ಓಸ್ಲೋ: ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ರಷ್ಯಾ–ಉಕ್ರೇನ್ ಯುದ್ಧವು ರಾಜತಾಂತ್ರಿಕ ಮಾತುಕತೆ ಮೂಲಕ ಮಾತ್ರ ಅಂತ್ಯಗೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಬಳಿಕ ಮೋದಿ ಮಾತನಾಡಿದ್ದಾರೆ.

ಭಾರತ ಮತ್ತು ನಾರ್ವೆ, ಎರಡೂ ದೇಶಗಳು ಕೂಡ ರಾಜತಾಂತ್ರಿಕ ಮಾತುಕತೆಯಲ್ಲಿ ನಂಬಿಕೆಯಿಟ್ಟಿವೆ. ಸೈನಿಕ ಕಾರ್ಯಾಚರಣೆ ಮೂಲಕ ಶಾಂತಿ ಸ್ಥಾಪನೆ ಮಾಡುವುದು ಅಸಾಧ್ಯವಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷವಾಗಿರಲಿ ಅಥವಾ ರಷ್ಯಾ–ಉಕ್ರೇನ್ ಯುದ್ಧವಾಗಿರಲಿ, ಅದು ಆದಷ್ಟು ಬೇಗ ಅಂತ್ಯವಾಗುವ ಮತ್ತು ಶಾಂತಿ ಸ್ಥಾಪನೆಗೆ ಕಾರಣವಾಗುವ ಎಲ್ಲಾ ಪ್ರಯತ್ನಗಳಿಗೂ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಭಾರತಕ್ಕೆ ಬೆಂಬಲ ನೀಡಿದ್ದ ನಾರ್ವೆ ನಿರ್ಧಾರಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ನಾಲ್ಕು ದೇಶಗಳ ಪ್ರವಾಸದಲ್ಲಿದ್ದು, ಎರಡು ದಿನಗಳ ಕಾಲ ನಾರ್ವೆಗೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.