ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸೇನೆಯಿಂದ 20,000 ಸಿಬ್ಬಂದಿ ಹೊರಕ್ಕೆ

Last Updated 21 ಡಿಸೆಂಬರ್ 2022, 11:23 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ರಕ್ಷಣಾ ಪಡೆಗಳನ್ನು ತೊರೆದ ಸುಮಾರು 20,000 ಸಿಬ್ಬಂದಿಯನ್ನು ಸೇವೆಯಿಂದ ಅಧಿಕೃತವಾಗಿ ತೆಗೆದುಹಾಕಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.

ದೀರ್ಘಾವಧಿಯಿಂದ ಕರ್ತವ್ಯಕ್ಕೆ ಗೈರಾಗಿರುವ ಸಿಬ್ಬಂದಿಗೆ ಡಿಸೆಂಬರ್‌ 31ರ ವರೆಗೆ ಕ್ಷಮಾದಾನ ನೀಡಲಾಗುವುದು. ನಂತರವೂ ಕರ್ತವ್ಯಕ್ಕೆ ಹಾಜರಾಗದವರನ್ನು ವಜಾ ಮಾಡಲಾಗುತ್ತದೆ. ಮಂಗಳವಾರದ ವೇಳೆಗೆ 19,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕೃತ ವಕ್ತಾರ ಕರ್ನಲ್‌ ನಳಿನ್ ಹೆರಾತ್ ತಿಳಿಸಿದ್ದಾರೆ.

ಶ್ರೀಲಂಕಾದ ರಕ್ಷಣಾ ಪಡೆಗಳಲ್ಲಿ 2 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇದ್ದು, ಸೇನಾಪಡೆಯಿಂದ 19,322, ನೌಕಾಪಡೆಯಿಂದ 1,145 ಹಾಗೂ ವಾಯುಪಡೆಯಿಂದ 1,038 ಸಿಬ್ಬಂದಿ ಸೂಚನೆ ಇಲ್ಲದೇ ರಜೆ ಪಡೆದಿದ್ದು ಇವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅವರು ತಿಳಿಸಿದರು.

ಶ್ರೀಲಂಕಾದಲ್ಲಿ ಸೈನಿಕರಿಗೆ ಪಿಂಚಣಿ ಸೌಲಭ್ಯ ಸಿಗಬೇಕಿದ್ದರೆ ಅವರು 22 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಪಿಂಚಣಿ ಸೌಲಭ್ಯ ಬೇಡ ಎಂದು ಹೇಳಿ 12 ವರ್ಷಕ್ಕೇ ಸೇವೆಯಿಂದ ಹೊರಬರುವುದು ಇಲ್ಲಿ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT