಬಲಗೊಂಡಿದೆ. ಇನ್ನಾದರೂ ಲೆಬನಾನ್ ಸರ್ಕಾರವು ಹಿಬ್ಬುಲ್ಲಾ ಬಂಡುಕೋರರಿಗೆ ಪ್ರೋತ್ಸಾಹ ನೀಡಬಾರದು ಎಂದು ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರಿ ಯೆಚೀಲ್ ಲೈಟರ್ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು.
.ಮತ್ತೆ ಮಾತುಕತೆ | ಅಂತ್ಯದತ್ತ ಇರಾನ್ ಯುದ್ಧ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.Iran–Israel Conflict: ಇರಾನ್ ಶಸ್ತ್ರಾಗಾರದ ಮೇಲೆ ಇಸ್ರೇಲ್ ದಾಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.