ಕಳೆದ ವರ್ಷ ನೇಪಾಳದಲ್ಲಿ ಜೆನ್ ಝೀ ಗಳ ಪ್ರತಿಭಟನೆಯ ಬಿಸಿಗೆ ಸರ್ಕಾರವೇ ಪತನವಾಗಿತ್ತು. ಜೆನ್ ಝೀಗಳ ಹೋರಾಟದ ಫಲವಾಗಿ ನೇಪಾಳದಲ್ಲಿ ಚುನಾವಣೆ ನಡೆದು, ಹೊಸ ಪ್ರಜಾಪ್ರಭುತ್ವ ಸರ್ಕಾರ ರಚನೆಗೊಂಡಿದೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಲಿತ, ರ್ಯಾಪರ್ ಬಾಲೇಂದ್ರ ಶಾ ದೇಶದ 47ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಇವರ ಸಂಪುಟದಲ್ಲಿ ಈಗ ಬಿರುಕು ಉಂಟಾಗಿದ್ದು, ಸರ್ಕಾರದ ವಿಶ್ವಾಸಾರ್ಹತೆ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.

ಶಾ ಸರ್ಕಾರ ರಚನೆಯಾಗಿ 26 ದಿನಗಳ ಅಂತರದಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಮೊದಲು ಕಾರ್ಮಿಕ ಸಚಿವ ದೀಪಕ್ ಕುಮಾರ್ ಶಾ ರಾಜೀನಾಮೆ ನೀಡಿದ್ದರು. ನಂತರ ಗೃಹ ಸಚಿವ ಸುದನ್ ಗುರುಂಗ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನೇಪಾಳದಾದ್ಯಂತ ಸುಧಾರಣೆ ನೀತಿಗಳ ಜಾರಿ ಮೂಲಕ, ಭ್ರಷ್ಟಾಚಾರವನ್ನು ನಿಗ್ರಹಿಸಿ ಪಾರದರ್ಶಕ ಆಡಳಿತ ನಡೆಸುವ ಪ್ರತಿಜ್ಞೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್ಎಸ್ಪಿ) ನೀಡಿದ ಭರವಸೆಗಳ ಮೇಲೆ ಈಗ ಕರಿನೆರಳು ಬಿದ್ದಿದೆ.
.ನೇಪಾಳದ PM ಬಾಲೇಂದ್ರ ಶಾ ಸರ್ಕಾರದ ಯುವ ಸಚಿವರ ವಿದ್ಯಾರ್ಹತೆಗೆ ಜಗತ್ತೇ ಬೆರಗು.
ವಿಶ್ವಾಸಾರ್ಹತೆಗೇ ಕುತ್ತು

ಬಾಲೇಂದ್ರ ಶಾ ಆಡಳಿತದ ಮುಖ್ಯ ಭಾಗವಾಗಿರುವ ಗೃಹ ಸಚಿವ ಸುದನ್ ಗುರುಂಗ್ ರಾಜೀನಾಮೆ ನೀಡಿರುವುದು ಸರ್ಕಾರದ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿದೆ. ಅವರ ಹೂಡಿಕೆಗಳು ಮತ್ತು ವೈಯಕ್ತಿಕ ವ್ಯವಹಾರಗಳ ಬಗ್ಗೆಯೂ ಪ್ರಶ್ನೆಗಳು ಮೂಡುವಂತೆ ಮಾಡಿವೆ.

ಸಾರ್ವಜನಿಕ ಹೇಳಿಕೆಯೊಂದರಲ್ಲಿ, ಗುರುಂಗ್ ಅವರು ‘ಸ್ಥಾನಕ್ಕಿಂತ ನೈತಿಕತೆ ದೊಡ್ಡದು ಮತ್ತು ಸಾರ್ವಜನಿಕ ಜೀವನವು ಸ್ವಚ್ಛವಾಗಿರಬೇಕು’ ಎನ್ನುವ ಮೂಲಕ ಹೊಣೆಗಾರಿಕೆಯ ಹಿತದೃಷ್ಟಿಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಗೃಹ ಸಚಿವರ ರಾಜೀನಾಮೆಗೂ ಮೊದಲು ಆರೋಗ್ಯ ವಿಮಾ ಮಂಡಳಿಯಲ್ಲಿ ತಮ್ಮ ಪತ್ನಿಗೆ ಸ್ಥಾನ ಕೊಡಿಸಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಕಾರ್ಮಿಕ ಸಚಿವ ದೀಪಕ್ ಕುಮಾರ್ ಶಾ ಅವರನ್ನು ಬಲವಂತವಾಗಿ ವಜಾಗೊಳಿಸಲಾಯಿತು. ಪ್ರಮಾಣವಚನ ಸ್ವೀಕರಿಸಿದ ಕೇವಲ 13 ದಿನಗಳ ನಂತರ ಅವರು ತಮ್ಮದೇ ಪಕ್ಷದವರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದರು.

ಸದ್ಯ ಗೃಹ ಖಾತೆಯನ್ನೂ ಪ್ರಧಾನ ಮಂತ್ರಿ ಬಾಲೇಂದ್ರ ಶಾ ಅವರೇ ವಹಿಸಿಕೊಂಡಿದ್ದಾರೆ.
.ಹಣಕಾಸು ವಿವಾದ: ನೇಪಾಳದ ಗೃಹ ಸಚಿವ ಸುದನ್ ಗುರುಂಗ್ ರಾಜೀನಾಮೆ.
ಹೊಸ ಸುಂಕ ನಿಯಮ

ರಾಜಕೀಯ ಪ್ರಕ್ಷುಬ್ಧತೆಯ ಹೊರತಾಗಿ, ಭಾರತದಿಂದ 100 ನೇಪಾಳಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ತರುವವರು ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕು ಎಂಬ ಹೊಸ ನಿಯಮವು ಭಾರತ-ನೇಪಾಳ ಗಡಿಯಲ್ಲಿರುವ ಪ್ರದೇಶಗಳಲ್ಲಿನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಅಧಿಕಾರಿಗಳು, ಭಾರತದಿಂದ ನೇಪಾಳಕ್ಕೆ ಹೋಗುವವರನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಸುಂಕ ಪಾವತಿಸಲು ಒಪ್ಪದವರ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.

ಸರಕುಗಳು ಅಗ್ಗದಲ್ಲಿ ಸಿಗುವ ಕಾರಣ ಅನೇಕ ಗಡಿ ನಿವಾಸಿಗಳು ದೈನಂದಿನ ಅಗತ್ಯ ವಸ್ತುಗಳಿಗಾಗಿ ಭಾರತವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಸುಂಕ ನಿಯಮವು ಗಡಿ ನಿವಾಸಿಗಳಿಗೆ ದೊಡ್ಡ ಹೊಡೆತ ನೀಡುತ್ತಿದೆ.

ಹಣದುಬ್ಬರದ ಆತಂಕ

ಇರಾನ್–ಅಮೆರಿಕ ಯುದ್ಧದ ಪರಿಣಾಮದಿಂದ ನೇಪಾಳವೇನೂ ಹೊರಗುಳಿದಿಲ್ಲ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಇಂಧನ ಬೆಲೆ ಗಗನಮುಖಿಯಾಗಿವೆ. ಎಲ್ಪಿಜಿ, ತರಕಾರಿ, ವಿದ್ಯುತ್ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಂತೂ 150 ನೇಪಾಳಿ ರೂಪಾಯಿಯಿಂದ ಸುಮಾರು 225ಕ್ಕೆ ಏರಿಕೆಯಾಗಿದೆ. ಹಣದುಬ್ಬರ ಏರಿಕೆ, ವಿವಿಧ ನಿರ್ಬಂಧಗಳು ಸಾರ್ವಜನಿಕರಲ್ಲಿ ಹತಾಶೆ ಬೆಳೆಯುವಂತೆ ಮಾಡಿದೆ.

ಮಾಹಿತಿ: ಎನ್ಡಿಟಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.