ವಾಷಿಂಗ್ಟನ್: ಅಮೆರಿಕದ ಗುಪ್ತಚರ ಸಂಸ್ಥೆ ಎಫ್ಬಿಐ (ಎಫ್ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರು ಈಗ ವಿವಾದದ ಸುಳಿಯಲ್ಲಿದ್ದಾರೆ.

ಅವರ ಅತಿಯಾದ ಕುಡಿತ ಹಾಗೂ ಕರ್ತವ್ಯದ ಮೇಲಿನ ನಿರ್ಲಕ್ಷ್ಯ ಕುರಿತು 'ದಿ ಅಟ್ಲಾಂಟಿಕ್' ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಅಮೆರಿಕದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇತ್ತೀಗೆ ಕಾಶ್ ಪಟೇಲ್ ಇಟಲಿಯಲ್ಲಿ ಅಮೆರಿಕದ ಒಲಿಂಪಿಕ್ ಹಾಕಿ ತಂಡದ ಸದಸ್ಯರೊಂದಿಗೆ ಬಿಯರ್ ಕುಡಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ 'ದಿ ಅಟ್ಲಾಂಟಿಕ್' ಪತ್ರಿಕೆ ಪ್ರಕಟಿಸಿದ ವರದಿಯು ಪಟೇಲ್ ಅವರಿಗೆ ಹೆಚ್ಚಿನ ಸಂಕಷ್ಟ ತಂದೊಡ್ಡಿದೆ.

ಪಟೇಲ್ ಅವರು ಅತಿಯಾಗಿ ಮದ್ಯಪಾನ ಮಾಡುತ್ತಾರೆ ಮತ್ತು ಖಾಸಗಿ ಕ್ಲಬ್ಗಳಲ್ಲಿ ಪ್ರಜ್ಞೆ ತಪ್ಪುವಷ್ಟು ಕುಡಿದಿರುತ್ತಾರೆ. ಈ ಕಾರಣದಿಂದಾಗಿ ಅವರು ಕಚೇರಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಮತ್ತು ಇದರಿಂದ ಉನ್ನತ ಮಟ್ಟದ ಭದ್ರತಾ ಸಭೆಗಳನ್ನು ಪದೇ ಪದೇ ಮುಂದೂಡಲಾಗುತ್ತಿದೆ ಎಂದು ಸಹೋದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷವಂತೂ ಪಟೇಲ್ ಅವರು ಬಾಗಿಲು ಹಾಕಿಕೊಂಡು ಕುಡಿಯುತ್ತಿದ್ದಾಗ ಭದ್ರತಾ ಸಿಬ್ಬಂದಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಬಾಗಿಲು ಮುರಿಯುವ ಉಪಕರಣಗಳನ್ನು ತರಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಶ್ ಪಟೇಲ್ ಅವರು ವಿದ್ಯಾರ್ಥಿಯಾಗಿದ್ದಾಗ ಅತಿಯಾಗಿ ಮಧ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸಿದ್ದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಅವರನ್ನು ಎರಡು ಸಲ ಬಂಧಿಸಲಾಗಿತ್ತು ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.

2,100 ಕೋಟಿ ಮಾನನಷ್ಟ ಮೊಕದ್ದಮೆ

ಈ ಎಲ್ಲ ಆರೋಪಗಳನ್ನು ಪಟೇಲ್ ನಿರಾಕರಿಸಿದ್ದಾರೆ. ಪತ್ರಿಕೆ ದುರುದ್ದೇಶದಿಂದ ಈ ವರದಿ ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೆಲಸದ ಸಮಯದಲ್ಲಿ ಎಂದಿಗೂ ಮದ್ಯಪಾನ ಮಾಡಿಲ್ಲ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಇದೇ ಕಾರಣಕ್ಕೆ ಪತ್ರಿಕೆ ವಿರುದ್ಧ ನಾನು ₹ 2,100 ಕೋಟಿ ($ 250 ಮಿಲಿಯನ್) ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಕಾಶ್ ಹೇಳಿದ್ದಾರೆ.

ಈ ಪ್ರಕರಣ ಅಮೆರಿಕದ ನ್ಯಾಯಾಲಯದ ಮೆಟ್ಟಿಲೇರಿದ್ದು, ಎಫ್ಬಿಐ ಮುಖ್ಯಸ್ಥರ ಭವಿಷ್ಯ ಏನಾಗಲಿದೆ ಎಂದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.