ಪಿಟಿಐಗೆ ಸಂದರ್ಶನ ನೀಡಿದ ಖಾದರ್ ಅವರು, ‘ಪ್ರವಾಹ ಅಥವಾ ಪ್ರಾಕೃತಿಕ ವಿಕೋಪಕ್ಕೆ ಮತ್ತೊಬ್ಬರನ್ನು ಹೇಗೆ ದೂಷಿಸುತ್ತೀರಿ?. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಸಾಮಾನ್ಯ. ಭಾರತದಿಂದ ಸ್ವಲ್ಪ ನೀರು ಬಿಟ್ಟಿರುವುದರಿಂದ ಸಮಸ್ಯೆಯಾಗಿದೆ. ಆದರೆ, ಮಳೆಗಾಲದಲ್ಲಿ ನೀರು ಬಿಡದೇ ಇದ್ದರೆ ಅಣೆಕಟ್ಟೆಯು ಒಡೆಯುತ್ತದೆ. ಇದರಿಂದ ಭೀಕರ ಅವಘಡ ಸಂಭವಿಸುತ್ತದೆ’ ಎಂದು ಹೇಳಿದರು.