ಕ್ವೀನ್ಸ್ಲ್ಯಾಂಡ್ (ಎಪಿ): ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಮಾಡುವ ನಿಟ್ಟಿನಲ್ಲಿ ಯುದ್ಧ ಮುಂದುವರಿಸಿರುವುದಾಗಿ ಇಸ್ರೇಲ್ ವಾದಿಸುತ್ತಿದೆ. ಆದರೆ, ಸ್ವತಃ ಇಸ್ರೇಲ್ ತನ್ನ ಅಣ್ವಸ್ತ್ರ ಬಲವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

‘ಇಸ್ರೇಲ್ ಅಪಾರ ಪ್ರಮಾಣದಲ್ಲಿ ಅಣ್ವಸ್ತ್ರ ಸಂಗ್ರಹ ಹೊಂದಿದೆ. ಇದು ಪರಮಾಣು ರಾಜಕೀಯ ಜಗತ್ತಿನ ಅತಿ ಕೆಟ್ಟ ರಹಸ್ಯ. 1950ರ ದಶಕದಿಂದಲೇ ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿದ್ದು, 1960ರ ವೇಳೆಗಾಗಲೇ ಸಂಪೂರ್ಣ ಅಣ್ವಸ್ತ್ರ ಸಾಮರ್ಥ್ಯ ಹೊಂದಿದ ದೇಶವಾಗಿತ್ತು’ ಎಂದು ಮೂಲಗಳು ಹೇಳಿವೆ.

ಇಸ್ರೇಲ್ ತನ್ನ ಅಣ್ವಸ್ತ್ರ ಬಲವನ್ನುಇದುವರೆಗೆ ಖಚಿತಪಡಿಸಿಲ್ಲ, ತಳ್ಳಿಹಾಕಿಯೂ ಇಲ್ಲ. ಅಣ್ವಸ್ತ್ರ ನಿಯಂತ್ರಣ ಸಂಸ್ಥೆಗಳ ಲೆಕ್ಕಾಚಾರದಂತೆ ಇಸ್ರೇಲ್ ಬಳಿ 80ರಿಂದ 90ರಷ್ಟು ಅಣ್ವಸ್ತ್ರಗಳಿವೆ.

‘ಪರಮಾಣು ದುರಂತವನ್ನು ತಪ್ಪಿಸಲು ರಾಷ್ಟ್ರಗಳು ಸಂಯಮ ದಿಂದ ಇರಬೇಕು’ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಕರೆ ನೀಡಿದೆ. 2015ರಲ್ಲಿ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತು. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿ ಜತೆಗೆ, ಪರಮಾಣು ಕಾರ್ಯಕ್ರಮದ ಜಂಟಿ ಸಮಗ್ರ ಕ್ರಿಯಾ ಯೋಜನೆಗೆ ಸಹಿ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.