ವಾಷಿಂಗ್ಟನ್: ಚಂದ್ರನ ಅಂಗಳದಲ್ಲಿ ಮತ್ತೆ ಮಾನವನನ್ನು ಇಳಿಸುವ ನಾಸಾದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾದ ‘ಆರ್ಟೆಮಿಸ್–2’ನ ಓರಿಯೋನ್ ಕೋಶವು ಚಂದ್ರನನ್ನು ಯಶಸ್ವಿಯಾಗಿ ಸುತ್ತಿ ಅಪರೂಪದ ಚಿತ್ರಗಳೊಂದಿಗೆ ಭೂಮಿಗೆ ಹಿಂದಿರುಗಿದೆ. ನಾಸಾದ ಈ ಸಾಹಸದ ಹಿಂದೆ ಭಾರತ–ಅಮೆರಿಕನ್ ವಿಜ್ಞಾನಿಯ ಪಾತ್ರವಿದೆ. ಅವರೇ ವಿಜ್ಞಾನಿ ಅಮಿತ್ ಕ್ಷತ್ರಿಯ.

ನಾಸಾದ ಸಹಾಯಕ ಆಡಳಿತಾಧಿಕಾರಿಯಾಗಿರುವ ಅವರು ಸಂಸ್ಥೆಯ ಅತ್ಯುನ್ನತ ಶ್ರೇಣಿಯನ್ನು ಅಲಂಕರಿಸಿದ್ದಾರೆ. ಅಲ್ಲದೇ, ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್ ಅವರ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷತ್ರಿಯ ಅವರು ನಾಸಾದ 10 ಕೇಂದ್ರ ನಿರ್ದೇಶಕರು ಮತ್ತು ವಾಷಿಂಗ್ಟನ್ನಲ್ಲಿರುವ ನಾಸಾ ಪ್ರಧಾನ ಕಚೇರಿಯಲ್ಲಿರುವ ಮಿಷನ್ ಡೈರೆಕ್ಟರೇಟ್ ಅಸೋಸಿಯೇಟ್ ಆಡಳಿತಾಧಿಕಾರಿಗಳನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೇ., ನಾಸಾದ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಭಾರತದ ವಲಸೆ ಪೋಷಕರ ಮಗನಾದ ಕ್ಷತ್ರಿಯ ಅವರು, ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿರುವ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಗಣಿತಶಾಸ್ತ್ರದಲ್ಲಿ ವಿಜ್ಞಾನ ಪದವಿ ಮತ್ತು ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಬಾಲ್ಯದಿಂದಲೇ ಬಾಹ್ಯಾಕಾಶದ ಆಸಕ್ತಿ

ಹೂಸ್ಟನ್ನಲ್ಲಿ ಬಾಲ್ಯ ಕಳೆದ ಕ್ಷತ್ರಿಯ, ನಾಸಾದ ಮಿಷನ್ ಕಂಟ್ರೋಲ್ ಇರುವ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಾಹ್ಯಾಕಾಶ ಉಡಾವಣೆಗಳನ್ನು ವೀಕ್ಷಿಸುತ್ತಾ ಆಸಕ್ತಿ ಬೆಳೆಸಿಕೊಂಡಿದ್ದರು. ಪದವಿ ಪಡೆದ ನಂತರ ತೈಲ ಮತ್ತು ಅನಿಲ ಉದ್ಯಮ ಮತ್ತು ವೈದ್ಯಕೀಯ ವಲಯದಲ್ಲಿ ತೊಡಗಿಸಿಕೊಂಡಿದ್ದ ಅವರು, 2003ರಲ್ಲಿ ನಾಸಾದ ಬಾಹ್ಯಾಕಾಶ ನೌಕೆ ಯೋಜನೆಯ ಪ್ರಾಥಮಿಕ ಗುತ್ತಿಗೆದಾರ ಕಂಪನಿ ಯುನೈಟೆಡ್ ಸ್ಪೇಸ್ ಅಲೈಯನ್ಸ್ಗೆ ಸೇರಿದ್ದರು.

ಸಾಫ್ಟ್ವೇರ್ ಎಂಜಿನಿಯರ್, ರೊಬೊಟಿಕ್ಸ್ ಎಂಜಿನಿಯರ್ ಮತ್ತು ಬಾಹ್ಯಾಕಾಶ ನೌಕೆ ನಿರ್ವಾಹಕರಾಗಿ ಅವರು ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರೊಬೊಟಿಕ್ ಜೋಡಣೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

2014ರಿಂದ 2017ರವರೆಗೆ, ಬಾಹ್ಯಾಕಾಶ ನಿಲ್ದಾಣದ ಹಾರಾಟ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಅವರು ರಾಕೆಟ್ ಹಾರಾಟದ ಎಲ್ಲ ಹಂತಗಳಲ್ಲಿ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳು ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಜಾಗತಿಕ ತಂಡಗಳನ್ನು ಮುನ್ನಡೆಸಿದ್ದರು.

2017ರಿಂದ 2021ರವರೆಗೆ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ಐಎಸ್ಎಸ್) ವಾಹನ ಕಚೇರಿಯ ಉಪ ವ್ಯವಸ್ಥಾಪಕ, ನಂತರ ಕಾರ್ಯಕಾರಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲಿ ಎಂಜಿನಿಯರಿಂಗ್, ಲಾಜಿಸ್ಟಿಕ್ಸ್ ಮತ್ತು ಹಾರ್ಡ್ವೇರ್ ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತಿದ್ದರು.

ಆರ್ಟೆಮಿಸ್ ಕಾರ್ಯಾಚರಣೆಯಲ್ಲಿ ಪಾತ್ರ

2021ರಲ್ಲಿ ನಾಸಾ ಪ್ರಧಾನ ಕಚೇರಿಯ ಎಕ್ಸ್ಪ್ಲೋರೇಶನ್ ಸಿಸ್ಟಮ್ಸ್ ಡೆವಲಪ್ಮೆಂಟ್ ಮಿಷನ್ ಡೈರೆಕ್ಟರೇಟ್ನ(ಇಎಸ್ಡಿಎಂಡಿ) ಉಪ ಸಹಾಯಕ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಅಲ್ಲಿ ಆರ್ಟೆಮಿಸ್ I ಕಾರ್ಯಾಚರಣೆಯ ಸಮಯದಲ್ಲಿ ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಲು ಬಾಹ್ಯಾಕಾಶ ನೌಕೆ ವಿನ್ಯಾಸಗೊಳಿಸಿದ ತಂಡದ ಅವಿಭಾಜ್ಯ ಅಂಗವಾಗಿದ್ದರು.

ಭವಿಷ್ಯದ ಅಂತರಗ್ರಹ ಕಾರ್ಯಾಚರಣೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಚಂದ್ರನ ಮೇಲ್ಮೈಯಲ್ಲಿ ದೀರ್ಘಕಾಲೀನ ಉಪಸ್ಥಿತಿಯನ್ನು ಸ್ಥಾಪಿಸಲು ನಾಸಾ ಯೋಜಿಸುತ್ತಿರುವ ಚಂದ್ರನಿಂದ ಮಂಗಳಕ್ಕೆ ಯೋಜನೆಯ ಉಪ ಸಹಾಯಕ ಆಡಳಿತಾಧಿಕಾರಿಯಾಗಿಯೂ ಕ್ಷತ್ರಿಯ ಅವರು ಸೇವೆ ಸಲ್ಲಿಸಿದ್ದಾರೆ.

ಕ್ಷತ್ರಿಯ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಾಸಾದ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ 50ನೇ ಉಡಾವಣೆಯ ಪ್ರಮುಖ ಹಾರಾಟ ನಿರ್ದೇಶಕರಾಗಿ ನಿರ್ವಹಿಸಿದ ಕೆಲಸಕ್ಕಾಗಿ ಅವರಿಗೆ ನಾಸಾದ ಅತ್ಯುತ್ತಮ ನಾಯಕತ್ವ ಪದಕವನ್ನು ನೀಡಲಾಗಿದೆ. ನಾಸಾ ವೆಬ್ಸೈಟ್ ಪ್ರಕಾರ, ಅತ್ಯುತ್ತಮ ಕಾರ್ಯಕ್ಷಮತೆಗಾಗಿ ನೀಡುವ ‘ಸಿಲ್ವರ್ ಸ್ನೂಪಿ’ ಪ್ರಶಸ್ತಿಯನ್ನೂ ಕ್ಷತ್ರಿಯ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.