ನಂ.1 ಐಟಿ ಕಂಪನಿ ಎನಿಸಿರುವ ಟಿಸಿಎಸ್ನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಮತಾಂತರ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಕಂಪನಿಗಳಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿತ್ತು. ಈ ಘಟನೆ ಮಾಸುವ ಮುನ್ನವೇ ಪ್ರತಿಷ್ಠಿತ ಹಣಕಾಸು ಸಂಸ್ಥೆ ಜೆಪಿ ಮಾರ್ಗನ್ನಲ್ಲಿ ಭಾರತ ಮೂಲದ ಪುರುಷ ಉದ್ಯೋಗಿಯೊಬ್ಬರು ತಮ್ಮ ಹಿರಿಯ ಮಹಿಳಾ ಅಧಿಕಾರಿಯಿಂದ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ನ್ಯೂಯಾರ್ಕ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಜೆಪಿ ಮಾರ್ಗನ್ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕಿ ಲಾರ್ನಾ ಹಜ್ದಿನಿ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಅಸಹಜ ಲೈಂಗಿಕ ಕೃತ್ಯಗಳಿಗೆ ಒತ್ತಾಯಿಸುತ್ತಿದ್ದರು. ನಿರಾಕರಿಸಿದಾಗ ಉದ್ಯೋಗದಿಂದ ತೆಗೆದುಹಾಕುವ ಬೆದರಿಕೆ ಹಾಕುತ್ತಿದ್ದರು’ ಎಂದು ಸಂಸ್ಥೆಯ ಮಾಜಿ ಉದ್ಯೋಗಿ ಚಿರಾಯು ರಾಣಾ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ಈ ಪ್ರಕರಣ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಜಾನ್ ಡಿಯೊ ಎನ್ನುವ ಹೆಸರಿನಲ್ಲಿ ಲಾರ್ನಾ ಹಜ್ದಿನಿ ವಿರುದ್ಧ ರಾಣಾ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವೇನು?

ಹಜ್ದಿನಿ, ರಾಣಾ ಅವರಿಗೆ ವಯಾಗ್ರದಂತಹ ಮಾದಕ ದ್ರವ್ಯಗಳನ್ನು ನೀಡಿ, ತಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಬೋನಸ್ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಇದಲ್ಲದೆ ರಾಣಾ ವಾಸಿಸುತ್ತಿದ್ದ ಮನೆಗೂ ತೆರಳಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ‘ಕಪ್ಪು ವರ್ಣೀಯ ಬಾಲಕ’, ‘ಭಾರತದ ಕಪ್ಪು ವರ್ಣೀಯ ಬಾಲಕ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾನೆ’ ಎಂದೆಲ್ಲ ಜನಾಂಗೀಯ ತಾರತಮ್ಯ ಮಾಡುತ್ತಿದ್ದರು. 2024ರಲ್ಲಿ ಹಜ್ದಿನಿ ಮತ್ತು ನಾನು ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಿನಿಂದ ಇದು ನಡೆಯುತ್ತಿತ್ತು ಎಂದು ರಾಣಾ ದೂರಿನಲ್ಲಿ ತಿಳಿಸಿದ್ದಾರೆ.

ನೀನು ನನ್ನ ಮಾತು ಕೇಳದಿದ್ದರೆ ನಿನ್ನ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ರಾಣಾ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

2025ರ ಮೇನಲ್ಲಿ ರಾಣಾ ಕಂಪನಿಯಲ್ಲಿ ಎಚ್ಆರ್ಗೆ ದೂರು ನೀಡಿದ್ದರು. ಜನಾಂಗೀಯ, ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಮಾಡುತ್ತಿರುವುದರ ಕುರಿತು ಆರೋಪಿಸಿದ್ದರು. ಆದರೆ ಸಂಸ್ಥೆ ಅವರ ದೂರನ್ನು ನಿರಾಕರಿಸಿತ್ತು.

ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ವೇಳೆ ರಾಣಾ ದೂರಿನಲ್ಲಿ ತಿಳಿಸಿದ ವಿಚಾರಗಳಿಗೆ ಪೂರಕವಾಗಿ ಯಾವುದೇ ಪುರಾವೆಗಳು ದೊರೆತಿಲ್ಲ. ಪ್ರಕರಣದ ತನಿಖೆಯ ವೇಳೆ ಹಲವು ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಅವರೆಲ್ಲರೂ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ ಎಂದು ಕಂಪನಿಯ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ ಹಜ್ದಿನಿ ಪರ ವಕೀಲರು ಆರೋಪವನ್ನು ನಿರಾಕರಿಸಿದ್ದು, ‘ಆ ವ್ಯಕ್ತಿಯ ಬಳಿ ಹಜ್ದಿನಿ ಎಂದಿಗೂ ಅನುಚಿತವಾಗಿ ನಡೆದುಕೊಂಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಿರಾಯು ರಾಣಾ ಯಾರು?

35 ವರ್ಷದ ಚಿರಾಯು ರಾಣಾ ಭಾರತೀಯ ಮೂಲದವರು. ಜೆಪಿ ಮಾರ್ಗನ್ನಲ್ಲಿ ಲಿವರೇಜ್ಡ್ ಫೈನಾನ್ಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕನಾಗಿ ಮತ್ತು ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅವರು, ಬ್ರೆಗಲ್ ಸೇಜ್ಮೌಂಟ್ನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ‘ಮನಿ ಕಂಟ್ರೋಲ್’ ವರದಿ ತಿಳಿಸಿದೆ.

ಲಾರ್ನಾ ಹಜ್ದಿನಿ ಯಾರು?

ವರದಿಗಳ ಪ್ರಕಾರ, 37 ವರ್ಷದ ಲಾರ್ನಾ ಹಜ್ದಿನಿ ಹಣಕಾಸು ವಿಭಾಗದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. ಜೆಪಿ ಮಾರ್ಗನ್ಗೆ ಬರುವ ಮುನ್ನ ಅವರು ಖಾಸಗಿ ಷೇರುಗಳ ಕಂಪನಿಗಳಿಗೆ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. 2011ರಿಂದ ಕಳೆದ 15 ವರ್ಷಗಳಿಂದ ಜೆಪಿ ಮಾರ್ಗನ್ನಲ್ಲಿ ಅವರು ಕೆಲಸ ಮಾಡುತ್ತಿದ್ದು, ಪ್ರಸ್ತುತ, ಹಣಕಾಸು ವಿಭಾಗದಲ್ಲಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಲಾರ್ನಾ ಮತ್ತು ರಾಣಾ ಪ್ರಕರಣದ ಕುರಿತ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಕೆಲಸದ ಸ್ಥಳದಲ್ಲಿ ಪುರುಷರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಮತ್ತು ಅಧಿಕಾರದ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.