ವಾಷಿಂಗ್ಟನ್: ಚಂದ್ರನ ಅಂಗಳದಲ್ಲಿ ಶಾಶ್ವತ ನೆಲೆ ಸ್ಥಾಪಿಸುವುದಕ್ಕಾಗಿ ನಾಸಾ ಮೂರು ಹಂತಗಳ ಬಾಹ್ಯಾಕಾಶ ಕಾರ್ಯಕ್ರಮವನ್ನು ಘೋಷಿಸಿದೆ.

20 ಶತಕೋಟಿ ಡಾಲರ್(ಅಂದಾಜು ₹1.90 ಲಕ್ಷ ಕೋಟಿ) ವೆಚ್ಚದ ಯೋಜನೆ ಇದಾಗಿದೆ. ಚಂದ್ರನ ಮೇಲ್ಮೈನಲ್ಲಿ ನಿರಂತರವಾಗಿ ಪ್ರಯೋಗಗಳನ್ನು ಕೈಗೊಳ್ಳುವುದಕ್ಕೆ ಅನುಕೂಲವಾಗುವಂತೆ ರೋವರ್ಗಳು, ಡ್ರೋನ್ಗಳು ಸೇರಿ ವಿವಿಧ ಸಾಧನಗಳನ್ನು ಈ ನೆಲೆ ಒಳಗೊಂಡಿರಲಿದೆ. ಅತ್ಯಂತ ಅಪಾಯಕಾರಿ ಪರಿಸರದಲ್ಲಿ ಕೂಡ ಈ ಸಾಧನಗಳ ಕಾರ್ಯಾಚರಣೆ ಹಾಗೂ ಪ್ರಯೋಗ ಕೈಗೊಳ್ಳುವುದಕ್ಕೆ ಪೂರಕವಾಗಿರುವ ನೆಲೆಯನ್ನು ನಿರ್ಮಿಸಲು ನಾಸಾ ಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಾಸಾ ಆಡಳಿತಾಧಿಕಾರಿ ಜೇರ್ಡ್ ಐಸಾಕ್ಮನ್,‘ಚಂದ್ರನಲ್ಲಿನ ಉದ್ದೇಶಿತ ಈ ನೆಲೆಯು ಮತ್ತೊಂದು ಆಕಾಶಕಾಯದಲ್ಲಿ ಅಮೆರಿಕ ಮಾತ್ರವಲ್ಲದೇ ಮನುಕುಲ ನಿರ್ಮಿಸಲಿರುವ ಮೊಟ್ಟಮೊದಲ ತಾಣವಾಗಲಿದೆ’ ಎಂದರು.

‘ಮುಂದಿನ ಮಾರ್ಚ್ ವೇಳೆಗೆ ‘ಚಂದ್ರನ ನೆಲೆ’ ಸ್ಥಾಪಿಸಲು ಯೋಜನೆ ಸಿದ್ಧಪಡಿಸಲಾಗಿದೆ. 2028ರಲ್ಲಿ ಗಗನಯಾನಿಗಳನ್ನು ಈ ನೆಲೆಯಲ್ಲಿ ಇಳಿಸುವ ಗುರಿ ಹೊಂದಲಾಗಿದೆ’ ಎಂದೂ ಹೇಳಿದರು.

‘ಚಂದ್ರನ ನೆಲೆ’ ಕಾರ್ಯಕ್ರಮದ ಎರಡನೇ ಹಂತದ ನಿರ್ಮಾಣ ಕಾರ್ಯವನ್ನು 2029 ಹಾಗೂ 2030ರ ನಡುವೆ ಕೈಗೆತ್ತಿಕೊಳ್ಳಲಾಗುವುದು. ಈ ಹಂತದಲ್ಲಿ ಪವರ್ ಗ್ರಿಡ್ವೊಂದನ್ನು ಸಹ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

2032ರಿಂದ ಮೂರನೇ ಹಂತದ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಚಂದ್ರನತ್ತ ಗಗನಯಾನಿಗಳನ್ನು ಕಳುಹಿಸುವುದು, ನಿರಂತರವಾಗಿ ಪ್ರಯೋಗಗಳು ಹಾಗೂ ಸಂಶೋಧನೆ ಕೈಗೊಳ್ಳುವುದು ಮುಂದುವರಿಯಲಿದೆ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.