ಸೋಲ್: ‘ಶಸ್ತ್ರಾಸ್ತ್ರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾವು ಹಲವಾರು ಕ್ಷಿಪಣಿಗಳನ್ನು ಉಡಾಯಿಸಿದ್ದು, ಅವುಗಳು ಸಮುದ್ರದಲ್ಲಿ ಬಿದ್ದಿವೆ. ಆ ದೇಶದ ಎಲ್ಲ ಚಟುವಟಿಕೆಗಳ ಕುರಿತು ಜಪಾನ್ ಮತ್ತು ಅಮೆರಿಕಕ್ಕೆ ಮಾಹಿತಿ ರವಾನಿಸಲಾಗುತ್ತಿದೆ’ ಎಂದು ದಕ್ಷಿಣ ಕೊರಿಯಾ ಹೇಳಿದೆ.

‘ಉತ್ತರ ಕೊರಿಯಾ ನಡೆಸಿದ ಶಸ್ತ್ರಾಸ್ತ್ರ ಪರೀಕ್ಷೆ ಕುರಿತು ತುರ್ತು ಸಭೆ ಕರೆಯಲು ರಾಷ್ಟ್ರೀಯ ಭದ್ರತಾ ಕೌನ್ಸಿಲ್ ಚಿಂತಿಸುತ್ತಿದೆ’ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷರ ಕಚೇರಿಯು ಮಾಹಿತಿ ನೀಡಿದೆ.

‘ಕ್ಷಿಪಣಿಗಳು ಉತ್ತರ ಕೊರಿಯಾದ ವ್ಯಾಪ್ತಿಯ ಸಮುದ್ರದಲ್ಲಿಯೇ ಬಿದ್ದಿವೆ’ ಎಂದಿರುವ ಜಪಾನ್, ಉತ್ತರ ಕೊರಿಯಾದ ಚಟುವಟಿಕೆಯನ್ನು ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.