ಲಂಡನ್: ಮೇಡಮ್ ಟುಸಾಡ್ಸ್ ಮ್ಯೂಸಿಯಂನ ಕೇಂದ್ರ ಕಚೇರಿಯಲ್ಲಿ ‘ಐಕಾನ್ ಆಫ್ ಇಂಡಿಯಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಭಾರತದ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ಖ್ಯಾತನಾಮರ ಮೇಣದ ಪ್ರತಿಮೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತದ 13 ಪ್ರಖ್ಯಾತ ಚಿತ್ರ ತಾರೆಯರು ಮತ್ತು ಕ್ರಿಕೆಟ್ ಆಟಗಾರರ ಪ್ರತಿಮೆಗಳನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಈ ಪ್ರದರ್ಶನ ಜರುಗಲಿದೆ.

‘ಭಾರತದ ಸಿನಿಮಾ ಮತ್ತು ಕ್ರಿಕೆಟ್ ಬಗ್ಗೆ ಲಂಡನ್ ಹೊಂದಿರುವ ಪ್ರೀತಿಯು ಪ್ರತಿವರ್ಷ ಬಲಿಷ್ಠಗೊಳ್ಳುತ್ತಿದೆ’ ಎಂದು ಮೇಡಮ್ ಟುಸಾಡ್ಸ್ ಮ್ಯೂಸಿಯಂ ಪ್ರಧಾನ ವ್ಯವಸ್ಥಾಪಕ ಸ್ಟೀವ್ ಬ್ಲ್ಯಾಕ್ಬರ್ನ್ ಹೇಳಿದ್ದಾರೆ.

‘ಐಕಾನ್ಸ್ ಆಫ್ ಇಂಡಿಯಾ ಮೂಲಕ ಅಪಾರ ಅಭಿಮಾನಿಗಳನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿದ್ದೇವೆ. ಇದೊಂದು ಜಾಗತಿಕ ಸಂಭ್ರಮ. ಬ್ಯಾಂಕಾಕ್ನಿಂದ ವಿರಾಟ್ ಕೊಹ್ಲಿ ಅವರ ಪ್ರತಿಮೆ, ನ್ಯೂಯಾರ್ಕ್ನಿಂದ ನಟಿ ಐಶ್ವರ್ಯ ರೈ ಅವರ ಮೇಣದ ಪ್ರತಿಮೆಗಳನ್ನು ಇಲ್ಲಿಗೆ ತರಲಾಗುತ್ತಿದೆ’ ಎಂದು ಅವರು ಹೇಳಿದರು.

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ, ಹೃತಿಕ್ ರೋಷನ್, ಕತ್ರಿನಾ ಕೈಫ್, ಮಾಧುರಿ ದೀಕ್ಷಿತ್, ರಣಬೀರ್ ಕಪೂರ್, ಕಾಜಲ್ ಅಗರ್ವಾಲ್ ಹೀಗೆ ಹಲವರ ಪ್ರತಿಮೆಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ.

ಇಂಗ್ಲೆಂಡ್ನಲ್ಲಿರುವ ಭಾರತದ ರಾಯಭಾರ ಕಚೇರಿಯು ವಸ್ತುಪ್ರದರ್ಶನಕ್ಕೆ ಸಹಕಾರ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.