ಕಠ್ಮಂಡು: ತನ್ನ ವಿಮಾನಯಾನ ಜಾಲದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ತೋರಿಸಿದ್ದ ನೇಪಾಳ ಏರ್ಲೈನ್ಸ್ ಬಳಿಕ ಕ್ಷಮೆಯಾಚಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ಎದುರಾದ ಬಳಿಕ ಸ್ಪಷ್ಟನೆ ನೀಡಿರುವ ನೇಪಾಳ ಏರ್ಲೈನ್ಸ್, ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದೆ.

'ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಹಂಚಿಕೊಂಡ ನೆಟ್ವರ್ಕ್ ನಕ್ಷೆಯಲ್ಲಿನ ದೋಷಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದು ಅಂತರರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದಂತೆ ನಕ್ಷೆಯಲ್ಲಿ ನೇಪಾಳ ಅಥವಾ ನೇಪಾಳ ಏರ್ಲೈನ್ಸ್ ನಿಲುವನ್ನು ಪ್ರತಿಬಿಂಬಿಸದ ಗಮನಾರ್ಹ ತಪ್ಪುಗಳನ್ನು ಒಳಗೊಂಡಿದೆ' ಎಂದು ಹೇಳಿದೆ.

'ನಾವು ತಕ್ಷಣವೇ ಪೋಸ್ಟ್ ಅನ್ನು ತೆಗೆದು ಹಾಕಿದ್ದೇವೆ. ಅತ್ಯುನ್ನತ್ತ ಮಾನದಂಡಕ್ಕೆ ಅನುಗುಣವಾಗಿ ಆಂತರಿಕ ಪರಾಮರ್ಶೆಯನ್ನು ನಡೆಸಲಿದ್ದೇವೆ' ಎಂದು ತಿಳಿಸಿದೆ.

'ನಮ್ಮ ನೆರೆಹೊರೆಯವರು ಹಾಗೂ ಸ್ನೇಹಿತರೊಂದಿಗಿನ ಗಾಢವಾದ ಸಂಬಂಧವನ್ನು ನಾವು ಗೌರವಿಸುತ್ತೇವೆ. ಈ ಪೋಸ್ಟ್ನಿಂದ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ' ಎಂದಿದೆ.
.ವೈಭವ್ ಸೂರ್ಯವಂಶಿ ಬ್ಯಾಟಲ್ಲಿ AI ಚಿಪ್! ಪಾಕ್ ಕ್ರಿಕೆಟ್ ಪಂಡಿತನ ಗಂಭೀರ ಆರೋಪ.ವಿಶ್ವದ ರಕ್ಷಣಾ ವೆಚ್ಚದಲ್ಲಿ ಭಾರತಕ್ಕೆ 5ನೇ ಸ್ಥಾನ: ಚೀನಾ, ಪಾಕ್ ಸ್ಥಿತಿಗತಿ ಏನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.