ಅಬುಜಾ: ನೈಜೀರಿಯಾದ ಪ್ಲಾಟೌ ರಾಜ್ಯದ ಗರಿ ಯಾ ವಾಯೆ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಬೈಕ್ನಲ್ಲಿ ಬಂದ ಅನೇಕ ಬಂದೂಕುಧಾರಿಗಳು ಜನರತ್ತ ಗುಂಡು ಹಾರಿಸಿದರು. ರಾಜ್ಯ ಸರ್ಕಾರವು ಸ್ಥಳದಲ್ಲಿ 48 ಗಂಟೆ ನಿಷೇಧಾಜ್ಞೆ ಹೊರಡಿಸಿದೆ. ಸದ್ಯ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಮುಸ್ಲಿಂ ಫುಲಾನಿ ಕುರಿಗಾಹಿಗಳು ಹಾಗೂ ಕ್ರೈಸ್ತ ಸಮುದಾಯದ ಕೃಷಿಕರ ಗುಂಪುಗಳ ನಡುವೆ ಭೂಮಿ ಮತ್ತು ಮೇವಿನ ವಿಚಾರವಾಗಿ ಆಗಾಗ ಮಾರಕ ಘರ್ಷಣೆಗಳು ನಡೆಯುವುದು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಹಲವು ಕ್ರಿಮಿನಲ್ ಗುಂಪುಗಳೂ ಇಲ್ಲಿ ಸಕ್ರಿಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.