ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಪ್ರಮುಖ ಬಾಗ್ರಾಮ್ ವಾಯುನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನವು ವೈಮಾನಿಕ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಸರ್ಕಾರಿ ಮಾಧ್ಯಮ ಸಂಸ್ಥೆ ಪಿಟಿವಿ ಈ ಕುರಿತಂತೆ ಮಾಹಿತಿ ನೀಡಿದ್ದು, ‘ದಾಳಿ ವೇಳೆ ವಾಯುನೆಲೆಯಲ್ಲಿನ ಹ್ಯಾಂಗರ್ (ಯುದ್ಧ ವಿಮಾನಗಳನ್ನು ನಿಲ್ಲಿಸುವ ಜಾಗ) ಹಾಗೂ ದಾಸ್ತಾನು ಸಂಗ್ರಹಗಾರವನ್ನು ಧ್ವಂಸಗೊಳಿಸಲಾಗಿದ್ದು, ಅವುಗಳ ಉಪಗ್ರಹ ಚಿತ್ರಗಳು ಕೂಡ ಬಿಡುಗಡೆಯಾಗಿವೆ ಎಂದು ನ್ಯೂಯಾರ್ಕ್ ಟೈಮ್ ತಿಳಿಸಿದೆ’ ಎಂದಿದೆ.

ಅಲ್ಲದೇ, ‘ಫೆಬ್ರುವರಿ 26ರಂದು ಅಪ್ಗಾನಿಸ್ತಾನದ ವಿರುದ್ಧ ಪಾಕಿಸ್ತಾನ ಆರಂಭಿಸಿದ್ದ ‘ಗಜಬ್ ಲಿಲ್ ಹಕ್’ ಕಾರ್ಯಾಚರಣೆಯ ಭಾಗವಾಗಿ ಈ ವೈಮಾನಿಕ ದಾಳಿ ನಡೆದಿದೆ. ಇದರ ಜತೆಗೆ ಭೂ ಕಾರ್ಯಾಚರಣೆಯೂ ನಡೆದಿದ್ದು, ಈ ಮೂಲಕ ಅಫ್ಗಾನ್ನ ಯಾವುದೇ ಪ್ರದೇಶದಲ್ಲೂ ತಾನು ದಾಳಿ ನಡೆಸಬಲ್ಲೆ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನ ನೀಡಿದೆ ಎಂದು ರಕ್ಷಣಾ ತಜ್ಞರು ತಿಳಿಸಿದ್ದಾರೆ’ ಎಂದೂ ವರದಿ ಮಾಡಿದೆ.

ಪಾಕಿಸ್ತಾನ ಪದೇ ಪದೇ ಎಚ್ಚರಿಕೆ ನೀಡಿದರೂ ಅಫ್ಗಾನಿಸ್ತಾನವು ಗಡಿಯಲ್ಲಿ ಭಯೋತ್ಪಾದನೆಯನ್ನು ಮುಂದುವರಿಸಿತ್ತು. ಅಫ್ಗಾನ್ನಲ್ಲಿ ಅಮೆರಿಕ ಸೇನೆ ಬಿಟ್ಟುಹೋಗಿದ್ದ ಶಸ್ತ್ರಾಸ್ತ್ರಗಳನ್ನೂ ತಾಲಿಬಾನಿಗಳು ಭಯೋತ್ಪಾದನೆಗೆ ಬಳಸಿದ್ದರು ಎಂದೂ ಪಿಟಿವಿ ವರದಿಯಲ್ಲಿ ತಿಳಿಸಿದೆ.

ಭೂ ಸೇನೆಯಿಂದಲೂ ದಾಳಿ:

ಇನ್ನು ಭೂ ಸೇನಾ ದಾಳಿ ಕುರಿತಂತೆ ಪ್ರತ್ಯೇಕ ಮೂಲಗಳು ಕೂಡ ಮಾಹಿತಿ ನೀಡಿವೆ. ಆ ಪ್ರಕಾರ, ‘ಬಲೂಚಿಸ್ತಾನ ಪ್ರಾಂತ್ಯದ ಗಡಿಯಲ್ಲಿರುವ ಅಫ್ಗಾನ್ ತಾಲಿಬಾನ್ ರಕ್ಷಣಾ ನೆಲೆಗಳನ್ನು ಗುರಿಯಾಗಿಸಿ ಪಾಕ್ ಸೇನಾ ಪಡೆಗಳು ದಾಳಿ ನಡೆಸಿವೆ. ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಹಾಗೂ ಭಯೋತ್ಪಾದಕರ ಅಡಗು ತಾಣಗಳಾಗಿ ರಕ್ಷಣಾ ನೆಲೆಗಳನ್ನು ಬಳಸಲಾಗುತ್ತಿತ್ತು’ ಎಂದೂ ತಿಳಿಸಿವೆ.

ಇಂಥ 50ಕ್ಕೂ ಅಧಿಕ ಸ್ಥಳಗಳ ವಿರುದ್ಧ ದಾಳಿ ನಡೆಸಲಾಗಿದೆ. ಟ್ಯಾಂಕರ್ ನಾಶಪಡಿಸುವ ಕ್ಷಿಪಣಿಗಳು, ರಾಕೆಟ್ ಲಾಂಚರ್ಗಳು, ಡ್ರೋನ್ಗಳು ಹಾಗೂ ದೀರ್ಘ ಶ್ರೇಣಿಯ ಮೋರ್ಟಾರ್ಗಳನ್ನೂ ದಾಳಿಗೆ ಬಳಸಿಕೊಳ್ಳಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ 2,611 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿದ್ದು, ಇದನ್ನು ಡುರಾಂಡ್ ಲೇನ್ ಎಂದು ಕರೆಯಲಾಗುತ್ತದೆ. ಕಳೆದ ಕೆಲ ದಿನಗಳಿಂದ ಈ ಗಡಿ ಉದ್ದಕ್ಕೂ ಪಾಕಿಸ್ತಾನ ನಿಯೋಜನೆ ಮಾಡಿದ್ದ ಯೋಧರನ್ನು ಗುರಿಯಾಗಿಸಿ ಅಫ್ಗಾನಿಸ್ತಾನ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕ್ ‘ಗಜಬ್ ಲಿಲ್ ಹಕ್’ ಕಾರ್ಯಾಚರಣೆ ಆರಂಭಿಸಿತ್ತು.

ಇದಲ್ಲದೇ, ಭಯೋತ್ಪಾದಕ ಸಂಘಟನೆಗಳಾದ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಸಾನ್ಗೆ ಅಫ್ಗಾನ್ ತಾಲಿಬಾನ್ ಬೆಂಬಲ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಲೇ ಇದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯವೂ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗೆ ತಾಲಿಬಾನ್ ಕುಮ್ಕಕ್ಕು ನೀಡುತ್ತಿದೆ ಎಂದು ಆರೋಪಿಸಿ, ಅಫ್ಗಾನ್ ವಿರುದ್ಧ ದಾಳಿ ನಡೆಸುತ್ತಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.