ರೋಮ್/ನವದೆಹಲಿ: ಇಟಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೊನಿಯವರಿಗೆ ‘ಮೆಲೋಡಿ’ ಚಾಕೊಲೆಟ್ ಪ್ಯಾಕೆಟ್ಅನ್ನು ಉಡುಗೊರೆಯಾಗಿ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ.

ಈ ವಿದ್ಯಮಾನ ಕುರಿತ ಮೀಮ್ಗಳು ವ್ಯಾಪಕವಾಗಿ ಹರಿದಾಡುತ್ತಿವೆ. ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ, ಹಲವರು ಈ ಬಗ್ಗೆ ಟೀಕೆಯನ್ನೂ ಮಾಡಿದ್ದಾರೆ.

ಈ ಉಡುಗೊರೆ ನೀಡಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ ಹೇಳಿರುವ ಮೆಲೊನಿ, ಈ ಕುರಿತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಂಚಿಕೊಂಡ ಆರು ಗಂಟೆಯಲ್ಲಿ 11 ಕೋಟಿಗೂ ಹೆಚ್ಚು ಜನರು ಈ ವಿಡಿಯೊ ವೀಕ್ಷಿಸಿರುವುದು ಗಮನಾರ್ಹ. ಸಾವಿರಾರು ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

‘ಪ್ರಧಾನಿ ಮೋದಿಯವರು ಬಹಳ ಸ್ವಾದಿಷ್ಟವಾದ ಟಾಫಿಯನ್ನು ಉಡುಗೊರೆಯಾಗಿ ತಂದಿದ್ದಾರೆ. ಈ ಉಡುಗೊರೆಗಾಗಿ ಧನ್ಯವಾದ’ ಎಂದು ಮೆಲೊನಿಯವರು ಹೇಳಿರುವುದು ವಿಡಿಯೊದಲ್ಲಿದೆ. ಈ ವಿಡಿಯೊದಲ್ಲಿ ಮೋದಿಯವರೂ ಇದ್ದಾರೆ. ಮೆಲೊನಿಯವರ ಹಾಸ್ಯ ಚಟಾಕಿಗೆ ಅವರು ಜೋರಾಗಿ ನಕ್ಕಿದ್ದಾರೆ.

2023ರಲ್ಲಿ ದುಬೈನಲ್ಲಿ ನಡೆದಿದ್ದ ‘ಸಿಒಪಿ28’ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ, ಮೆಲೊನಿಯವರು ಹ್ಯಾಷ್ಟ್ಯಾಗ್ನೊಂದಿಗೆ ‘ಮೆಲೊದಿ’ ಎಂದು ಮಾಡಿದ್ದ ಪೋಸ್ಟ್ ಭಾರಿ ಹರಿದಾಡಿತ್ತು.

ಮೆಲೊನಿ ಮತ್ತು ಮೋದಿ ಹೆಸರಿನ ಆಯ್ದ ಅಕ್ಷರಗಳನ್ನು ಜೋಡಿಸಿ ಮೆಲೊನಿಯವರು ಟಂಕಿಸಿದ್ದ ಪದವೇ ‘ಮೆಲೊದಿ’.

ಪ್ರಶಂಸೆ... ಹಲವು ಪ್ರಶ್ನೆ

‘ಮೆಲೋಡಿ’ಯ ಪ್ಯಾಕೆಟ್ಅನ್ನು ಉಡುಗೊರೆಯಾಗಿ ನೀಡಿದ ಮೋದಿಯವರ ಒಂದು ನಡೆ ಸಾಮಾಜಿಕ ಜಾಲತಾಣದಲ್ಲಿ ಈ ಮಟ್ಟಿಗೆ ಸದ್ದು ಮಾಡಿದೆಯೇ? ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇಂತಹ ನಡೆಯನ್ನೇ ಟೀಕಿಸಿದ್ದಾರೆ. ‘ಇಬ್ಬರು ಪ್ರಧಾನಿಗಳು ಸಾರ್ವಜನಿಕವಾಗಿ ಈ ರೀತಿ ನಡೆದುಕೊಳ್ಳಬಹುದೇ’ ಎಂಬ ಪ್ರಶ್ನೆಯನ್ನು ಹಲವರು ಮುಂದಿಟ್ಟಿದ್ದಾರೆ.

ಷೇರು ಬೆಲೆ ಏರಿಕೆ! ‘ಮೆಲೋಡಿ’ಯನ್ನು ಉಡುಗೊರೆಯಾಗಿ ನೀಡಿದ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾದ ಬೆನ್ನಲ್ಲೇ ಪಾರ್ಲೆ ಇಂಡಸ್ಟ್ರೀಸ್ನ ಷೇರು ಬೆಲೆಯಲ್ಲಿ ಬುಧವಾರ ಏರಿಕೆ ಕಂಡುಬಂದಿದೆ.

ಈ ಕಂಪನಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದೆ. ಹೂಡಿಕೆದಾರರು ಕಂಪನಿಯ ಷೇರುಗಳನ್ನು ಕೊಳ್ಳಲು ಮುಗಿ ಬಿದ್ದ ಕಾರಣ ಅದರ ಬೆಲೆಯಲ್ಲಿ ಶೇ5ರಷ್ಟು ಹೆಚ್ಚಳ ಕಂಡುಬಂತಲ್ಲದೇ ದಿನ ವಹಿವಾಟಿನಲ್ಲಿ ₹5.25ಕ್ಕೆ ತಲುಪಿತು. ಈ ಕಂಪನಿಯೇ ಮೆಲೋಡಿಯನ್ನು ತಯಾರಿಸುತ್ತಿದೆ ಎಂಬುದಾಗಿ ಹೂಡಿಕೆದಾರರು ತಪ್ಪಾಗಿ ತಿಳಿದುಕೊಂಡಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಮೆಲೋಡಿ’ ತಯಾರಿಸುವ ಪಾರ್ಲೆ ಪ್ರಾಡಕ್ಟ್ಸ್ ಪ್ರಮುಖ ಎಫ್ಎಂಸಿಜಿ ಕಂಪನಿಯಾಗಿದ್ದು ಇದು ಷೇರು ಪೇಟೆಗಳಲ್ಲಿ ಲಿಸ್ಟ್ ಆಗಿಲ್ಲ. ಏರ್ ಇಂಡಿಯಾ ಈ ಮಿಠಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಜಾಹೀರಾತನ್ನು ಪ್ರಕಟಿಸಿದೆ. ಹುಡುಕಾಟವೂ ಅಧಿಕ: ‘ಮೆಲೋಡಿ’ ಕುರಿತು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸಿದ್ದಾರೆ’ ಎಂದು ಕ್ವಿಕ್ಕಾಮರ್ಸ್ ಸಂಸ್ಥೆ ಬ್ಲಿಂಕಿಟ್ ಹೇಳಿದೆ.

ಹೊಗಳಿದ ಬಿಜೆಪಿ: ಮೋದಿಯವರು ಮೆಲೊನಿಯವರಿಗೆ ಮಿಠಾಯಿ ಪ್ಯಾಕೆಟ್ ಉಡುಗೊರೆ ಕೊಟ್ಟಿರುವುದು ಹಾಗೂ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಬಿಜೆಪಿ ಕೂಡ ಹಂಚಿಕೊಂಡಿದೆ. ‘ಇದು ಪ್ರಧಾನಿ ಮೋದಿಯವರ ಹಾಸ್ಯಪ್ರಜ್ಞೆಗೆ ನಿದರ್ಶನ’ ಎಂದು ಬಣ್ಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.