ಕಠ್ಮಂಡು: ಹಣ ಅಕ್ರಮ ವರ್ಗಾವಣೆ ಆರೋಪದಡಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಇಂಧನ ಸಚಿವ ಹಾಗೂ ನೇಪಾಳಿ ಕಾಂಗ್ರೆಸ್ ಪಕ್ಷದ ನಾಯಕ ದೀಪಕ್ ಖಡ್ಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹಣ ಅಕ್ರಮ ವರ್ಗಾವಣೆ ತನಿಖಾ ಇಲಾಖೆಯ ಮನವಿ ಬಳಿಕ, ನೇಪಾಳದ ಕೇಂದ್ರೀಯ ತನಿಖಾ ದಳ (ಸಿಬಿಐ) ಪೊಲೀಸರು ಖಡ್ಕಾ ಅವರನ್ನು ಭಾನುವಾರ ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ನೇಪಾಳದಲ್ಲಿ ನಡೆದ ಜೆನ್–ಝಿ ಪ್ರತಿಭಟನೆಯ ಸಂದರ್ಭದಲ್ಲಿ ಖಡ್ಕಾ, ಮಾಜಿ ಪ್ರಧಾನಿಗಳಾದ ಶೇರ್ ಬಹದ್ದೂರ್ ದೇವುಬಾ, ಪುಷ್ಪ ಕಮಲ್ ದಹಲ್ ಅವರ ನಿವಾಸಗಳಲ್ಲಿ ಸುಟ್ಟ ನೋಟುಗಳ ವಿಡಿಯೊ ಮತ್ತು ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡಿದ್ದವು.

ಇಂಧನ, ಜಲಸಂಪನ್ಮೂಲ ಮತ್ತು ನೀರಾವರಿ ಸಚಿವರಾಗಿದ್ದ ವೇಳೆ, ಪರವಾನಗಿ ನೀಡಲು ಹಾಗೂ ಯೋಜನೆಗಳ ಕಾಮಗಾರಿಗಳನ್ನು ಗುತ್ತಿಗೆಗೆ ಕೊಡಲು ಹಣ ಪಡೆದುಕೊಂಡಿರುವ ಆರೋಪ ಖಡ್ಕಾ ಮೇಲಿದೆ.

ಜೆನ್–ಝಿ ಪ್ರತಿಭಟನೆಯನ್ನು ಹತ್ತಿಕ್ಕಿ, 76 ಮಂದಿಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಅಂದಿನ ಗೃಹ ಸಚಿವ ರಮೇಶ್ ಲೆಖಕ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.