ಕಾಠ್ಮಂಡು: ನೇಪಾಳದಲ್ಲಿ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ರ್ಯಾಪರ್ ವೃತ್ತಿ ತೊರೆದು ಮೂರು ವರ್ಷಗಳ ಹಿಂದೆಯಷ್ಟೇ ರಾಜಕಾರಣಕ್ಕೆ ಧುಮುಕಿದ್ದ ಬಾಲೇಂದ್ರ ಶಾ ಅವರ ಪಕ್ಷವು ಅಭೂತಪೂರ್ವ ಗೆಲುವಿನತ್ತ ಮುನ್ನಡೆದಿದೆ.

ದೇಶದಲ್ಲಿ ಗುರುವಾರ ಮತದಾನ ನಡೆದಿತ್ತು. ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ವಿರೋಧಿಸಿ ಕಳೆದ ಸೆಪ್ಟೆಂಬರ್ನಲ್ಲಿ ನಡೆದಿದ್ದ ಜೆನ್–ಝೀ ಸಮೂಹದ ತೀವ್ರ ಪ್ರತಿಭಟನೆ ಬಳಿಕ ನೇಪಾಳದಲ್ಲಿ ನಡೆದ ಮೊದಲ ಚುನಾವಣೆ ಇದು.

‘ಗುರುವಾರ ರಾತ್ರಿಯಿಂದಲೇ ಮತ ಎಣಿಕೆ ಆರಂಭವಾಗಿದ್ದು, ಶುಕ್ರವಾರ ರಾತ್ರಿ ಒಳಗೆ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಚುನಾವಣಾ ಆಯೋಗ ಹೇಳಿದೆ. ನೇಪಾಳದ ಒಟ್ಟು 275 ಸ್ಥಾನಗಳ ಪೈಕಿ 165 ಸ್ಥಾನಗಳಿಗೆ ಮತದಾನ ನಡೆದಿದೆ. ಈ 165 ಸ್ಥಾನಗಳ ಪೈಕಿ ವಿವಿಧ ಪಕ್ಷಗಳು ಗೆದ್ದ ಸ್ಥಾನಗಳ ಪ್ರಮಾಣದ ಆಧಾರದಲ್ಲಿ ಉಳಿದ 110 ಸ್ಥಾನಗಳನ್ನು ಆಯಾ ಪಕ್ಷಗಳಿಗೆ ಹಂಚಿಕೆ ಮಾಡಲಾಗುತ್ತದೆ.

35 ವರ್ಷ ಶಾ ಅವರು ಈ ಹಿಂದೆ ರ್ಯಾಪರ್ ಆಗಿದ್ದರು. 2022ರಲ್ಲಿ ಇವರು ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್ಎಸ್ಪಿ) ಸ್ಥಾಪಿಸಿದ್ದರು. ಇವರು ಕಾಠ್ಮಂಡುವಿನ ಮೇಯರ್ ಕೂಡ ಆಗಿದ್ದರು. ‘ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯುವಲ್ಲಿ ಶಾ ಅವರು ಮೇಲುಗೈ ಸಾಧಿಸಿದ್ದಾರೆ’ ಎಂದು ವಿಶ್ಲೇಷಿಸಲಾಗುತ್ತಿದೆ. ಮತ ಎಣಿಕೆ ಆರಂಭವಾಗಿರುವ 137 ಸ್ಥಾನಗಳ ಪೈಕಿ 100ರಲ್ಲಿ ಆರ್ಎಸ್ಪಿ ಮುನ್ನಡೆ ಸಾಧಿಸಿದೆ. ಈ ಪಕ್ಷವು ಬಹುಮತ ಪಡೆದುಕೊಂಡರೆ, ಶಾ ಅವರೇ ಪ್ರಧಾನಿಯಾಗಲಿದ್ದಾರೆ.

ನಾಲ್ಕು ಬಾರಿ ಪ್ರಧಾನಿಯಾಗಿದ್ದ ಸಿಪಿಎನ್ (ಯುಎಂಎಲ್) ಪಕ್ಷದ ಮುಖ್ಯಸ್ಥ ಕೆ.ಪಿ. ಶರ್ಮಾ ಒಲಿ ಅವರ ವಿರುದ್ಧ ಸ್ಪರ್ಧಿಸಿರುವ ಬಾಲೇಂದ್ರ ಶಾ ಅವರು ಮುನ್ನಡೆ ಸಾಧಿಸಿದ್ದಾರೆ. ಒಲಿ ಅವರಿಗಿಂತ ನಾಲ್ಕು ಪಟ್ಟು ಅಧಿಕ ಮತಗಳನ್ನು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.