ವಾಷಿಂಗ್ಟನ್: ‘ಶ್ವೇತಭವನಕ್ಕೆ ನನ್ನನ್ನು ಸ್ವಾಗತಿಸಿದ್ದಕ್ಕೆ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರಿಗೆ ಧನ್ಯವಾದಗಳು’ಎಂಬ ಹೆಣ್ಣಿನ ಧ್ವನಿಯಲ್ಲಿ ಮನುಷ್ಯರಂತೆ ಕಾಣುವ ಯಂತ್ರವೊಂದು ಶ್ವೇತಭವನದಲ್ಲಿ ಎಲ್ಲರ ಗಮನ ಸೆಳೆಯಿತು.

ಅಷ್ಟೇ ಅಲ್ಲ, ಬೆಂಗಾಳಿ ಸೇರಿದಂತೆ 11 ಭಾಷೆಗಳಲ್ಲಿ ಮಾತನಾಡುವ ಈ ಯಂತ್ರವು ಸ್ವಾಗತಂ ಎನ್ನುತ್ತಾ ವಿವಿಧ ದೇಶಗಳ ಪ್ರಥಮ ಮಹಿಳೆಯರನ್ನು ಸ್ವಾಗತಿಸಿತು. ಅಲ್ಲದೇ, ತನ್ನನ್ನು ತಾನು ‘ಫಿಗರ್ 3’ ಎಂದು ಪರಿಚಯಿಸಿಕೊಂಡಿತು.

ಶ್ವೇತಭವನದಲ್ಲಿ ನಡೆದ ಮಕ್ಕಳಿಗಾಗಿ ಎಐ ಶಿಕ್ಷಣ ಮತ್ತು ಸುರಕ್ಷತೆಯ ಕುರಿತ ಟ್ರಂಪ್ ಅವರ ಶೃಂಗಸಭೆಯಲ್ಲಿ ತನಗೆ ಪ್ರಧಾನ ಭಾಷಣ ಮಾಡಲು ಅವಕಾಶ ಸಿಕ್ಕಿದ್ದು, ಗೌರವ ಎಂದು ಹೇಳಿತು.

ಇಷ್ಟೆಲ್ಲಾ ಹೇಳಿದ ಮೇಲೆ ಇದು ರೊಬೊ ಇರಬಹುದು ಎಂದು ಅನ್ನಿಸಿರಬಹುದು. ಖಂಡಿತಾ ನಿಜ. ಶೃಂಗಸಭೆಯಲ್ಲಿ ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು, ರೊಬೊಟಿಕ್ಸ್ ಕಂಪನಿ ‘ಫಿಗರ್‘ ತಯಾರಿಸಿರುವ ಈ ಬ್ಲ್ಯಾಕ್ ಅಂಡ್ ವೈಟ್ ಹುಮನಾಯ್ಡ್ ರೋಬೊ ಅನ್ನು ಪರಿಚಯಿಸಿದರು. ಅಮೆರಿಕ ನಿರ್ಮಿತ ಮೊದಲ ಹುಮನಾಯ್ಡ್ ಅತಿಥಿ ಎಂದು ಹೇಳಿಕೊಂಡರು. ಫೋಸ್ಟರಿಂಗ್ ದಿ ಫ್ಯೂಚರ್ ಟುಗೆದರ್ ಶೃಂಗಸಭೆಯಲ್ಲಿ 45 ದೇಶಗಳ ಪ್ರಥಮ ಮಹಿಳೆಯರಿಗೆ ಇದನ್ನು ಪರಿಚಯಿಸಲಾಯಿತು. ಇಂತಹ ಮತ್ತಷ್ಟು ರೋಬೊಗಳು ಬರಲಿವೆ ಎಂದು ಅವರು ಹೇಳಿದರು.

ಫ್ರಾನ್ಸ್ ಮತ್ತು ಇಸ್ರೇಲ್ನ ಪ್ರಥಮ ಮಹಿಳೆಯರಾದ ಬ್ರಿಗಿಟ್ಟೆ ಮ್ಯಾಕ್ರನ್ ಮತ್ತು ಸಾರಾ ನೆತನ್ಯಾಹು ಅವರನ್ನು ಒಳಗೊಂಡ ಸಭೆಯನ್ನೂ ಅದು ಸ್ವಾಗತಿಸಿತು.

ಸ್ವಾಗತಂ ಎಂದು 'ಬಂಗಾಳಿ' ಭಾಷೆ ಜೊತೆಗೆ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಪೋರ್ಟ್ ಭಾಷೆಗಳಲ್ಲಿಯೂ ಸ್ವಾಗತ ಕೋರಿತು ಎಂದು ವರದಿ ತಿಳಿಸಿದೆ.

ಈ ರೋಬೊವನ್ನು ಮನೆಯ ಕೆಲಸಗಳನ್ನು ನಿರ್ವಹಿಸಲು ಸ್ವಾಯತ್ತ ಸಾಧನವಾಗಿ ಬಳಸಬಹುದು ಎಂದು ಕಂಪನಿ ವಿವರಿಸಿದೆ. ಲೋಹದ ಜಾಲರಿ ಹೊಂದಿರುವ ಇದರ ಕೈಯಲ್ಲಿ ಕ್ಯಾಮೆರಾಗಳು ಮತ್ತು ಸ್ಪರ್ಶ ಸಂವೇದಕಗಳು ಇವೆ. ಇವು ಮನೆಯ ಕೆಲಸದಲ್ಲಿ ಸಹಾಯಕ್ಕೆ ಬರುತ್ತವೆ.

ಪ್ರಚಾರದ ವಿಡಿಯೊದಲ್ಲಿ ರೋಬೊ ಡಿಶ್ ವಾಶರ್ಗೆ ಪಾತ್ರೆಗಳನ್ನು ಹಾಕುವುದು, ವಾಷಿಂಗ್ ಮೆಷಿನ್ಗೆ ಬಟ್ಟೆ ಹಾಕುವುದು, ಆಟಿಕೆಗಳನ್ನು ಎತ್ತಿಕೊಳ್ಳುವುದು ಮತ್ತು ಬಟ್ಟೆಗಳನ್ನು ಮಡಚುವುದು ಮುಂತಾದ ಕೆಲಸ ಮಾಡುತ್ತಿರುವುದನ್ನು ಕಂಪನಿ ತೋರಿಸಿದೆ.

ಕಲಿಕೆಯನ್ನು ವೈಯಕ್ತೀಕರಿಸಲು ಕೃತಕ ಬುದ್ಧಿಮತ್ತೆಯ ಬಳಕೆ, ವಿದ್ಯಾರ್ಥಿಗಳಿಗೆ ಮನೆಯಲ್ಲಿ ಬಳಸುವ ಸಾಧನಗಳಾಗಿ, ಮಾನವನಂತಹ ಶಿಕ್ಷಕನಾಗಿ ಹೊರಹೊಮ್ಮುವಿಕೆ ಕುರಿತಂತೆ ಎಐ ರೋಬೊ ಪಾತ್ರವನ್ನು ಮೆಲಾನಿಯಾ ಟ್ರಂಪ್ ವಿವರಿಸಿದರು.

‘ಮಾನವರ ಆಕಾರದಲ್ಲಿ ರೂಪುಗೊಳ್ಳುವಿಕೆ. ನಮ್ಮ ಮೊಬೈಲ್ ಫೋನ್ಗಳಿಂದ ಬಿಲ್ ಪಾವತಿ ಸೇರಿದಂತೆ ಭವಿಷ್ಯದಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಿಸುವತ್ತ ಎಐ ಅಭಿವೃದ್ಧಿ ಹೊಂದಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.