ಸದ್ಯ ಪೋಲೆಂಡ್ ಭೇಟಿಯಲ್ಲಿರುವ ಮೋದಿ ಅವರು, ಇದೇ 23ರಂದು ಕೀವ್‌ಗೆ ಭೇಟಿ ಕೊಡಲಿದ್ದಾರೆ. ಅಂದು ಸುಮಾರು ಏಳು ತಾಸು ಅವರು ಕೀವ್‌ನಲ್ಲಿ ಇರಲಿದ್ದಾರೆ. ಪೋಲೆಂಡ್‌ನಿಂದ ಕೀವ್‌ಗೆ ‘ರೈಲ್ ಫೋರ್ಸ್ ಒನ್’ ರೈಲಿನಲ್ಲಿ ಮೋದಿ ಅವರು ಹೋಗಿ ಬರಲಿದ್ದಾರೆ. ಎರಡೂ ಕಡೆಯ ಪ್ರಯಾಣ ಅವಧಿ ಒಟ್ಟು 20 ತಾಸು ಆಗಲಿದೆ. 1991ರಲ್ಲಿ ಉಕ್ರೇನ್ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.