ನ್ಯೂಯಾರ್ಕ್: ‘ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ, ಕೊಹಿನೂರು ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ’ ಎಂದು ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಬುಧವಾರ ಹೇಳಿದ್ದಾರೆ.

9/11 ಉಗ್ರ ದಾಳಿಯ ಸಂತ್ರಸ್ತರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಮ್ದಾನಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕೊಹಿನೂರ್ ವಜ್ರದ ಬಗ್ಗೆ ದೊರೆ ಬಳಿ ಚರ್ಚಿಸುವುದಾಗಿ ಹೇಳಿದ್ದಾರೆ.

ದಿನದ ಕೊನೆಯಲ್ಲಿ ಚಾರ್ಲ್ಸ್ ಅವರೊಂದಿಗೆ ಮಮ್ದಾನಿ ಮಾತನಾಡಿದ್ದರು. ಆದರೆ, ಈ ಸಂದರ್ಭದಲ್ಲಿ ಅವರು ವಜ್ರದ ವಿಷಯವನ್ನು ಪ್ರಸ್ತಾಪಿಸಿದರೇ? ಎಂಬುದು ತಿಳಿದುಬಂದಿಲ್ಲ.

‘105 ಕ್ಯಾರೆಟ್ ತೂಕದ ಕೊಹಿನೂರ್ ವಜ್ರವನ್ನು ಬ್ರಿಟನ್ ಹಿಂತಿರುಗಿಸಬೇಕು’ ಎಂದು ಭಾರತ ಈ ಹಿಂದೆಯೂ ಹಲವಾರು ಬಾರಿ ಒತ್ತಾಯಿಸಿದೆ.

1849ರಲ್ಲಿ ಪಂಜಾಬ್ ಸಾಮ್ರಾಜ್ಯ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮಧ್ಯೆ ನಡೆದ ಒಪ್ಪಂದದಲ್ಲಿ ಕೊಹಿನೂರ್ ವಜ್ರವನ್ನು ಈಸ್ಟ್ ಇಂಡಿಯಾ ಕಂಪನಿಗೆ ನೀಡಲಾಯಿತು. ಕಂಪನಿಯು ಅದನ್ನು ಬ್ರಿಟನ್ ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿತು. ಅಂದಿನಿಂದ, ಬ್ರಿಟನ್ ರಾಣಿಯರಾದ ವಿಕ್ಟೋರಿಯಾ, ಅಲೆಕ್ಸಾಂಡ್ರಾ, ಮೇರಿ, ಎಲಿಜಬೆತ್ ಮತ್ತು ಎರಡನೇ ಎಲಿಜಬೆತ್ ಅವರು ಈ ವಜ್ರವನ್ನು ಬಳಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.