ಜೈಪುರ: ಇರಾನ್ನೊಂದಿಗಿನ ಕದನ ವಿರಾಮ ಒಪ್ಪಂದವು ಈಗಲೂ ಸಾಧ್ಯವಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

ಕದನ ವಿರಾಮ ಮಾತುಕತೆ ನಡುವೆಯೇ ದಕ್ಷಿಣ ಇರಾನ್ನ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ. ಇದರ ನಂತರ, ರುಬಿಯೊ ಹೇಳಿಕೆ ಬಂದಿರುವುದು ಕುತೂಹಲ ಮೂಡಿಸಿದೆ.

ಭಾರತಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿ ನೀಡಿರುವ ಮಾರ್ಕೊ ರುಬಿಯೊ, ಜೈಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.

ಇಂದು ಕತಾರ್ನಲ್ಲಿ ಇರಾನ್ ಸಂಘರ್ಷದ ಕುರಿತು ಮಾತುಕತೆ ನಡೆಯುತ್ತಿದೆ. ಅದರಲ್ಲಿ ನಾವು ಪ್ರಗತಿ ಸಾಧಿಸಬಹುದೇ ಎಂದು ಕಾದು ನೋಡೋಣ. ಎರಡೂ ಕಡೆಗಳು ಕೂಡ ಒಂದು ನಿರ್ದಿಷ್ಟ ನಿಲುವಿಗೆ ಬರಲು ಸಾಕಷ್ಟು ಮಾತುಕತೆಯ ಅವಶ್ಯಕತೆಯಿದೆ. ಹಾಗಾಗಿ ಇದು ಇನ್ನೂ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರು ಕದನ ವಿರಾಮ ಒಪ್ಪಂದಕ್ಕೆ ಆಸಕ್ತಿ ತೋರಿಸಿದ್ದಾರೆ. ಅವರು ಉತ್ತಮ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಅಥವಾ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಉಕ್ರೇನ್–ರಷ್ಯಾ ನಡುವೆ ಮಧ್ಯಸ್ಥಿಕೆಗೆ ಸಿದ್ಧ:

ಇದೇ ವೇಳೆ ರಷ್ಯಾ–ಉಕ್ರೇನ್ ಯುದ್ಧದ ಕುರಿತು ಮಾತನಾಡಿದ ರುಬಿಯೊ, ಈ ಯುದ್ಧವು ಕೊನೆಗೊಳ್ಳುವ ಅಗತ್ಯವಿದ್ದು ಅಮೆರಿಕವು ಈಗಲೂ ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ರುಬಿಯೊ, ಫೋನ್ನಲ್ಲಿ ಮಾತುಕತೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.