ಸೋಲ್: ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಸೇನಾ ತರಬೇತಿಯಲ್ಲಿ ಅವರ ಅಪ್ರಾಪ್ತ ವಯಸ್ಸಿನ ಪುತ್ರಿ ಯುದ್ಧ ಟ್ಯಾಂಕ್ ಚಲಾಯಿಸಿದ್ದಾರೆ. ಉತ್ತರಾಧಿಕಾರಿ ಸ್ಥಾನಕ್ಕೆ ಪುತ್ರಿಯನ್ನು ಕಿಮ್ ಸಜ್ಜುಗೊಳಿಸುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಇದು ಮತ್ತಷ್ಟು ಪುಷ್ಟಿ ನೀಡಿದೆ.

13 ವರ್ಷದ ಕಿಮ್ ಜು ಎ ಅವರು ಸೇನಾ ವಾಹನ ಚಲಾಯಿಸುತ್ತಿರುವ ಹಾಗೂ ಅವರ ಪಕ್ಕದಲ್ಲಿ ಕಿಮ್ ಮತ್ತು ಯೋಧರು ಇರುವ ವಿಡಿಯೊ ಮತ್ತು ಚಿತ್ರಗಳನ್ನು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ ಶುಕ್ರವಾರ ಪ್ರಸಾರ ಮಾಡಿದೆ.

ಸೇನೆಯ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ತಂದೆಯೊಂದಿಗೆ ಕಿಮ್ ಜು ಎ ಅವರು 2022ರಿಂದಲೇ ಭಾಗವಹಿಸುತ್ತಿದ್ದಾರೆ.

ಕಿಮ್ ಜು ಎ ಅವರನ್ನು ಉತ್ತರ ಕೊರಿಯಾದ ಉತ್ತರಾಧಿಕಾರಿಯಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಅಲ್ಲಿನ ಬೇಹುಗಾರಿಕಾ ಸಂಸ್ಥೆ ಕಳೆದ ತಿಂಗಳು ಹೇಳಿತ್ತು. ಆದರೆ, ಕಿಮ್ ಪುತ್ರಿ ವಯಸ್ಸಿನಲ್ಲಿ ಕಿರಿಯರಾಗಿರುವುದರಿಂದ ಮತ್ತು ಉತ್ತರ ಕೊರಿಯಾದಲ್ಲಿ ಪುರುಷ ಪ್ರಧಾನ ಅಧಿಕಾರ ವ್ಯವಸ್ಥೆ ಇರುವುದರಿಂದ ಇದು ಸಾಧ್ಯವಾಗದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.