ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯಲ್ಲಿ ವ್ಯತ್ಯಯ: ಬಹಿರಂಗವಾಗಿ ಬಳಕೆದಾರರ ಕ್ಷಮೆ ಕೇಳಿದ ಮಾರ್ಕ್ ಜುಕರಬರ್ಗ್

ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ
Last Updated 5 ಅಕ್ಟೋಬರ್ 2021, 6:44 IST
ಅಕ್ಷರ ಗಾತ್ರ

ಬೆಂಗಳೂರು; ಜನಪ್ರಿಯ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಂ ಕಳೆದ ದಿನ ಸಂಜೆಯಿಂದ ರಾತ್ರಿಯವರೆಗೆ ಕೆಲಸ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಫೇಸ್‌ಬುಕ್‌ ಸಿಇಓ ಮಾರ್ಕ್ ಜುಕರಬರ್ಗ್ ಬಳಕೆದಾರರಲ್ಲಿ ವೈಯಕ್ತಿಕವಾಗಿ ಕ್ಷಮಾಪಣೆ ಕೇಳಿದ್ದಾರೆ.

ಈ ಕುರಿತು ಮಂಗಳವಾರ ಫೇಸ್‌ಬುಕ್‌ ಪೋಸ್ಟ್ ಹಾಕಿರುವ ಅವರು, ‘ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಮೆಸೆಂಜರ್ ಹಾಗೂ ವಾಟ್ಸ್‌ಆ್ಯಪ್ಸಹಜ ಸ್ಥಿತಿಗೆ ಬಂದಿವೆ. ಈ ದಿನದ ಅನಾನುಕೂಲಕ್ಕೆ ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಸಂಪರ್ಕದಲ್ಲಿರಲು ನಮ್ಮ ಸೇವೆಯ ಜೊತೆ ಎಷ್ಟೊಂದು ಸಂಬಂಧ ಹೊಂದಿದ್ದಿರಾ ಎಂಬುದನ್ನು ನಾನು ಬಲ್ಲೆ‘ ಎಂದು ಮಾರ್ಕ್ ಹೇಳಿದ್ದಾರೆ.

2019 ರಿಂದ ಫೇಸ್‌ಬುಕ್‌ ಸರ್ವರ್‌ನಲ್ಲಿ ಅತಿ ಹೆಚ್ಚು ಸಮಯ ವ್ಯತ್ಯಯ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಗೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜಾಗತಿಕವಾಗಿ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಆ್ಯಪ್‌ಗಳಲ್ಲಿ ವ್ಯತ್ಯಯ ಎದುರಾಗುತ್ತಿದ್ದಂತೆ ಅಮೆರಿಕ ಷೇರುಪೇಟೆಯಲ್ಲಿ ಫೇಸ್‌ಬುಕ್‌ ಷೇರು ಬೆಲೆ ಶೇ 5ರಷ್ಟು ಕುಸಿತ ಕಂಡಿತು. ಆ್ಯಪ್‌ಗಳ ಸೇವೆ ಪುನರಾರಂಭವಾಗುತ್ತಿದ್ದಂತೆ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ.

'ದೊಡ್ಡ ಜನ ಸಮೂಹ ಮತ್ತು ವ್ಯಾಪಾರಗಳು ಜಗತ್ತಿನಾದ್ಯಂತ ನಮ್ಮ ಮೇಲೆ ಅವಲಂಬಿತರಾಗಿದ್ದಾರೆ: ಕ್ಷಮೆಯಿರಲಿ. ನಮ್ಮ ಆ್ಯಪ್‌ಗಳು ಮತ್ತು ಸೇವೆಗಳನ್ನು ಮರಳಿ ತರಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ ಹಾಗೂ ಈಗ ಅವುಗಳ ಕಾರ್ಯಾಚರಣೆ ಆರಂಭವಾಗಿದೆ... ' ಎಂದು ಫೇಸ್‌ಬುಕ್‌ ಟ್ವೀಟಿಸಿದೆ.

350 ಕೋಟಿಗೂ ಹೆಚ್ಚು ಜನರು ಫೇಸ್‌ಬುಕ್‌ ಮತ್ತು ಅದರ ಆ್ಯಪ್‌ಗಳನ್ನು ಬಳಸಿ ಸಂವಹನ ಹಾಗೂ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT