ವಾಷಿಂಗ್ಟನ್: ಮಧ್ಯಪ್ರಾಚ್ಯ ದೇಶಗಳ ಸಂಘರ್ಷ, ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಅಮೆರಿಕ ವಿದೇಶಾಂಗ ಸಚಿವ ಟೋನಿ ಬ್ಲಿಂಕೆನ್ ಅವರೊಂದಿಗೆ ಚರ್ಚಿಸಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಾಷಿಂಗ್ಟನ್‌ಗೆ ಆಗಮಿಸಿದ್ದಾರೆ.
ನಾಳೆ (ಮಂಗಳವಾರ) ಬ್ಲಿಂಕನ್ ಅವರನ್ನು ಜೈಶಂಕರ್ ಭೇಟಿಯಾಗಲಿದ್ದಾರೆ. ಜತೆಗೆ ಬೈಡನ್ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಜೈಶಂಕರ್ ಅವರು ಥಿಂಕ್– ಟ್ಯಾಂಕ್ ಸಮುದಾಯದವರೊಂದಿಗೂ ಸಂವಾದ ನಡೆಸಲಿದ್ದಾರೆ. ವೇಗದ ಜಾಗತಿಕ ಬೆಳವಣಿಗೆಗಳ ನಡುವೆ, ಯುಎಸ್ ಜತೆಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳು ಹೆಚ್ಚು ವಿಸ್ತಾರವಾಗಿ ಬೆಳೆದಿದೆ ಎಂದು ಥಿಂಕ್–ಟ್ಯಾಂಕ್ ಅಭಿಪ್ರಾಯಪಟ್ಟಿದೆ.
ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಇದು ಜೈಶಂಕರ್ ಅವರ ಮೊದಲ ಅಮೆರಿಕ ಭೇಟಿಯಾಗಿದೆ.