ಟೋಕಿಯೊ/ಪಾಮ್ ಬೀಚ್, ಫ್ಲೋರಿಡಾ: ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಮಧ್ಯಪ್ರಾಚ್ಯಕ್ಕೆ ಯುದ್ಧ ನೌಕೆಗಳನ್ನು ಕಳುಹಿಸುವ ಯೋಜನೆ ಇಲ್ಲ ಎಂದು ಜಪಾನ್ ಮತ್ತು ಆಸ್ಟ್ರೇಲಿಯಾ ಸೋಮವಾರ ಹೇಳಿವೆ.

ಹೊರ್ಮುಜ್ ಜಲಸಂಧಿಯನ್ನು ಸುರುಕ್ಷಿತವಾಗಿರಿಸಲು ಮಿತ್ರ ದೇಶಗಳಾದ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್ ಯುದ್ಧ ನೌಕೆಗಳನ್ನು ರವಾನಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಕರೆ ನೀಡಿದ್ದರು. ಈ ಬೆನ್ನಲೇ ಜಪಾನ್ ಮತ್ತು ಆಸ್ಟ್ರೇಲಿಯಾ ಹೀಗೆ ಪ್ರತಿಕ್ರಿಯಿಸಿವೆ.

ಹೊರ್ಮುಜ್ ಜಲಸಂಧಿಯಿಂದ ನಮಗೆ (ಅಮೆರಿಕ) ಏನಾಗಬೇಕಿಲ್ಲ. ಕೊಲ್ಲಿಯಿಂದ ತೈಲವನ್ನು ಹೆಚ್ಚು ಅವಲಂಬಿಸಿರುವ ರಾಷ್ಟ್ರಗಳು ಈ ಜಲಸಂಧಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿವೆ ಎಂದೂ ಟ್ರಂಪ್ ಹೇಳಿದ್ದರು.

ಫ್ಲೊರಿಡಾದಿಂದ ವಾಷಿಂಗ್ಟನ್ಗೆ ಏರ್ಫೋರ್ಸ್ ಒನ್ ವಿಮಾನದಲ್ಲಿ ತೆರಳುವಾಗ ಮಾತನಾಡಿದ್ದ ಅವರು, ಈ ದೇಶಗಳು ಜಲಸಂಧಿ ಬಳಿ ತೈಲ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಿದರೆ ಒಳ್ಳೆಯದು. ನಾವೂ ಅವರಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು.

ಮಧ್ಯಪ್ರಾಚ್ಯದಲ್ಲಿ ತೈಲ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಯುದ್ಧ ನೌಕೆಗಳನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಜಪಾನ್ ಸೋಮವಾರ ಹೇಳಿದೆ.

ಬೆಂಗಾವಲು ಯುದ್ಧ ನೌಕೆಗಳನ್ನು ಕಳುಹಿಸುವ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸ್ವತಂತ್ರವಾಗಿ ಮತ್ತು ಕಾನೂನು ಚೌಕಟ್ಟಿನೊಳಗೆ ಏನು ಮಾಡಬಹುದು ಎಂಬ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದು ಜಪಾನ್ ಪ್ರಧಾನಿ ತಾಕೈಚಿ ಹೇಳಿದ್ದಾರೆ.

ಅಮೆರಿಕದ ಮಿತ್ರ ರಾಷ್ಟ್ರವಾದ ಆಸ್ಟ್ರೇಲಿಯಾ ಕೂಡ, ನೌಕಾಯುದ್ಧ ನೌಕೆಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ.
.‘ಹೊರ್ಮುಜ್‘ ಕಾವಲಿಗೆ ಯುದ್ಧ ನೌಕೆ ಕಳುಹಿಸಿ: 7 ರಾಷ್ಟ್ರಗಳಿಗೆ ಟ್ರಂಪ್ ಒತ್ತಾಯ.
ಹೊರ್ಮುಜ್ ಜಲಸಂಧಿ ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ, ಆದರೆ ಅದನ್ನು ಮುಕ್ತವಾಗಿಸಲು ಸಹಕರಿಸುವಂತೆ ಅಮೆರಿಕ ತನ್ನನ್ನು ಕೇಳಿಲ್ಲ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಸಂಪುಟದ ಸದಸ್ಯೆ ಕ್ಯಾಥರೀನ್ ಕಿಂಗ್ ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯನ್ನು ರಕ್ಷಿಸಲು ಯುರೋಪಿಯನ್ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರಿದ್ದ ಟ್ರಂಪ್, ನ್ಯಾಟೋ ಸದಸ್ಯರು ಅಮೆರಿಕದ ನೆರವಿಗೆ ಬರದಿದ್ದರೆ, ತುಂಬಾ 'ಕರಾಳ ಭವಿಷ್ಯ'ವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಟ್ರಂಪ್ ಅವರ ಈ ಕರೆಯನ್ನು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ‘ಭಿಕ್ಷಾಟನೆ’ ಎಂದು ಜರಿದಿದ್ದರು. ಅಲ್ಲದೇ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೆಲ್ ಜತೆ ಕೈಜೋಡಿಸದಂತೆ ಇರಾನ್ ಇತರ ದೇಶಗಳಿಗೆ ಎಚ್ಚರಿಕೆಯನ್ನೂ ಅವರು ರವಾನಿಸಿದ್ದಾರೆ.
.ಹೋರ್ಮುಜ್ ಜಲಸಂಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದ ಡೊನಾಲ್ಡ್ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.