ನವದೆಹಲಿ: ಭಾರತದ ಧ್ವಜ ಹೊಂದಿರುವ ಎಲ್ಪಿಜಿ ಹೊತ್ತಿರುವ ‘ಜಗ್ ವಿಕ್ರಮ್’ ಹಡಗು ಹೊರ್ಮುಜ್ ಜಲಸಂಧಿಯನ್ನು ದಾಟಿದೆ.

ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬಳಿಕ, ಜಲಸಂಧಿ ದಾಟಿದ ದೇಶದ ಮೊದಲ ಹಡಗು ಇದಾಗಿದೆ.

ಜಗ್ ವಿಕ್ರಮ್, ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿಯನ್ನು ದಾಟಿದ 9ನೇ ಹಡಗು ಆಗಿದೆ. ಇನ್ನೂ ಭಾರತದ ಧ್ವಜ ಹೊಂದಿರುವ 15 ಹಡಗುಗಳು ಜಲಸಂಧಿಯಲ್ಲಿದ್ದು, ಭಾರತಕ್ಕೆ ಬರಲು ಮಾರ್ಗಕ್ಕಾಗಿ ಕಾಯುತ್ತಿವೆ.

ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿ ಮಾಲೀಕತ್ವದ ಜಗ್ ವಿಕ್ರಮ್ ಮಧ್ಯಮ ಗಾತ್ರದ ಹಡಗು ಆಗಿದೆ. ಈ ಹಡಗು 20,400 ಟನ್ ಸಾಮರ್ಥ್ಯದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊಂದಿದ್ದು, ಏಪ್ರಿಲ್ 15ರಂದು ಮುಂಬೈಗೆ ಬರಲಿದೆ ಎಂದು ಶಿಪ್ ಟ್ರ್ಯಾಕಿಂಗ್ ದತ್ತಾಂಶವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.