ದುಬೈ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸ್ಥಾನಕ್ಕೆ ಅವರ ಪುತ್ರ ಮೊಜ್ತಬಾ ಖಮೇನಿ (56) ನೇಮಕಗೊಂಡಿದ್ದಾರೆ ಎಂದು ಇರಾನ್ ಸೋಮವಾರ ಘೋಷಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲಿನ ಪ್ರತಿದಾಳಿಯನ್ನು ಇರಾನ್ ತೀವ್ರಗೊಳಿಸಿದೆ.

ಅಮೆರಿಕ ಹಾಗೂ ಇಸ್ರೇಲ್ನ ಬೆದರಿಕೆಯನ್ನು ಲೆಕ್ಕಿಸದೆ ಇರಾನ್, ತನ್ನ ನೂತನ ಪರಮೋಚ್ಚ ನಾಯಕನನ್ನು ನೇಮಕ ಮಾಡಿದೆ. 56 ವರ್ಷದ ಮೊಜ್ತಬಾ ಅವರು ಮುಂದಿನ ನಾಯಕರಾಗಿ ಆಯ್ಕೆಯಾಗಿರುವುದನ್ನು ಇರಾನ್ನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಸೋಮವಾರ ಬೆಳಿಗ್ಗೆ ಪ್ರಕಟಿಸಿತು.

ಮೊಜ್ತಬಾ ಅವರು 1979ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ನೇಮಕಗೊಂಡ ಇರಾನ್ನ ಮೂರನೇ ಪರಮೋಚ್ಚ ನಾಯಕ ಎನಿಸಿಕೊಂಡಿದ್ದಾರೆ. ‘88 ಸದಸ್ಯರ ತಜ್ಞರ ಮಂಡಳಿಯು ಮೊಜ್ತಬಾ ಅವರನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಪರಮೋಚ್ಚ ನಾಯಕರನ್ನಾಗಿ ಒಮ್ಮತದಿಂದ ನೇಮಕ ಮಾಡಿದೆ’ ಎಂದು ಪ್ರಕಟಿಸಲಾಯಿತು.

ಇರಾನ್ನ ಮುಂದಿನ ನಾಯಕನ ಆಯ್ಕೆಯಲ್ಲಿ ತನ್ನ ಪಾತ್ರವೂ ಇರಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಚೆಗೆ ಹೇಳಿದ್ದರು. ‘ನಮ್ಮ ಅನುಮೋದನೆ ಪಡೆಯದೆ ನೇಮಕವಾಗುವ ನಾಯಕ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದೂ ಎಚ್ಚರಿಸಿದ್ದರು. ‘ಆಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಯಾರೇ ನೇಮಕಗೊಂಡರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವರು ಕಳೆದ ವಾರ ಹೇಳಿದ್ದರು.

ಮೊಜ್ತಬಾ ಅವರಿಗೆ ಬೆಂಬಲ ಸೂಚಿಸಿ ಸಾವಿರಾರು ಮಂದಿ ಟೆಹರಾನ್ನಲ್ಲಿ ಬೀದಿಗಿಳಿದು ಮೆರವಣಿಗೆ ನಡೆಸಿದರು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ) ಜತೆಗೆ ನಿಕಟ ಸಂಬಂಧ ಹೊಂದಿರುವ, ಮೊಜ್ತಬಾ ಅವರು ಇರಾನಿನ ಇಸ್ಲಾಮಿಕ್ ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

ಪುಟಿನ್ ಅಭಿನಂದನೆ

ಮಾಸ್ಕೊ/ ಬೀಜಿಂಗ್: ಇರಾನ್ನ ನೂತನ ನಾಯಕರಾಗಿ ನೇಮಕಗೊಂಡ ಮೊಜ್ತಬಾ ಖಮೇನಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಅಭಿನಂದಿಸಿದ್ದಾರೆ. ‘ಮೊಜ್ತಬಾ ಅವರು ತಮ್ಮ ತಂದೆಯ ಕೆಲಸವನ್ನು ‘ಘನತೆಯಿಂದ’ ಮುಂದುವರಿಸುತ್ತಾರೆ ಮತ್ತು ಇದೀಗ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಇರಾನಿನ ಜನರನ್ನು ಒಂದುಗೂಡಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಪುಟಿನ್ ಹೇಳಿದ್ದಾಗಿ ಅವರ ಆಡಳಿತ ಕಚೇರಿಯ ಪ್ರಕಟಣೆ ತಿಳಿಸಿದೆ.

ಆಂತರಿಕ ವಿಷಯ–ಚೀನಾ

‘ಮೊಜ್ತಬಾ ಅವರನ್ನು ಪರಮೋಚ್ಚ ನಾಯಕರಾಗಿ ನೇಮಕ ಮಾಡಿರುವುದು ಇರಾನ್ನ ಆಂತರಿಕ ವಿಷಯವಾಗಿದ್ದು ಯಾವುದೇ ದೇಶ ಅವರನ್ನು ಗುರಿಯಾಗಿಸುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಚೀನಾ ಹೇಳಿದೆ. ‘ಇರಾನ್ ತನ್ನ ಸಂವಿಧಾನದ ಪ್ರಕಾರ ಮೊಜ್ತಬಾ ಅವರನ್ನು ನೇಮಿಸಿದೆ. ಯಾವುದೇ ನೆಪದಲ್ಲಿ ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಚೀನಾ ವಿರೋಧಿಸುತ್ತದೆ. ಇರಾನ್ನ ಸಾರ್ವಭೌಮತ್ವ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.