ವಾಷಿಂಗ್ಟನ್: ‘ಇರಾನ್ ಜೊತೆಗಿನ ಮಾತುಕತೆಯಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದರೂ, ಇತರೆ ಆಯ್ಕೆಗಳು ಕೂಡ ಮುಕ್ತವಾಗಿವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.

‘ಬಹಿರಂಗವಾಗಿ ಆಶಾವಾದಿಯಾಗಿ ಧ್ವನಿಸದಂತೆ ಎಚ್ಚರಿಕೆ ವಹಿಸಿದ್ದೇವೆ. ಪಾಕಿಸ್ತಾನ ಹಾಗೂ ಅವುಗಳ ಮಿತ್ರಪಕ್ಷಗಳು ರಾಜತಾಂತ್ರಿಕ ಪರಿಹಾರ ಕಂಡುಹಿಡಿಯಲು ಶ್ರಮಿಸುತ್ತಿವೆ. ಕೆಲವು ಅಧಿಕಾರಿಗಳು ಶುಕ್ರವಾರವೇ ಟೆಹರಾನ್ಗೆ ತೆರಳಿದ್ದು, ಇತರೆ ಆಯ್ಕೆಗಳ ಕುರಿತಂತೆ ಮುಕ್ತವಾಗಿದ್ದೇವೆ’ ಎಂದು ತಿಳಿಸಿದ್ದಾರೆ.

‘ಒಳ್ಳೆಯ ಒಪ್ಪಂದ ಮಾಡಿಕೊಳ್ಳುವುದು ಅಧ್ಯಕ್ಷ ಟ್ರಂಪ್ ಅವರ ಆದ್ಯತೆಯಾಗಿದೆ. ಅದು ಅವರ ಪ್ರಮುಖ ಆದ್ಯತೆಯಾಗಿರಲಿದೆ. ನಾವು ಕೂಡ ಒಳ್ಳೆಯ ಒಪ್ಪಂದಕ್ಕೆ ಯತ್ನಿಸುತ್ತಿದ್ದು, ಅದು ಶ್ರೇಷ್ಠವಾಗಿರಲಿದೆ. ಒಂದೊಮ್ಮೆ ಒಳ್ಳೆಯ ಒಪ್ಪಂದ ನೆರವೇರದಿದ್ದರೆ, ಇತರೆ ಆಯ್ಕೆಗಳ ಕುರಿತಂತೆ ಅಧ್ಯಕ್ಷರು ಅನುಮೋದನೆ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಹೊರ್ಮುಜ್ ಜಲಸಂಧಿಗೆ ಸುಂಕ ವಿಧಿಸುವ ಇರಾನ್ ಪ್ರಸ್ತಾಪವು ಒಪ್ಪಂದವನ್ನೇ ಅಸಾಧ್ಯವಾಗಿಸಲಿದೆ. ನಿರ್ಣಾಯಕ ಜಲಮಾರ್ಗದ ಮೇಲೆ ಹಿಡಿತ ಹೊಂದಿರುವ ಇರಾನ್, ಆ ಮೂಲಕ ಆರ್ಥಿಕ ಲಾಭ ಪಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಟೀಕಿಸಿದ್ದಾರೆ.

‘ಸುಂಕ ವಿಧಿಸುವ ವ್ಯವಸ್ಥೆಗೆ ಜಗತ್ತಿನ ಯಾವುದೇ ದೇಶವೂ ಕೂಡ ಒಲವು ಹೊಂದಿಲ್ಲ. ಅದನ್ನು ಒಪ್ಪಲ್ಲ. ಅದನ್ನು ಮುಂದುವರಿಸಿದರೆ, ರಾಜತಾಂತ್ರಿಕ ಮಾರ್ಗವೂ ಅಸಾಧ್ಯವಾಗಿಸಲಿದೆ’ ಎಂದು ರುಬಿಯೊ ಹೇಳಿದ್ದಾರೆ.

‘ಇರಾನ್ ಜೊತೆಗಿನ ಮಾತುಕತೆಯಲ್ಲಿ ಉತ್ತಮ ಬೆಳವಣಿಗೆಗಳು ಕಂಡುಬಂದಿದ್ದು, ದೀರ್ಘಕಾಲದ ಯುದ್ಧವು ಆದಷ್ಟು ಬೇಗ ಮುಕ್ತಾಯಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಯೂಬಾ ಸಮಸ್ಯೆಗೂ ಪರಿಹಾರ: ಕ್ಯೂಬಾ ಸರ್ಕಾರದ ಜೊತೆಗೆ ಉಂಟಾಗಿರುವ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಬಗೆಹರಿಸಲು ಒತ್ತು ನೀಡಲಾಗುವುದು. ಈ ವಿಚಾರದಲ್ಲಿ ಆಶಾವಾದಿಯಾಗಿರದೇ, ಅದನ್ನು ಸಾಧಿಸಲಿದ್ದೇವೆ. ಅಧ್ಯಕ್ಷ ಟ್ರಂಪ್ ಅವರು ಶಾಂತಿಯುತವಾಗಿ ಒಪ್ಪಂದ ನಡೆಸಲು ಆದ್ಯತೆ ನೀಡುತ್ತಾರೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.