ನವದೆಹಲಿ: 'ಧೈರ್ಯ ಮತ್ತು ದಿಟ್ಟತನ ಏನು ಎಂಬುದನ್ನು ಇರಾನ್ ಜಗತ್ತಿಗೆ ಕಲಿಸಿಕೊಟ್ಟಿದೆ' ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಹೇಳಿದ್ದಾರೆ.

ಅಲ್ಲದೆ ಭಾರತದ ವಿದೇಶಾಂಗ ನೀತಿಯ ಕುರಿತು ಮಹುವಾ ಪ್ರಶ್ನಿಸಿದ್ದಾರೆ.

ಬುಧವಾರದಂದು ಅಮೆರಿಕ ಹಾಗೂ ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಇರಾನ್ ಜಗ್ಗಲಿಲ್ಲ ಎಂದು ವರದಿಯಾಗಿತ್ತು.
.ಟ್ರಂಪ್ ಸೂಚನೆಯಂತೆ ಪಾಕ್ ಪ್ರಧಾನಿಯಿಂದ ಮೆಸೇಜ್ ಕಾಪಿ-ಪೇಸ್ಟ್? ಟ್ರೋಲ್ಗೆ ಗುರಿ.ಸಂಪೂರ್ಣ ಹಾನಿ ಭರಿಸಬೇಕು: ಅಮೆರಿಕ ಎದುರು ಇರಾನ್ ಇಟ್ಟಿರುವ 10 ಷರತ್ತುಗಳಿವು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಹುವಾ, 'ಧೈರ್ಯ ಮತ್ತು ದಿಟ್ಟತನವನ್ನು ಇರಾನ್ ಜಗತ್ತಿಗೆ ತೋರಿಸಿಕೊಟ್ಟಿದೆ. ಬಹುಶಃ ನಮ್ಮ ದೇಶದ ನಾಯಕತ್ವವು ಬೆದರಿಕೆ ಒಡ್ಡುವವರನ್ನು ಕೆಚ್ಚೆದೆಯಿಂದ ಎದುರಿಸಬೇಕು' ಎಂದಿದ್ದಾರೆ.

'ಭಾರತವು ತನ್ನದೇ ಆದ ಕದನ ವಿರಾಮ, ತನ್ನದೇ ಆದ ವ್ಯಾಪಾರ ಒಪ್ಪಂದ ಮತ್ತು ತನ್ನದೇ ಆದ ಇಂಧನ ನೀತಿಯನ್ನು ಘೋಷಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 50ಕ್ಕೂ ಹೆಚ್ಚು ಸಲ ಹೇಳಿಕೆ ನೀಡಿದ್ದರು. ಆದರೆ ಭಾರತ ಹಾಗೂ ಪಾಕ್ ನಡುವಣ ಬಿಕ್ಕಟ್ಟಿನಲ್ಲಿ ಮೂರನೇ ದೇಶದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

ಇನ್ನು ಡೊನಾಲ್ಡ್ ಟ್ರಂಪ್ ಅವರು ಬಯಸಿದಂತೆ ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿತ್ತು ಮತ್ತು ಅಮೆರಿಕದ ನಿರ್ದೇಶನದಂತೆ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಿತ್ತು ಎಂಬುದಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.