ಟೆಲ್ ಅವೀವ್: ರಾತ್ರಿಯಿಡೀ ನಡೆದ ಸುದೀರ್ಘ ಅಧಿವೇಶನದಲ್ಲಿ ಇಸ್ರೇಲ್ ಸಂಸತ್ತು ಸೋಮವಾರ ತನ್ನ ವಾರ್ಷಿಕ ಬಜೆಟ್ ಅನ್ನು ಅಂಗೀಕರಿಸಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರವು ಅಕ್ಟೋಬರ್–ನವೆಂಬರ್ವರೆಗೆ ಅಧಿಕಾರದಲ್ಲಿ ಮುಂದುವರಿಯುವುದನ್ನು ಇದು ಖಚಿತಪಡಿಸಿದೆ.

ಅವಧಿಪೂರ್ವ ಚುನಾವಣೆಗಳನ್ನು ತಪ್ಪಿಸಲು ಏಪ್ರಿಲ್ 1ರ ಮೊದಲು ಬಜೆಟ್ ಅನ್ನು ಅಂಗೀಕರಿಸಬೇಕಾಗಿತ್ತು. ಆದಾಗ್ಯೂ, ನೆತನ್ಯಾಹು ಬಯಸಿದರೆ ಅದಕ್ಕೂ ಮೊದಲು ಅವಧಿಪೂರ್ವ ಚುನಾವಣೆಗಳನ್ನು ಘೋಷಿಸುವ ಹಕ್ಕನ್ನು ಇನ್ನೂ ಕಾಯ್ದಿರಿಸಿದ್ದಾರೆ.

ನೆತನ್ಯಾಹು ಸರ್ಕಾರದ ನಾಲ್ಕು ವರ್ಷಗಳ ಅಧಿಕಾರಾವಧಿಯು ಕೊನೆಯ ಘಟ್ಟದಲ್ಲಿದ್ದು, ಈ ವರ್ಷ ಅಕ್ಟೋಬರ್ ಅಂತ್ಯದ ವೇಳೆಗೆ ಚುನಾವಣೆ ನಡೆಸಬೇಕಾಗುತ್ತದೆ.

ಇರಾನ್ ಜೊತೆಗಿನ ಯುದ್ಧದ ವೆಚ್ಚಗಳು ಏರುತ್ತಿರುವಾಗ ಮತ್ತು ಗಾಜಾದ ಎರಡು ವರ್ಷಗಳ ಯುದ್ಧದಿಂದಾಗಿ ದೇಶ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ‘ತೀವ್ರ ಸಂಪ್ರದಾಯವಾದಿ’ ಸಮುದಾಯಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟಿರುವುದನ್ನು ವಿರೋಧ ಪಕ್ಷಗಳು ತೀವ್ರಗಾಗಿ ಖಂಡಿಸಿವೆ.

ರಾತ್ರೋರಾತ್ರಿ ದರೋಡೆ: ಮಾಜಿ ಪ್ರಧಾನಿ ‘ಹೊಟ್ಟೆಬಾಕತನ ಮತ್ತು ನುಣುಚಿಕೊಳ್ಳುವ ಹಾದಿ ಹಿಡಿದಿರುವ ಈ ಸರ್ಕಾರವು ರಾತ್ರೋರಾತ್ರಿ ದರೋಡೆ ನಡೆಸಿದೆ’ ಎಂದು ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರು ‘ಎಕ್ಸ್’ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನೆತನ್ಯಾಹು ಅವರಿಗೆ ನಫ್ತಾಲಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಕೊನೆಯ ಕ್ಷಣದಲ್ಲಿ ತಿದ್ದುಪಡಿ ಮಾಡಿ ‘ತೀವ್ರ ಸಂಪ್ರದಾಯವಾದಿ’ ಸಮುದಾಯಗಳ ಶಾಲೆಗಳಿಗೆ ಹೆಚ್ಚುವರಿಯಾಗಿ 250 ಮಿಲಿಯನ್ ಡಾಲರ್ ನೀಡಿದ್ದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಸೈನ್ಯಕ್ಕೆ ಸೈನಿಕರ ತುರ್ತು ಅಗತ್ಯವಿದ್ದರೂ ಈ ಸಮುದಾಯದ ಯುವಕರು ಸೇನೆಗೆ ಸೇರಲು ನಿರಾಕರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಸ್ರೇಲ್ನಲ್ಲಿ ಬಹುತೇಕ ಯಹೂದಿಗಳಿಗೆ ಸೇನಾ ಸೇವೆ ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.